HEALTH TIPS

No title

             ನವೀಕೃತ ಮಸರ್ಿ ಅಮ್ಮನವರ ದೇವಾಲಯ ಉದ್ಘಾಟನೆ
     ಮಂಜೇಶ್ವರ: ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ನಾಲ್ಕು ನೂರು ವರ್ಷಗಳ ಪುರಾತನವಾದ ಮಂಜೇಶ್ವರ ಹೊಸಬೆಟ್ಟಿನಲ್ಲಿರುವ ಮಸರ್ಿ ಅಮ್ಮನವರ ದೇವಾಲಯ (ಅವರ್ ಲೇಡಿ ಆಫ್ ಮಸರ್ಿ ಚಚರ್್) ಮೇ 22 ರಂದು ಬೆಳಿಗ್ಗೆ 9.30 ಕ್ಕೆ ಉದ್ಘಾಟನೆ ಜರಗಲಿದೆ ಎಂದು ಚಚರ್್ನ ಧರ್ಮ ಗುರು ವೆಲೇರಿಯನ್ ಲೂಯಿಸ್ ತಿಳಿಸಿದ್ದಾರೆ.
   ನೂತನ ಚಚರ್್ ಮಂಗಳೂರು ಬಿಷಪ್ ವಂದನೀಯ ಗುರು ಡಾ.ಅಲೋಶಿಯಸ್ ಪೌಲ್ ಡಿ'ಸೋಜ ಉದ್ಘಾಟಿಸುವರು. ಮಸರ್ಿ ಚಚರ್್ನ ಚಪ್ಪರವನ್ನು ಗುಲ್ಬರ್ಗ ಬಿಷಪ್ ವಂದನೀಯ ಗುರು ಡಾ. ರೋಬಟರ್್ ಮಿರಾಂಡ ಉದ್ಘಾಟಿಸುವರು.
    ಮೇ 20 ರಂದು ಚಚರ್್ ಉದ್ಘಾಟನೆ ಪ್ರಯುಕ್ತ ಪೂರ್ವಭಾವಿಯಾಗಿ ಸಂಜೆ 3 ಗಂಟೆಗೆ ಹೊಸಂಗಡಿಯಿಂದ ಹಾಗೂ ತೂಮಿನಾಡಿನಿಂದ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
   ಬಳಿಕ 4 ಗಂಟೆಗೆ ದ್ವಾರ ಮತ್ತು ಬಾಲಯೇಸು ಮಂಟಪ ಆಶೀರ್ವಚನವನ್ನು ಡೆನಿಸ್ ಮೋರಸ್ ಪ್ರಭು ನಿರ್ವಹಿಸಲಿದ್ದಾರೆ. ಬಳಿಕ ಧಾಮರ್ಿಕ ಸೌಹಾರ್ದ ಕೂಟ ನಡೆಯಲಿದೆ.
   ಮೇ 21 ರಂದು ಲೂದರ್್ ಮಾತೆಯ ಗವಿ ಆಶೀರ್ವಚನವನ್ನು ಮಂಗಳ ಜ್ಯೋತ ನಿದರ್ೇಶಕ ವಿಜಯ್ ಮಚಾಡೋ ನಿರ್ವಹಿಸಲಿದ್ದಾರೆ.
   ಮಂಜೇಶ್ವರದಲ್ಲಿರುವ ಹೊಸಬೆಟ್ಟು ಚಚರ್್ಗೆ ನಾಲ್ಕು ನೂರು ವರ್ಷಗಳ ಇತಿಹಾಸವಿದ್ದು 1759 ರಲ್ಲಿ ಇದು ಸ್ಥಾಪನಗೊಂಡಿದೆ. ಬಳಿಕ 1919 ರಲ್ಲಿ ಈ ಚಚರ್್ ಸ್ವತಂತ್ರವಾಗಿದ್ದು, ಇದೀಗ ಮೂರನೇ ಶತಮನೋತ್ಸವದ ಸಿದ್ದತೆಯಲ್ಲಿದೆ. ಈಗಾಗಲೇ ಈ ಚಚರ್್ನಲ್ಲಿ 21 ಧರ್ಮಗುರುಗಳು ಸೇವೆಯನ್ನು ಸಲ್ಲಿಸಿದ್ದಾರೆ ಹಾಗೂ ಅತಿ ವಿಸ್ತಾರವಾಗಿ ಕಟ್ಟಲಾಗಿರುವ ಚಚರ್್ನಲ್ಲಿ ಸುಮಾರು 600 ಮಂದಿ ಏಕಕಾಲದಲ್ಲಿ ಪ್ರಾರ್ಥಣೆ ಮಾಡಲು ಅವಕಾಶವಿದೆ. ಈ ಚಚರ್್ನ ಅಧೀನದಲ್ಲಿ ಕಳೆದ 20 ವರ್ಷಗಳಿಂದ ಸಮೀಪದಲ್ಲೇ ವಿದ್ಯಾಸಂಸ್ಥೆ ಕೂಡಾ ಕಾಯರ್ಾಚರಿಸುತ್ತಾ ಬರುತ್ತಿದೆ ಎಂಬುದಾಗಿ  ಚಚರ್್ ಧರ್ಮಗುರುಗಳಾದ ವೆಲೇರಿಯಲ್ ಲೂಯಿಸ್  ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries