HEALTH TIPS

No title

            ಟೆಲಿಕಾಂ ಮಾರುಕಟ್ಟೆಯನ್ನು ದಿಗ್ಭ್ರಮೆಗೊಳಿಸಿದ ಜಿಯೋ ಪ್ಲಾನ್: ರೂ. 101ಕ್ಕೆ ನಿತ್ಯ 2ಜಿಬಿ  ಡೇಟಾ..!
  ದೆಹಲಿ: ಈಗಾಗಲೇ ಸ್ಮಾಟರ್್ಫೋನಿನಲ್ಲಿ ಐಪಿಎಲ್ ನೋಡುವವಂತೆ ಮಾಡಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಇದಕ್ಕಾಗಿಯೇ ಬೆಸ್ಟ್ ಡೇಟಾ ಪ್ಲಾನ್ ಅನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಆಫರ್ ಅನ್ನು ಲಾಂಚ್ ಮಾಡಿ ಟೆಲಿಕಾಂ ಕಂಪನಿಗಳು ತಿರುಗಿ ನೋಡುವಂತೆ ಮಾಡಿತ್ತು. ಇದೇ ಮಾದರಿಯಲ್ಲಿ ಬೆಸ್ಟ್ ಡೇಟಾ ಪ್ಲಾನ್ ವೊಂದನ್ನು ನೀಡಲು ಮುಂದಾಗಿದ್ದು, ರೂ. 101ಕ್ಕೆ ನಿತ್ಯ 2ಜಿಬಿ ಡೇಟಾವನ್ನು ನೀಡುವ ಆಫರ್ ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಬಾರಿಯ ಐಪಿಎಲ್ ಕಳೆಕಟ್ಟಲು ಜಿಯೋ ಸಹ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ.
  ಜಿಯೋ ನೀಡಿದ ಆಫರ್ ಗಳ ಮೂಲಕವೇ ಎಷ್ಟೋ ಮಂದಿ ತಮ್ಮ ಸ್ಮಾಟರ್್ಫೋನ್ಗಳಲ್ಲಿ ಕ್ರಿಕೆಟ್ ನೋಡುವುದಲ್ಲದೇ ಅದರೊಂದಿಗೆ ಹಲವು ಗೇಮ್ ಗಳನ್ನು ಆಡುವ ಮೂಲಕ ಬಹುಮಾನಗಳನ್ನು ಪಡೆದುಕೊಂಡರು. ಅಲ್ಲದೇ ಇದರೊಂದಿಗೆ ಮನರಂಜನೆಯನ್ನು ನೀಡುವ ಸಲುವಾಗಿ ಜಿಯೋ ಧನ್ ಧನಾ ಧನ್ ಶೋ ವನ್ನು ಸಹ ನೀಡಿತ್ತು. ಈಗ ಇದೇ ಮಾದರಿಯಲ್ಲಿ ಕಾಮ್ಪಪ್ಲಿಮೆಂಟ್ರಿ ಆಫರ್ ವೊಂದನ್ನು ಘೋಷಣೆ ಮಾಡಿದೆ.
     ಕ್ರಿಕೆಟ್ ಟೀಸರ್ ಪ್ಯಾಕ್: ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಪಂದ್ಯವನ್ನು ಬಳಕೆದಾರರು ನೋಡಲಿ ಎನ್ನುವ ಒಂದೇ ಕಾರಣಕ್ಕೆ ಜಿಯೋ ಈ ಪ್ಲಾನ್ ಅನ್ನು ಲಾಂಚ್ ಮಾಡಿದ್ದು, 8 ಜಿಬಿ ಹೆಚ್ಚುವರಿ ಡೇಟಾವನ್ನು ನೀಡಲಿದ್ದು, ಬಳಕೆದಾರರಿಗೆ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡಲಿದೆ ಎನ್ನಲಾಗಿದೆ.
   2ಜಿಬಿ  ಡೇಟಾ ನಿತ್ಯ: ರೂ.101 ಪ್ಲಾನ್ ಘೋಷಣೆ ಮಾಡಿರುವ ಜಿಯೋ, ಇದರಲ್ಲಿ ಬಳಕೆದಾರರಿಗೆ ನಿತ್ಯ 2ಜಿಬಿ  ಡೇಟಾವನ್ನು ಬಳಕೆಗೆ ನೀಡಲಿದೆ ಎಂದು ತಿಳಿದುಬಂದಿದೆ.  ಈ ಪ್ಲಾನ್ ಕೇವಲ 4 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 8 ಜಿಬಿ  ಡೇಟಾವನ್ನು ನೀಡಲಿದೆ. ಆದರೆ ಇದರಲ್ಲಿ ಯಾವುದೇ ಕಂಬೋ ಪ್ಯಾಕ್ಗಳು ಲಭ್ಯವಿಲ್ಲ.
   ಅನ್ಲಿಮಿಟೆಡ್ ಡೇಟಾ: ಈ ಪ್ಲಾನ್ನಲ್ಲಿ ಬಳಕೆದಾರರಿಗೆ ಅನ್ಲಿಮಿಟೆಡ್ ದೊರೆಯಲಿದೆ ಎನ್ನಲಾಗಿದೆ. ನಿತ್ಯ 2ಜಿಬಿ  ಡೇಟಾವನ್ನು ಖಾಲಿ ಮಾಡಿದ ನಂತರದಲ್ಲಿ ಬಳಕೆದಾರರಿಗೆ 64 ವೇಗದಲ್ಲಿ ಕಾರ್ಯನಿರ್ವಹಿಸುವ ಡೇಟಾವನ್ನು ಜಿಯೋ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಅನಿಯಮಿತ ಡೇಟಾ ಬಳಕೆಗೆ ದೊರೆಯಲಿದೆ. ಡೇಟಾ ಆಡ್ ಅನ್: ಜಿಯೋ ಘೋಷಣೆ ಮಾಡಿರುವ ಪ್ಲಾನ್ ಡೇಟಾ ಆಡ್ ಆನ್ ಪ್ಲಾನ್ ಆಗಿದ್ದು, ಈಗಾಗಲೇ ನೀವು ರೀಚಾಜರ್್ ಮಾಡಿಸಿಕೊಂಡಿರುವ ಪ್ಲಾನ್ನೊಂದಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.
   ಮೈ ಜಿಯೋ ಆಪ್ನಲ್ಲಿ: ಜಿಯೋ ಘೋಷಣೆ ಮಾಡಿರುವ ರೂ.101 ಡೇಟಾ ಆಡ್ ಆನ್ ಪ್ಲಾನ್ ಮೈ ಜಿಯೋ ಆಪ್ನಲ್ಲಿ ಲಭ್ಯವಿದ್ದು, ಅಲ್ಲಿಯೇ ನೀವು ರೀಚಾಜರ್್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries