HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಸಾದ್ವಿ ಬಾಲಿಕಾ ಸರಸ್ವತಿ ವಿರುದ್ಧ ಕೇಸು: ಸಂಘ ಪರಿವಾರ  ಸಂಘಟನೆಗಳಿಂದ ಖಂಡನೆ
    ಬದಿಯಡ್ಕ: ಹಿಂದೂ  ಸಮಾಜೋತ್ಸವದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣಗೈದಿದ್ದ ಸ್ವಾದ್ವಿ ಬಾಲಿಕಾ ಸರಸ್ವತಿ ವಿರುದ್ಧ ಪ್ರಕರಣ ದಾಖಲಿಸಿದ  ಬದಿಯಡ್ಕ ಪೋಲಿಸರ ಕೃತ್ಯವನ್ನು ವಿಶ್ವಹಿಂದೂ ಪರಿಷತ್ , ಭಜರಂಗದಳ ಸಹಿತ ವಿವಿಧ ಸಂಘಪರಿವಾರ  ಸಂಘಟನೆಗಳು ಖಂಡಿಸಿದೆ. ಜಿಹಾದಿಗಳ ಮಾತಿಗೆ ತಲೆಬಾಗುವ ಪೋಲಿಸರು ಸಂಘ ಪರಿವಾರ ಕಾರ್ಯಕರ್ತರು  ನೀಡಿದ ದೂರಿನ ಮೌನವಹಿಸುತ್ತಿರುವುದಾಗಿ ಆರೋಪಿಸಲಾಗಿದೆ.
  ಸ್ವಾದ್ವಿ ಬಾಲಿಕಾ ಸರಸ್ವತಿಯವರು ಲವ್ ಜಿಹಾದ್ನ ಎದುರಾಗಿ ಜಿಹಾದಿಗಳನ್ನು ಎದುರಿಸಲು ಸಹೋದರಿಯರಿಗೆ ಆಯುಧ ನೀಡಿ ಎಂದವರು ಕರೆ ನೀಡಿದ್ದರು. ಕೇರಳದಲ್ಲಿ ಲವ್ ಜಿಹಾದ್  ನಡೆಯುತ್ತಿಲ್ಲ ಎಂದು ಇಲ್ಲಿನ ಸಿಪಿಎಂ ಸರಕಾರ ಹಾಗೂ ಜಿಹಾದಿಗಳು ಹಲವು ಸಮಯದಿಂದ ಬೊಬ್ಬೆ ಹಾಕುತ್ತಿದ್ದಾರೆ. ಲವ್ ಜಿಹಾದ್ ಇಲ್ಲ ಎಂದು ಹೇಳಿದವರೇ  ಇದೀಗ ಲವ್ ಜಿಹಾದ್ ವಿರುದ್ಧ ಹೇಳಿಕೆ  ನೀಡಿದ ಸ್ವಾದ್ವಿ ವಿರುದ್ಧ ಹರಿಹಾಯಲು ಕಾರಣವೇನು ಎಂಬುದಾಗಿ ಹಿಂದೂ ಕಾರ್ಯಕರ್ತರು ಪ್ರಶ್ನಿಸತೊಡಗಿದ್ದಾರೆ.
  ಹಿಂದೂ ಸಮಾಜೋತ್ಸವದ ಪ್ರಚಾರ ಬೋರ್ಡನ್ನು ಬದಿಯಡ್ಕ ಬಸ್ ನಿಲ್ಧಾಣ ಪರಿಸರದಲ್ಲಿ ಕಿಚ್ಚಿಟ್ಟು  ನಾಶಗೈದ ಘಟನೆ ನಡೆದಿತ್ತು. ಈ ಘಟನೆಯ ಸಿಸಿ,ಟಿವಿ ದೃಶ್ಯವನ್ನು ಪೋಲಿಸರಿಗೆ ನೀಡಲಾಗಿತ್ತು. ಆರೋಪಿಗಳ ಸ್ವಷ್ಟ ಪರಿಚಯಗಳನ್ನು  ವಿಶ್ವಹಿಂದೂ ಕಾರ್ಯಕರ್ತರು ಪೋಲಿಸರಿಗೆ ನೀಡಿದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದ ಪೋಲಿಸರಿಂದ ಶಾಂತಿ ಕಾಪಾಡಲೂ ಸಾಧ್ಯವೇ ಎಂದು ಹಿಂದೂ ಕಾರ್ಯಕರ್ತರ ಪ್ರಶ್ನೆಯಾಗಿದೆ. ಜಿಹಾದಿಗಳ ದೂರಿನ ಹಿಂದೆ ಮುಂದೆ ನೋಡದೆ ದೂರು ದಾಖಲಿಸಲು ಕಾರಣ ಪೋಲಿಸರಿಗೆ ನೀಡುವ ನೋಟಿನ ಕಟ್ಟಿನ ಆಸೆಯಿಂದಾಗಿದೆ. ಸಂಘ ಪರಿವಾರ ಕಾರ್ಯಕರ್ತರು ನಿಖರ ಪುರಾವೆ ತೋರಿಸಿದರೂ ಆರೋಪಿಗಳನ್ನು ಯಾಕೆ ಬಂಧಿಸಲಾಗಿಲ್ಲ ಎಂದು ಪ್ರಶ್ನಿಸಲಾಗಿದೆ.  ಸಮಾಜೋತ್ಸವ ಸುಮಾರು 15ರಷ್ಟು ಫ್ಲೆಕ್ಸ್ ಬೋಡರ್ುಗಳು ನಾಶಪಡಿಸಿದರೂ ಕೇಸು ದಾಖಲಿಸದೇ ಇದೀಗ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದು ಯಾವ ನ್ಯಾಯ ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳ ಪ್ರಶ್ನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries