ಪ್ರಧಾನಿ ಮೋದಿ ಹೊರಡೋ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡುಗಳು ಪತ್ತೆ, ಆತಂಕ ಸೃಷ್ಟಿ!
ಮಂಗಳೂರು: ಕನರ್ಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಶನಿವಾರ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ವಾಪಸು ತೆರಳುತ್ತಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡುಗಳು ಪತ್ತೆಯಾದ ಘಟನೆ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸುವ ವೇಳೆ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ 65 ವರ್ಷದ ಇಸ್ಮಾಯಿಲ್ ಎಂಬಾತನ ಬ್ಯಾಗ್ ನಲ್ಲಿ ಈ ಬುಲೆಟ್ ಗಳು ಪತ್ತೆಯಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೊರಡುವ ವೇಳೆ ಈ ಬುಲೆಟ್ ಗಳು ಪತ್ತೆಯಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿಮರ್ಾಣವಾಗಿತ್ತು. ವಿಚಾರಣೆ ವೇಳೆ ಇಸ್ಮಾಯಿಲ್ ಪರವಾನಿಗೆ ಹೊಂದಿದ್ದ ಶಸ್ತ್ರ ಹೊಂದಿರುವ ವಿಚಾರ ಬಯಲಾಗಿದೆ. ಅದನ್ನು ಪೊಲೀಸ್ ಠಾಣೆಯಲ್ಲಿ ಸರಂಡರ್ ಮಾಡಿದ್ದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದ್ದು, ತೀವ್ರ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.