HEALTH TIPS

No title

                       ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್
             ಬಜೆಟ್ ಹಂಚಿಕೆ ಶೀಘ್ರ ಮಂಜೂರು : ಸಮಿತಿ ಸಭೆ ಆಗ್ರಹ
      ಕಾಸರಗೋಡು: ಕಾಸರಗೋಡು ಜಿಲ್ಲಾ ಅಭಿವೃದ್ಧಿ ಪ್ಯಾಕೇಜ್ಗಾಗಿ ಕಳೆದ ಮುಂಗಡಪತ್ರದಲ್ಲಿ  ಮೀಸಲಿರಿಸಿದ ಮೊತ್ತವನ್ನು  ಶೀಘ್ರದಲ್ಲಿ  ಮಂಜೂರುಗೊಳಿಸುವಂತೆ ಜಿಲ್ಲಾ  ಅಭಿವೃದ್ಧಿ ಸಮಿತಿ ಸಭೆಯು ಕೇರಳ ಸರಕಾರವನ್ನು  ಒತ್ತಾಯಿಸಿದೆ.
   2017-18ನೇ ಆಥರ್ಿಕ ವರ್ಷದಲ್ಲಿ  90 ಕೋಟಿ ರೂ. ಮೊತ್ತವನ್ನು  ಮೀಸಲಿರಿಸಿದ್ದು, ಇದರಲ್ಲಿ  35.27 ಕೋಟಿ ರೂ. ಮಾತ್ರ ಈ ವರೆಗೆ ಲಭಿಸಿದೆ. ಉಳಿದ ಮೊತ್ತವನ್ನು  ಶೀಘ್ರವೇ ಒದಗಿಸಿಕೊಡಬೇಕೆಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು  ಮತ್ತು  ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ.ಬಶೀರ್ ಆಗ್ರಹಿಸಿದರು.
    ಕಾಸರಗೋಡು ಅಭಿವೃದ್ಧಿಗೆ ಪೂರಕ ಮತ್ತು  ಮೈಲುಗಲ್ಲಾಗುವ ಪೆರಿಯ ಏರ್ಸ್ಟ್ರೀಪ್ ಯೋಜನೆಯನ್ನು  ಖಾಸಗಿ ಸಹಭಾಗಿತ್ವದಲ್ಲಿ  ಅನುಷ್ಠಾನಗೊಳಿಸುವ ಜಿಲ್ಲಾ  ಪಂಚಾಯತ್ ನಿದರ್ೇಶನವನ್ನು  ಜಿಲ್ಲಾ  ಅಭಿವೃದ್ಧಿ ಸಮಿತಿಯು ಅಂಗೀಕರಿಸಿದೆ. ಉದುಮ ಶಾಸಕ ಕೆ.ಕುಂಞಿರಾಮನ್ ಮತ್ತು  ಜಿ.ಪಂ. ಅಧ್ಯಕ್ಷರು ಜೊತೆಯಾಗಿ ಪ್ರಸ್ತಾಪವನ್ನು  ಅನುಮೋದಿಸಿದರು. ಸಮಿತಿಯ ಈ ಯೋಜನೆಗೆ ಸರಕಾರವು ಅನುಮತಿ ನೀಡುವಂತೆ ಆಗ್ರಹಿಸಲು ತೀಮರ್ಾನಿಸಲಾಯಿತು.
   ರಾಜ್ಯ ಸರಕಾರದ ವಾಷರ್ಿಕೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ  ನಡೆಯುವ ಪ್ರದರ್ಶನ - ಮಾರಾಟ ಮೇಳ, ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಲು ಜಿಲ್ಲಾ  ಅಭಿವೃದ್ಧಿ ಸಮಿತಿಯ ಸಭೆಯು ನಿರ್ಧರಿಸಿದ್ದು, ಜಿಲ್ಲಾ  ವಾತರ್ಾಧಿಕಾರಿ ಇ.ವಿ.ಸುಗತನ್ ಅವರು ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು.
   ಜಿಲ್ಲೆಯ ರಸ್ತೆಗಳ ಬದಿಗಳಲ್ಲಿ  ಸ್ಥಾಪಿಸಿರುವ ಸಿಸಿ ಟಿವಿ ಕ್ಯಾಮರಾಗಳು ಕಾಯರ್ಾಚರಿಸುತ್ತಿವೆಯೇ ಎಂಬುದನ್ನು  ಪರಿಶೀಲಿಸಲು ಸಭೆಯಲ್ಲಿ  ಜಿಲ್ಲಾ  ಪೊಲೀಸ್ ಅಧಿಕಾರಿಗಳಿಗೆ ನಿದರ್ೇಶನ ಕೊಡಲಾಯಿತು. ಕಾಸರಗೋಡು - ಕಾಞಂಗಾಡು ಕೆಎಸ್ಟಿಪಿ ರಸ್ತೆಯಲ್ಲಿ  ವಾಹನ ಅಪಘಾತಗಳಿಗೆ ವಾಹನಗಳ ಅಪಾರ ವೇಗವೇ ಪ್ರಮುಖ ಕಾರಣವಾಗಿದೆ. ವಾಹನಗಳ ಅಪಾರ ವೇಗವನ್ನು  ತಡೆಯಲು ಅತ್ಯಾಧುನಿಕ ಸ್ಪೀಡ್ ಡಿಟೆಕ್ಷನ್ ಕ್ಯಾಮರಾಗಳನ್ನು  ಅಳವಡಿಸಬೇಕು ಎಂದು ಸಾರಿಗೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ನಿಟ್ಟಿನಲ್ಲಿ  ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
   ಕೆಲ್ಟ್ರೋನ್ ಸಂಸ್ಥೆಯ ಸಹಾಯದೊಂದಿಗೆ ಇದಕ್ಕೆ ಬೇಕಾದ ಯೋಜನೆ ತಯಾರಿಸಲು ರಸ್ತೆ  ಸುರಕ್ಷಾ  ಆಯುಕ್ತರಿಗೆ ಜಿಲ್ಲಾ  ಎಸ್ಪಿ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಪ್ರಸ್ತುತ ಮೋಟಾರ್ ವಾಹನ ಇಲಾಖೆಯ ಇಂಟರ್ಸೆಪ್ಟರ್ ವಾಹನ ತಪಾಸಣೆ ನಡೆಯುತ್ತಿದೆ. ಜಿಲ್ಲೆಯ ರಸ್ತೆ  ತಪಾಸಣೆಗಾಗಿ ಹೊಸದಾಗಿ ಎರಡು ಸುರಕ್ಷಾ  ಸ್ಕ್ವಾಡ್ಗಳನ್ನು  ಮಂಜೂರುಗೊಳಿಸಬೇಕು ಎಂದು ಸಮಿತಿಯು ಸರಕಾರಕ್ಕೆ ಮನವಿ ಸಲ್ಲಿಸಿತ್ತು.
   ಕಾಸರಗೋಡು ಬೀಚ್ ಸಮೀಪದ ಹೊಳೆಯನ್ನು  ಶುಚಿಗೊಳಿಸುವುದಕ್ಕಾಗಿ ತ್ಯಾಜ್ಯಗಳನ್ನು  ತೆರವುಗೊಳಿಸುವ ನಿಟ್ಟಿನಲ್ಲಿ  ನಗರಸಭೆಯು 1.20 ಲಕ್ಷ  ರೂ. ಮೊತ್ತ  ಮಂಜೂರು ಮಾಡಿದೆ. ಆದರೆ ಇಲ್ಲಿ  ಸುಮಾರು 3,500 ಲೋಡ್ ತ್ಯಾಜ್ಯ ಸೇರಿದ ಮರಳು ಇರುವುದಾಗಿ ಸಣ್ಣ  ನೀರಾವರಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಭೆಗೆ ತಿಳಿಸಿದರು.
    ಕಾಸರಗೋಡಿನಲ್ಲಿ  ಜರಗಿದ  ಅವಲೋಕನ ಸಭೆಯಲ್ಲಿ  ಎಡಿಎಂ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು , ಕೆ.ಕುಂಞರಾಮನ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಸಂಘದ ಅಧ್ಯಕ್ಷ  ಎ.ಎ.ಜಲೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ  ಯೋಜನಾಧಿಕಾರಿ ಕೆ.ಎಂ.ಸುರೇಶ್ ಯೋಜನೆಯ ಅವಲೋಕನ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries