HEALTH TIPS

No title

                ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಸಾಂಕ್ರಾಮಿಕ ರೋಗ ಭೀತಿ
    ಕಾಸರಗೋಡು: ಸಾಂಕ್ರಾಮಿಕ ರೋಗ ಭೀತಿ ಜಿಲ್ಲೆಯನ್ನು ಕಾಡಲಾರಂಭಿಸಿದೆ. ಅಕಾಲಿಕ ಮಳೆ, ಸೂಕ್ತ ಕಸ ವಿಲೇವಾರಿ ಇಲ್ಲದೆ ತ್ಯಾಜ್ಯ ಹಾಗೂ ಕಲುಷಿತ ನೀರು ಆಯಾಕಟ್ಟು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿರುವುದರಿಂದ ಡೆಂಗ್ಯೂ, ಮಲೇರಿಯಾ ಜ್ವರಗಳಂತಹ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಟ್ಟಿದೆ. ಮಂಜೇಶ್ವರ, ಕಾಸರಗೋಡು, ಕಾಞಂಗಾಡು ಸಹಿತ ವೆಳ್ಳರಿಕುಂಡು ತಾಲೂಕುಗಳಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು, ಈ ವರ್ಷದಲ್ಲಿ ಒಟ್ಟು 133 ಮಂದಿ ಆಸ್ಪತ್ರೆ ದಾಖಲಾಗಿದ್ದಾರೆ. ಜಿಲ್ಲೆಯ ಒಟ್ಟು 41 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 31 ಗ್ರಾ.ಪಂ ಸಹಿತ ಸ್ಥಳೀಯಾಡಳಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದ್ದು, ರಾಜ್ಯ ಆರೋಗ್ಯ ಇಲಾಖೆಯು ಆರೋಗ್ಯ ಮಿಶನ್ ಮತ್ತು ಜಿಲ್ಲಾಧಿಕಾರಿ ಕಚೇರಿ ನೇತೃತ್ವದಲ್ಲಿ ಪರಿಸರ ಶುಚಿತ್ವ ಸಹಿತ ರೋಗ ನಿಯಂತ್ರಣಕ್ಕೆ ಕಾರ್ಯಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತೀಮರ್ಾನಿಸಿದೆ.
   ಇತ್ತೀಚೆಗೆ ಬಳಾಲ್ ಗ್ರಾ.ಪಂ ವ್ಯಾಪ್ತಿಯ ಮಾಲೋಮ್ ಎಸ್.ಸಿ ಕಾಲನಿ ನಿವಾಸಿ ಮಧು(29) ಡೆಂಘಿ ಬಾಧೆಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಧುವಿನ ಸಾಂಕ್ರಾಮಿಕ ರೋಗ ಪತ್ತೆ ಮಾಡುವಷ್ಟರಲ್ಲಿ ಡೆಂಘಿ ಜ್ವರ ಉಲ್ಬಣಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ, ಕುಟುಂಬದ ಏಕಾಶ್ರಯವಾಗಿದ್ದ ಮಗನನ್ನು ಕಳಕೊಂಡ ತಾಯಿ ಶ್ಯಾಮಲ ಏಕಾಂಗಿಯಾಗಿದ್ದಾರೆ.
ಇತ್ತೀಚೆಗೆ ಸಮೀಪದ ಕಣ್ಣೂರು ಜಿಲ್ಲೆ ಕೊಟ್ಟಿಯೂರು ಗ್ರಾ.ಪಂ ನಿವಾಸಿ 37 ರ ಹರೆಯದ ವ್ಯಕ್ತಿ ಜ್ವರ ಬಾಧೆಗೆ ತುತ್ತಾಗಿ ಮೃತಪಟ್ಟ ಘಟನೆಯು ನಡೆದಿದೆ. ಕಳೆದ ಬಾರಿಗಿಂತ ಪ್ರಸ್ತುತ ವರ್ಷ ಸಾಂಕ್ರಾಮಿಕ ಜ್ವರ ಬಾಧೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯು ಮೂರು ಪಟ್ಟು ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಜಿಲ್ಲೆಯಲ್ಲಿ ಒಟ್ಟು 133 ಡೆಂಗ್ಯೂ ಬಾಧಿತರು
ಜಿಲ್ಲೆಯ 9 ಗ್ರಾ.ಪಂಗಳು ಮತ್ತು ನೀಲೇಶ್ವರ ನಗರಸಭೆಯನ್ನು ಹೊರತುಪಡಿಸಿ 31 ಸ್ಥಳೀಯಾಡಳಿತ ಪ್ರದೇಶಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನನ್ ಇ. ತಿಳಿಸಿದ್ದಾರೆ. 2018 ಜನವರಿಯಿಂದ ಮೇ ತನಕ 605 ಮಂದಿ ಶಂಕಿತ ಡೆಂಗ್ಯೂ ರೋಗಿಗಳ ಬಗ್ಗೆ ವರದಿಯಾಗಿದೆ. ಇದರಲ್ಲಿ 133 ಮಂದಿಗೆ ಡೆಂಗ್ಯೂ ಬಾಧೆಗೆ ತುತ್ತಾಗಿರುವುದನ್ನು ದೃಢಪಡಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ, ಕೆಲ ಮಂದಿ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
    ಬೇಕಿದೆ ಬಿಳಿ ರಕ್ತ ಕಣ ಬೇರ್ಪಡಿಸುವ ಘಟಕ
ಕಾಞಂಗಾಡಿನಲ್ಲಿ ಕಾಯರ್ಾಚರಿಸುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ರಕ್ತಸಾರ (ಸೀರಮ್) ಬೇರ್ಪಡಿಸುವ ಘಟಕ ಕಾಯರ್ಾಚರಿಸದೆ ಇರುವುದರಿಂದ ಡೆಂಗ್ಯೂ ರೋಗ ತಡೆಗೆ ತೊಂದರೆಯಾಗುತ್ತಿದೆ. ಈ ಘಟಕವು ಹಲವು ಸಮಯದಿಂದ ಕಾರ್ಯನಿರ್ವಹಿಸುತ್ತಿಲ್ಲ, ಆಸ್ಪತ್ರೆ ಪೂರೈಸಬೇಕಿದ್ದ ಬಿಳಿರಕ್ತಕಣಗಳು ಇಲ್ಲದೆ ಇರುವ ಪರಿಣಾಮ ಡೆಂಗ್ಯೂ ಬಾಧಿತರು ಮಂಗಳೂರಿನ ಆಸ್ಪತ್ರೆಗಳಿಗೆ ದೌಡಾಯಿಸಬೇಕಿದೆ ಎನ್ನುತ್ತಾರೆ ಮಡಿಕೈ ಗ್ರಾ.ಪಂ ಅಧ್ಯಕ್ಷ ಸಿ.ಪ್ರಭಾಕರನ್.
