ಕಾಸರಗೋಡು ಎಸ್.ಪಿ.ಯಾಗಿ ಕನ್ನಡಿಗ ಡಾ.ಎ.ಶ್ರೀನಿವಾಸ್
ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ(ಎಸ್.ಪಿ) ಕೆ.ಜಿ.ಸೈಮನ್ ಅವರನ್ನು ವಗರ್ಾಯಿಸಿ ಅಡೂರಿನ ಸಶಸ್ತ್ರ ಪೊಲೀಸ್ ಪಡೆಯ ಕಮಾಂಡರ್ ಆಗಿ ನೇಮಿಸಲಾಗಿದೆ.
ಕಾಸರಗೋಡಿಗೆ ನೂತನ ಎಸ್.ಪಿ.ಯಾಗಿ ಈ ಹಿಂದೆ ಕಾಸರಗೋಡಿನಲ್ಲಿ ಎಸ್.ಪಿ.ಯಾಗಿ ಸೇವೆ ಸಲ್ಲಿಸಿದ್ದ ಕನ್ನಡಿಗ ಡಾ.ಎ.ಶ್ರೀನಿವಾಸ್ ಅವರನ್ನು ಮತ್ತೆ ನೇಮಿಸಲಾಗಿದೆ. ಕೆ.ಜಿ.ಸೈಮನ್ 2017 ಜನವರಿ 9 ರಂದು ಕಾಸರಗೋಡು ಎಸ್.ಪಿ.ಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಡಾ.ಎ.ಶ್ರೀನಿವಾಸ್ ಜಿಲ್ಲೆಯಲ್ಲಿ ಎಸ್.ಪಿ.ಯಾಗಿ ಸೇವೆ ಸಲ್ಲಿಸುತ್ತಿರುವುದು ದ್ವಿತೀಯ ಬಾರಿಯಾಗಿದೆ. 2015 ಫೆಬ್ರವರಿ 24 ರಿಂದ 2016 ಜೂನ್ 14 ರ ತನಕ ಅವರು ಕಾಸರಗೋಡು ಎಸ್.ಪಿ.ಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರನ್ನು ಕಣ್ಣೂರು ಕ್ರೈಂಬ್ರಾಂಚ್ ಎಸ್.ಪಿ.ಯಾಗಿ ವಗರ್ಾಯಿಸಲಾಗಿತ್ತು. ಮೂಲತಃ ಶಿವಮೊಗ್ಗ ನಿವಾಸಿಯಾದ ಡಾ.ಎ.ಶ್ರೀನಿವಾಸ್ ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಕೇರಳ ಕೆಡರ್ ಐಪಿಎಸ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು.