ವಿದ್ಯಾಥರ್ಿಗಳಿಗೆ ಉಚಿತ ಸಮವಸ್ತ್ರ ವಿತರಣೆ
ಸಾರ್ವಜನಿಕ ಶಿಕ್ಷಣ ಕ್ಷೇತ್ರ ಬಲಪಡಿಸಲು ಸರಕಾರ ಬದ್ಧ : ಸಚಿವ ಇ.ಚಂದ್ರಶೇಖರನ್
ಕಾಸರಗೋಡು: ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಸರಕಾರ ಬದ್ಧವಾಗಿದೆ. ಸರಕಾರದ ದಿಟ್ಟ ಹೆಜ್ಜೆಯ ಪರಿಣಾಮವಾಗಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಹೆತ್ತವರು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ರಾಜ್ಯ ಸರಕಾರದ ದ್ವಿತೀಯ ವಾಷರ್ಿಕದ ಅಂಗವಾಗಿ ರಾಜ್ಯದಲ್ಲಿ ಒಂದರಿಂದ ಏಳರ ವರೆಗಿನ ವಿದ್ಯಾಥರ್ಿಗಳಿಗೆ ಉಚಿತ ಕೈಮಗ್ಗದ ಸಮವಸ್ತ್ರ ವಿತರಣೆಯನ್ನು ಕಾಸರಗೋಡು ಸರಕಾರಿ ಯು.ಪಿ. ಶಾಲೆಯ ಸಭಾಂಗಣದಲ್ಲಿ ನೆರವೇರಿಸಿ ಸಚಿವರು ಮಾತನಾಡಿದರು.
ರಾಜ್ಯದಲ್ಲಿ ಶಿಕ್ಷಣ ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೇರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸರಕಾರ ಗುರಿಯಿರಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚುತ್ತಿದೆ. ಇದರಿಂದಾಗಿ ಸರಕಾರಿ ಶಾಲೆಗೆ ವಿದ್ಯಾಥರ್ಿಗಳ ಸೇರ್ಪಡೆ ಹೆಚ್ಚುತ್ತಿದೆ ಎಂದರು.
ಕಳೆದ ವರ್ಷ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾಥರ್ಿಗಳಿಗೆ ಮಾತ್ರವೇ ಉಚಿತ ಕೈಮಗ್ಗದ ಸಮವಸ್ತ್ರಗಳನ್ನು ವಿತರಿಸಲಾಗಿತ್ತು. ಈ ಬಾರಿ ಒಂದರಿಂದ ಏಳನೇ ತರಗತಿಯ ವರೆಗೆ ವಿತರಿಸಲಾಗುತ್ತಿದೆ. ಮುಂದಿನ ವರ್ಷ ಎಂಟನೇ ತರಗತಿಯ ವರೆಗಿನ ವಿದ್ಯಾಥರ್ಿಗಳಿಗೆ ಸಮವಸ್ತ್ರ ವಿತರಿಸುವ ಬಗ್ಗೆ ಸರಕಾರ ಚಿಂತಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿದ್ಯಾಭ್ಯಾಸ ಡೆಪ್ಯೂಟಿ ಡೈರೆಕ್ಟರ್ ಗಿರೀಶ್ ಪೋಲ ಮತ್ತು ಶಾಲಾ ವಿದ್ಯಾಥರ್ಿಗಳು ಜೊತೆಯಾಗಿ ಸಮವಸ್ತ್ರವನ್ನು ಸ್ವೀಕರಿಸಿದರು. ಕಾಸರಗೋಡು ನಗರಸಭಾ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಮಿಸ್ರಿಯಾ ಹಮೀದ್ ಅಧ್ಯಕ್ಷತೆ ವಹಿಸಿದರು. ಎಡಿಎಂ ಎನ್.ದೇವಿದಾಸ್ ಮುಖ್ಯ ಭಾಷಣ ಮಾಡಿದರು. ಉಪಜಿಲ್ಲಾ ವಿದ್ಯಾಧಿಕಾರಿ ಎಂ.ನಂದಿಕೇಶನ್, ತೃಕ್ಕರಿಪುರ ಕೈಮಗ್ಗ ಸಹಕಾರಿ ಸಂಘ ಕಾರ್ಯದಶರ್ಿ ಕೆ.ರಘುನಾಥ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರ ಜನರಲ್ ಮೆನೇಜರ್ ಎಂ.ಪಿ.ಅಬ್ದುಲ್ ರಶೀದ್ ಸ್ವಾಗತಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಡೆಪ್ಯೂಟಿ ರಿಜಿಸ್ಟ್ರಾರ್ ಇನ್ಚಾಜರ್್ ಕೆ.ಇ.ಸುರೇಶ್ ಬಾಬು ವಂದಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ 254 ಎಲ್.ಪಿ. ಮತ್ತು 130 ಯು.ಪಿ. ಶಾಲೆಯ ವಿದ್ಯಾಥರ್ಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಗುವುದು. ರಾಜ್ಯದ 3700 ಶಾಲೆಗಳ ನಾಲ್ಕೂವರೆ ಲಕ್ಷ ವಿದ್ಯಾಥರ್ಿಗಳಿಗೆ ಸಮವಸ್ತ್ರ ವಿತರಿಸಲಾಗುವುದು. ಜಿಲ್ಲೆಯಲ್ಲಿ 68,000 ಮೀಟರ್ ಕೈಮಗ್ಗದ ಬಟ್ಟೆಯನ್ನು ವಿವಿಧ ಕೈಮಗ್ಗಗಳಿಂದ ತಯಾರಿಸಿ ವಿತರಿಸಲಾಗುತ್ತಿದೆ.