      ರೋಗ ಭೀತಿ ಹೆಚ್ಚಳದ ಆತಂಕ:
   ಎಪ್ರಿಲ್ ತಿಂಗಳ ಆರಂಭದಿಂದ ಮೇ ತಿಂಗಳ ಇಲ್ಲಿತನಕ ಒಟ್ಟು 284 ಶಂಕಿತ ಡೆಂಗ್ಯೂ ಸಾಂಕ್ರಾಮಿಕಕ್ಕೆ ಒಳಗಾಗಿದ್ದು, 69 ಮಂದಿಗೆ ಡೆಂಘಿ ಜ್ವರ ಇರುವುದಾಗಿ ದೃಢಪಟ್ಟಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮಂಜೇಶ್ವರ ತಾಲೂಕಿನ ಪೈವಳಿಕೆ-1, ಮಂಗಲ್ಪಾಡಿ-1, ಬದಿಯಡ್ಕ ಗ್ರಾ.ಪಂ ವ್ಯಾಪ್ತಿಯಲ್ಲಿ-4, ಎಣ್ಮಕಜೆಯಲ್ಲಿ-3, ಕುಂಬಳೆ-1 ಮಂದಿ ಡೆಂಘಿ ಬಾಧೆಗೆ ತುತ್ತಾಗಿದ್ದಾರೆ. ಕಾಸರಗೋಡು ನಗರಸಭೆ ಸಹಿತ ಮಧೂರು-3, ಕಾರಡ್ಕ-5, ದೇಲಂಪಾಡಿ-5 ಸೇರಿದಂತೆ ಒಟ್ಟು 13 ಮಂದಿ, ಕಾಞಂಗಾಡು ವ್ಯಾಪ್ತಿಯ ಕುತ್ತಿಕ್ಕೋಲು ಗ್ರಾ.ಪಂನಲ್ಲಿ 10 ಪ್ರಕರಣ, ಮುಳಿಯಾರಿನಲ್ಲಿ 13 ಮಂದಿಗೆ ಡೆಂಗ್ಯೂ ಜ್ವರ ಪತ್ತೆಯಾಗಿದೆ. ಉಳಿದಂತೆ ಬಳಾಲ್-13, ಕೋಡೊಂಬೆಳೂರ್-15, ವೆಸ್ಟ್ ಇಳೇರಿ-11 ಬೇಡಡ್ಕ-6, ಚೆಂಗಳ -4 ಮಂದಿ ಡೆಂಘಿ ಬಾಧೆಗೆ ತುತ್ತಾಗಿದ್ದಾರೆ ಎನ್ನಲಾಗಿದೆ.
    ಹವಾಮಾನ ವಿಪಯರ್ಾಸ ಸಹಿತ ಬಿರು ಬೇಸಗೆಯಲ್ಲಿ ಸೂಕ್ತ ಕಸ ವಿಲೇವಾರಿ ಆಗದೆ ಇರುವುದು ರೋಗ ಭೀತಿಗೆ ಕಾರಣ ಎನ್ನಲಾಗಿದೆ. ಮೇ ಆರಂಭದಲ್ಲಿ ಸುರಿದ ಅಕಾಲಿಕ ಮಳೆಯ ಪರಿಣಾಮ ಆಯಾಕಟ್ಟಿನ ಸ್ಥಳಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಸಂಖ್ಯೆ ವೃದ್ಧಿಯಾಗಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ. ಮಳೆ ಬಂದ ಪರಿಣಾಮ ಅಡಕೆ, ರಬ್ಬರ್ ತೋಟಗಳಲ್ಲಿನ ತೊಟ್ಟಿ ಸೀಸೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರ ಮತ್ತು ಪೇಟೆ ಪ್ರದೇಶದ ಘನ ಮತ್ತು ದ್ರವ ತ್ಯಾಜ್ಯವನ್ನು ಬೇರ್ಪಡಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು, ರಬ್ಬರ್ ತೊಟ್ಟಿ, ಎಸೆಯಲ್ಪಟ್ಟ ಸೀಸೆ ಮತ್ತು ಬಾಟಲಿಗಳಲ್ಲಿ ನೀರು ತುಂಬದಂತೆ ಸೊಳ್ಳೆಗಳು ವೃದ್ಧಿಗೊಳ್ಳದಂತೆ ಜಾಗೃತೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಕುಟುಂಬಶ್ರೀ, ಆರೋಗ್ಯ ಮಿಶನ್, ವಿದ್ಯಾಥರ್ಿ ಸಂಘಟನೆಗಳು ಸಹಿತ ಸ್ಥಳೀಯ ಕ್ಲಬ್ಗಳ ಮೂಲಕ ಆರೋಗ್ಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು, ಫಾಗಿಂಗ್ ಮೊದಲಾದ ಸೂಕ್ತ ಸೊಳ್ಳೆ ನಿಮರ್ೂಲನಾ ತಂತ್ರಗಳ ಮೂಲಕ ಸಾಂಕ್ರಾಮಿಕ ರೋಗ ತಡೆಗೆ ಸೂಕ್ತ ಮುಂಜಾಗ್ರತೆ ವಹಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries