HEALTH TIPS

No title

              ಪಗ್ಗು ಪದಿನೆಣ್ಮ ತುಳುವರಿಗೆ ಭರವಸೆಯ ದಿನ - ಡಾ.ಸುನೀತಾ ಶೆಟ್ಟಿ
   ಬದಿಯಡ್ಕ: ಸಿರಿ ಮಹಾಕಾವ್ಯ ವಿಶ್ವದ ಯಾವುದೇ ಮಹಾಕಾವ್ಯಗಳಿಗೆ ಹೋಲಿಸಿದರೆ ಒಂದು ಹೆಜ್ಜೆ ಮುಂದೆ ನಿಲ್ಲುತ್ತದೆ.  ಮಾತೃ ಪ್ರಧಾನವಾದ ತುಳುವ ಸಂಸ್ಕೃತಿ ಮತ್ತು ಜೀವನ ಪದ್ಧತಿಗಳನ್ನು ಇದರಲ್ಲಿ ಅನಾವರಣಗೊಳಿಸಲಾಗಿದೆ ಎಂದು ಡಾ. ಸುನೀತಾ ಶೆಟ್ಟಿ ಅಭಿಪ್ರಾಯಪಟ್ಟರು.
   ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಮತ್ತು ತುಳುವೆರೆ ಆಯನೊ ಕೂಟ ಇದರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮಂಗಳವಾರ ನಡೆದ ಪಗ್ಗು ಪದಿನೆಣ್ಮ-ಸಿರಿದಿನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಭತ್ತ ಮತ್ತು ಹುರುಳಿ ಬಿತ್ತಿ ಉದ್ಘಾಟಿಸಿ, ತುಳುವೆರೆ ಆಯನೊ ಕೊಡಮಾಡುವ ತುಳುರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
   ಪಗ್ಗು ಪದಿನೆಣ್ಮದಂದು ತುಳುವರಾದ ನಾವು ಬೀಜ ಬಿತ್ತುವ ಸಮಯ. ಬೀಜ ಚಿಗುರಿ ಮುಂದೆ ಸಮೃದ್ಧಿಯ ಫಸಲು ಲಭಿಸಬಹುದೆಂಬ ವಿಶ್ವಾಸದಿಂದ ಬಿತ್ತುತ್ತೇವೆ, ಅದುದರಿಂದ ಪಗ್ಗು ಪದಿನೆಣ್ಮ ತುಳುವರಿಗೆ ಭರವಸೆಯದಿನವಾಗಿದೆ. ಪಗ್ಗು ಪದಿನೆಣ್ಮದಂದು ಸಿರಿಯನ್ನು ಹೃದಯದೊಳಗೆ ಬಿತ್ತುವುದು ಔಚಿತ್ಯ ಪೂರ್ಣವಾಗಿದೆ ಎಂದು ಅವರು ತಿಳಿಸಿದರು.
   ಸಮಾರಂಭದಲ್ಲಿ ಸಿರಿ ಪಾಡ್ದನವನ್ನು ಉಳಿಸಿದ ಕಗರ್ಿ ಶೆಡ್ತಿ ಮತ್ತು ಲೀಲಾ ಶೆಡ್ತಿಯವರನ್ನು ಸನ್ಮಾನಿಸಲಾಯಿತು. ವಿಧಿಯ ಕ್ರೂರತೆ ಮತ್ತು ಸಮಾಜದ ಕಟ್ಟುಪಾಡುಗಳನ್ನು ಮೀರಿ ಸಾಧನೆಗೈದ ಏಳು ಜನ ಮಹಿಳೆಯರಿಗೆ ಏಳ್ವೆರ್ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ವೈದ್ಯೆಯಾಗಿ ಸಮಾಜ ಸೇವಕಿಯಾಗಿರುವ ಡಾ. ರತಿದೇವಿ, ಸ್ಮಶಾನದಲ್ಲಿ ಶವ ಸಂಸ್ಕಾರ ಕರ್ತವ್ಯ ನಿರ್ವಹಿಸುವ ವನಜ, ಮಾಧ್ಯಮ ಉದ್ಧಿಮೆದಾರರಾದ ವೈಲೆಟ್ ಪಿರೇರಾ, ಮಹಿಳಾ ಸಬಲೀಕರಣ ಹೋರಾಟಗಾತರ್ಿ ಕೈರುನ್ನಿಸ ಸೈಯದ್, ಆಂಬ್ಯುಲೆನ್ಸ್ ಚಾಲಕಿ ಮತ್ತು ಮಾಲಕಿಯಾದ ಸಿ.ಎಸ್. ರಾಧಿಕ, ಆಂಗವೈಕಲ್ಯತೆಯಿದ್ದರೂ ಅದನ್ನು ಮೀರಿ ಚಿತ್ರಕಲೆಯಲ್ಲಿ ಸಾಧನೆಗೈದ ಕು. ಸುಧಾರತ್ನ, ಅಂಧ ಕಲಾವಿದೆಯಾದರೂ ಸಂಗೀತ ಕ್ಷೇತ್ರದಲ್ಲಿ ಸಾಧನೆಮಾಡಿದ ಕು. ಕಸ್ತೂರಿ ಇವರಿಗೆ ಏಳ್ವೆರ್ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಮುಖ ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಡಾ. ಚಿನ್ನಪ್ಪ ಗೌಡ ಮಾತನಾಡಿ ಪಗ್ಗು ಪದಿನೆಣ್ಮ ವಿಷುದಿನದಂದು ಅಂದರೆ ಪಗ್ಗು ಒಂದರಿಂದ ಪ್ರಾರಂಭವಾಗುವ ಪ್ರಕ್ರಿಯೆ (ವಿಷುದಿನತಾನಿ ನಾಲೆರು ಮಾದಾದ್ ಪಗ್ಗು ಪದಿನೆಣ್ಮಗ್ ಕೈಬಿತ್ತ್ ಪಾಡುನೆ) ಪಗ್ಗು ಒಂದು ವಿಷುದಿನದಂದು ಗದ್ದೆಯನ್ನು ಉತ್ತು  ಪಗ್ಗು ಹದಿನೆಂಟರಂದು ಕೈಯಿಂದ ಬೀಜವನ್ನು ಎಸೆದು ಬಿತ್ತುವುದು ಪ್ರಮುಖವಾಗಿದೆ. ಸಿರಿಯ ಚರಿತ್ರೆಯು ಮೂರು ತಲೆಮಾರುಗಳನ್ನು ಹೊಂದಿದೆ. ಸಿರಿ, ಸೊನ್ನೆ-ಗಿಂಡೆ ಮತ್ತು ಅಬ್ಬಗ-ಧಾರಗ ಈ ಮೂರು ತಲೆಮಾರುಗಳ ವಿಭಿನ್ನ ಸಾಮಾಜಿಕ ಜೀವನ ರೀತಿಗಳನ್ನು ಪ್ರತಿಬಿಂಬಿಸುತ್ತಿದೆ. 2500 ಕ್ಕಿಂತಲೂ ಹೆಚ್ಚು ಸಾಲುಗಳಿರುವ ಸಿರಿ ಮಹಾಕಾವ್ಯ ಅಸಾಧಾರಣವಾಗಿದೆ ಎಂದರು. ಇಂದು ಏಳುಜನ ಮಹಿಳೆಯರಿಗೆ ಏಳ್ವೆರ್ ಸಿರಿ ಪ್ರಶಸ್ತಿ ನೀಡಿದ್ದು ಅವರ ಜೀವನ ಹೋರಾಟಗಳಿಗೆ  ದೊರೆತ ಮನ್ನಣೆ ಇದನ್ನು ತುಳುರಾಜ್ಯ ಪ್ರಶಸ್ತಿಯಾಗಿ ಪರಿಗಣಿಸಬಹುದು ಎಂದರು.
    ಸಭೆಯ ಅಧ್ಯಕ್ಷತೆವಹಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಮಾತನಾಡಿ ಅಳಿದು ಹೋಗುತ್ತಿರುವ ಪಗ್ಗುಪದಿನೆಣ್ಮದಂತ ತುಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಅದ್ಯ ಕರ್ತವ್ಯವಾಗಿದೆ. ಪಗ್ಗುಪದಿನೆಣ್ಮ ತುಳುವರಿಗೆ ಒಂದು ರೀತಿಯಲ್ಲಿ ಸಮೃದ್ಧಿಯ ದಿನವಾದುದರಿಂದ ಪಗ್ಗುಪದಿನೆಣ್ಮವನ್ನು ಸಿರಿದಿನವೆಂದು ಆಚರಿಸುತ್ತಿರುವುದು  ಅಭಿನಂದನಾರ್ಹವಾಗಿದೆ ಮತ್ತು ಇದನ್ನು ವಿಶ್ವವ್ಯಾಪಿಗೊಳಿಸಬೇಕೆಂದರು.
    ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪಧರ್ೆಗಳನ್ನು ಆಯೋಜಿಸಲಾಯಿತು. ತೀಪರ್ುಗಾರರಾಗಿ ಡಾ. ಆಶೋಕ ಆಳ್ವ, ಡಾ. ಕಿಶೋರ್ ಕುಮಾರ್ ರೈ ಶೇಣಿ, ಡಾ. ಜ್ಯೋತಿ ರೈ ಭಾಗವಹಿಸಿದರು. ಸ್ಪಧರ್ೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಿರಿ ರಸ ಪ್ರಶ್ನೆ ವಿಭಾಗದಲ್ಲಿ ಪ್ರಥಮ ರೂಪಾ ಶೋದನ್ ಶೆಟ್ಟಿ, ದ್ವಿತಿಯ ಸುಹಾಸ್ ಹೆಗಡೆ ನಂದಳಿಕೆ, ಛದ್ಮವೇಶ -ಏಕಪಾತ್ರ ಆಭಿನಯದಲ್ಲಿ ಮಕ್ಕಳ ವಿಭಾದಲ್ಲಿ ತಕ್ಷಿಲ್ ದೇವಾಡಿಗ, ಯುವಕರ ವಿಭಾಗದಲ್ಲಿ ಪ್ರಜ್ಞಾ ಭಂಡಾರಿ, ಹಿರಿಯರ ವಿಭಾಗದಲ್ಲಿ ಮಲ್ಲಿಕ ಭಂಡಾರಿ ಮತ್ತು ವೀಣಾ ಶೆಟ್ಟಿ ಪ್ರಶಸ್ತಿಗಳನ್ನು ಪಡೆದರು. ಪಾಡ್ಧನ ಸ್ಪಧರ್ೆಯಲ್ಲಿ ಮುತ್ತು ಶೆಟ್ಟಿ ಪ್ರಥಮ ಹಾಗು ಅಶ್ವಿನ್ ಶೆಟ್ಟಿ ಧ್ವಿತಿಯ ಸ್ಥಾನ ಪಡೆದುಕೊಂಡರು. ದೇಶಿ ಉತ್ಥಾನ ಸಾವಯವ ರೈತ ಬಂಧು ಟ್ರಸ್ಟ್ ಮತ್ತು ಆರೋಗ್ಯ ಭಾರತಿ, ಮಂಗಳೂರು ಇವರಿಂದ ಸಿರಿಧಾನ್ಯಗಳ ಪ್ರದರ್ಶನ, ಸಿರಿಧಾನ್ಯ ಆಹಾರ ಉತ್ಪನ್ನಗಳ ಮಾರಾಟ ಹಾಗೂ ಪ್ರಾತ್ಯಕ್ಷಿಕೆಗಳು ಸಂಪನ್ನಗೊಂಡವು. ತುಳುನಾಡ ಶೈಲಿಯ ಲಘು ಉಪಹಾರ ಮತ್ತು ಸಾವಯವ ಪಾನೀಯಗಳು ಅಹ್ಲಾದವೆನಿಸಿದವು.
   ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮತ್ತು ಕವಿತಾ ಪಕಳ ಕಾರ್ಯಕ್ರಮ ನಿರ್ವಹಣೆ ಮಾಡಿದರು. ತುಳುವೆರೆ ಆಯನೊ ಕೂಟದ ಅಧ್ಯಕ್ಷ ಡಾ. ರಾಜೇಶ ಆಳ್ವ ಬದಿಯಡ್ಕ ವಂದಿಸಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries