HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ದೋಷಗಳನ್ನು ತಿದ್ದಿ ಮುನ್ನಡೆಯೋಣ
   ಮಧೂರು: ನಾವು ಸರಿಯಾದ ಹಾದಿಯಲ್ಲಿ  ಸಾಗಿದರೆ ಮಾತ್ರ ಸಮಾಜವೂ ಸರಿಯಾದ ಹಾದಿಯಲ್ಲಿಯೇ ಸಾಗುತ್ತದೆ. ಮತ್ತೊಬ್ಬರ ಲೋಪದೋಷಗಳ ಕುರಿತು ಬೆರಳು ತೋರಿಸುವ ಬದಲು ಎಲ್ಲರೂ ತಮ್ಮಲ್ಲಿರುವ ಲೋಪಗಳನ್ನು  ತಿದ್ದಿಕೊಂಡರೆ ಎಲ್ಲವೂ ಸುಗಮವಾಗುತ್ತದೆ ಎಂದು ಧಾಮರ್ಿಕ ಮುಂದಾಳು ವೀರವೆಂಕಟ ಹಂದೆ ಕಟ್ಟತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
   ಕೂಟ ಮಹಾಜಗತ್ತು  ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ವತಿಯಿಂದ ಮಧೂರು ಸಮೀಪದ ಬನ್ನೂರಿನ ಕೃಷ್ಣ ಕಾರಂತರ ಮನೆಯಲ್ಲಿ ಇತ್ತೀಚೆಗೆ ಜರಗಿದ ಶ್ರೀ ನೃಸಿಂಹ ಜಯಂತಿ ಕಾರ್ಯಕ್ರಮದಲ್ಲಿ  ಅವರು ಭಾಗವಹಿಸಿ ಧಾಮರ್ಿಕ ಭಾಷಣ ಮಾಡಿದರು.
   ಸಮಾರಂಭದಲ್ಲಿ  ಅಂಗಸಂಸ್ಥೆಯ ಅಧ್ಯಕ್ಷ  ಎಸ್.ಎನ್.ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ  ಸಹಾಯಕ ಜಿಲ್ಲಾಧಿಕಾರಿ, ಸಮಾಜ ಸುಧಾರಕ ಬಿ.ಮಾಧವ ಹೊಳ್ಳ, ಪುರೋಹಿತರತ್ನ  ತುಂಗ ಶಂಕರನಾರಾಯಣ ಭಟ್, ತುಂಗ ರವಿಶಂಕರ ಭಟ್ ಮತ್ತಿತರರು ಶುಭಹಾರೈಸಿದರು. ಧಾಮರ್ಿಕ ಸಭೆಗಿಂತ ಮೊದಲು ಶ್ರೀ ವಿಷ್ಣು ಸಹಸ್ರನಾಮ ಪಠನ, ಭಜನಾ ಸಂಕೀರ್ತನೆ, ಶ್ರೀ ದೇವರಿಗೆ ಮಂಗಳಾರತಿ ಮೊದಲಾದ ಕಾರ್ಯಕ್ರಮ ನಡೆಯಿತು.
    ಮೇ 13ರಂದು ಕೂಡ್ಲು  ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ  ಮಹಾಸಭೆ ಜರಗಲಿದ್ದು, ಇದರ ಯಶಸ್ಸಿಗೆ ಎಲ್ಲಾ  ಸಮಾಜ ಬಾಂಧವರು ಸಹಕರಿಸಬೇಕು. ಇದಲ್ಲದೆ ಸಾಲಿಗ್ರಾಮದ ಶ್ರೀ  ಗುರುನರಸಿಂಹ ದೇವಾಲಯದಲ್ಲಿ  ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಅಂಗಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮೇ 7ರಂದು ಸಾಮೂಹಿಕವಾಗಿ ತೆರಳಲಿದ್ದು, ಸಮಾಜ ಬಾಂಧವರೂ ಪಾಲ್ಗೊಳ್ಳುವಂತೆ ವಿನಂತಿಸಲಾಯಿತು.
   ಬಿ.ಕೃಷ್ಣ ಕಾರಂತ ಸ್ವಾಗತಿಸಿ, ಶಂಕರನಾರಾಯಣ ಹೇರಳ ವಂದಿಸಿದರು. ನರಸಿಂಹ ಮಯ್ಯ ಮಧೂರು ಕಾರ್ಯಕ್ರಮ ನಿರೂಪಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries