HEALTH TIPS

No title

            ಎಂಡೋಸಲ್ಫಾನ್ ಕೀಟನಾಶಕ ಸ್ಯಾಂಪಲ್ ತಪಾಸಣೆ ಪೂರ್ಣ
     ಕೊಚ್ಚಿ: ತೋಟಗಾರಿಕಾ ನಿಗಮದ ಗೋದಾಮಿನಲ್ಲಿ ದಾಸ್ತಾನಿಟ್ಟಿದ್ದ ಎಂಡೋಸಲ್ಫಾನ್ ಕೀಟನಾಶಕದ ಸ್ಯಾಂಪಲ್ ತಪಾಸಣೆ ಪೂರ್ಣಗೊಂಡಿದೆ. ಸಾರ್ವಜನಿಕ ವಲಯ ಸಂಸ್ಥೆಯಾದ ಕೊಚ್ಚಿಯ ಹಿಂದೂಸ್ತಾನ್ ಇನ್ಸೆಕ್ಟಿಸೈಟ್(ಎಚ್ಎಎಲ್)ನಲ್ಲಿ ತಪಾಸಣೆ ಪೂರ್ಣಗೊಂಡಿದೆ. ಕೀಟನಾಶಕದಲ್ಲಿರುವ ಎಂಡೋಸಲ್ಫಾನ್ ಅಂಶ ಹಾಗೂ ಸಾಮಥ್ರ್ಯವನ್ನು ಒಳಗೊಂಡ ವರದಿಯನ್ನು ಕಾಸರಗೋಡು ಜಿಲ್ಲಾಧಿಕಾರಿಗೆ ನೀಡಲಾಗುವುದು. ಹೊರಗಿನ ಏಜೆನ್ಸಿಯ ತಪಾಸಣಾ ಫಲಿತಾಂಶವನ್ನು ಪರಿಗಣಿಸಿ ಎಂಡೋಸಲ್ಫಾನ್ ಕೀಟನಾಶಕ ನಿಷ್ಕ್ರಿಯಗೊಳಿಸಲಾಗುವುದು.
   ದಾಸ್ತಾನಿಟ್ಟ ಎಂಡೋಸಲ್ಫಾನ್ ಸ್ಯಾಂಪಲ್ನ್ನು ಎಚ್ಎಎಲ್ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಶೇ. 28ರಿಂದ 32ರಷ್ಟು ಎಂಡೋಸಲ್ಫಾನ್ ಅಂಶ ಪತ್ತೆಯಾಗಿದೆ. ಈ ಹಿಂದೆ ಶೇ. 35 ಎಂಡೋಸಲ್ಫಾನ್ ಅಂಶ ಇತ್ತು. ಉಳಿದದ್ದು ಇತರ ಕೀಟನಾಶಕ ಮಿಶ್ರಣವಾಗಿದೆ. ಎಂಡೋಸಲ್ಫಾನ್ನ್ನು ನಾಶಗೊಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡ್ಥಲಾಗುತ್ತಿದೆ.
   ಎಂಡೋಸಲ್ಫಾನ್ನ್ನು ಕೇರಳದಿಂದ ಹೊರಗೆ ಕೊಂಡೊಯ್ದು ಪ್ರಕೃತಿಗೆ ಮಾರಕವಾಗದಂತೆ ನಿಷ್ಕ್ರಿಯಗೊಳಿಸುವ ಬಗ್ಗೆ ಈ ಹಿಂದೆ ಕೈಗೊಂಡ ತಿಮರ್ಾನ ಫಲಕಂಡಿಲ್ಲ. ಟೆಂಡರ್ ಪ್ರಕ್ರಿಯೆಯೂ ನಡೆಯಲಿಲ್ಲ. ಕೊನೆಗೆ ಕೊಚ್ಚಿಯ ಎಚ್ಎಎಲ್ ಗುತ್ತಿಗೆ ಅಂಗೀಕರಿಸಿತು. ಎಂಡೋಸಲ್ಫಾನ್ನ್ನು ನಾಶಗೊಳಿಸಲು ಅಂಬಲಮುಕ್ಕಲ್ನ ಕೇರಳ ಎನ್ವಿಯೋ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಕೆಇಐಎಲ್) ಒಪ್ಪಿಗೆ ಸೂಚಿಸಿತ್ತು.ಆದರೆ ಜನಾಕ್ರೋಶಕ್ಕೆ ಕಾರಣವಾಗಬಹುದು ಎಂದು ಎನರ್ಾಕುಲಂ ಜಿಲ್ಲಾಡಳಿತ ಇದಕ್ಕೆ ಅಸಮ್ಮತಿ ಸೂಚಿಸಿರುವುದರಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries