ಕೃಷಿ ಸಮುದಾಯ ಬಾನುಲಿ ಶೀಘ್ರ ಆರಂಭ
ಬದಿಯಡ್ಕ: ಕೃಷಿಯ ಆಸಕ್ತಿ ಕುಸಿಯುತ್ತಿರುವುದು ಮತ್ತು ಕೃಷಿ ಭೂಮಿಗಳು ಇಲ್ಲವಾಗುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಕೃಷಿಯತ್ತ ಆಕಷರ್ಿಸುವ ಸಲುವಾಗಿ, ಕೃಷಿಕರನ್ನು ಈ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಪ್ಡೇಟ್ ಮಾಡಿಸುವುದಕ್ಕಾಗಿ ಕೇರಳ ಸರಕಾರ 'ಸಮುದಾಯ ರೇಡಿಯೋ' ಆರಂಭಿಸುವ ಚಿಂತನೆ ನಡೆಸಿದೆ.
ದೇಶದಲ್ಲಿ ಸರಕಾರದ ಉಪಕ್ರಮದಡಿಯಲ್ಲಿ ಕೃಷಿ ವಲಯದೊಂದಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಇದು ಮೊದಲ ಸಮುದಾಯ ರೇಡಿಯೋ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಕೇರಳದ ಮೊದಲ ಕೃಷಿ ಸಮುದಾಯ ರೇಡಿಯೋ ರಾಜ್ಯದ ಭತ್ತದ ಕಣಜ ಎಂದು ಕರೆಯಲಾಗುವ ಆಲಪ್ಪುಯ ಜಿಲ್ಲೆಯ ಕುಟ್ಟನಾಡು ಎಂಬಲ್ಲಿ ಪ್ರಸಾರ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮೇ ತಿಂಗಳ ಎರಡನೇ ವಾರದಲ್ಲಿ ಎರಡರಂಗ ಸರಕಾರದ ದ್ವಿತೀಯ ವಾಷರ್ಿಕೋತ್ಸವದ ಸಂದರ್ಭದಲ್ಲಿ ಪ್ರಸಾರ ಉದ್ಘಾಟನೆ ನಡೆಯಲಿದೆ. ಕುಟ್ಟನಾಡು ಸಮುದ್ರ ಮಟ್ಟಕ್ಕಿಂತ ಕೆಳಗೆ ಕೃಷಿ ಮಾಡುವ ಏಕೈಕ ಭತ್ತ ಬೆಳೆಯುವ ಪ್ರದೇಶವಾಗಿ ಗುರುತಿಸಿಕೊಂಡಿದೆ. ಆದ್ದರಿಂದಲೇ ಕುಟ್ಟನಾಡಿನಲ್ಲಿಯೇ ಮೊದಲ ರೇಡಿಯೋ ಪ್ರಸಾರ ನಡೆಸುವುದು ವಿಶೇಷವಾಗಿದೆ.
ರೇಡಿಯೋ ಪ್ರಸಾರದ ಮೂಲಕ ಕೃಷಿಕರಿಗೆ ಸಹಾಯ ನೀಡುವ ಹವಾಮಾನ ಬದಲಾವಣೆ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕೃಷಿಯ ವಿವಿಧ ಕೃಷಿಗಳ ಬಗ್ಗೆ ಮಾಹಿತಿಯೊಂದಿಗೆ ಎಚ್ಚರ ವಹಿಸಬೇಕಾದ ಅಂಶಗಳು, ಸಲಹೆಗಳು, ಕೃಷಿ ಮಣ್ಣು ತಪಾಸಣೆ, ಗೊಬ್ಬರ, ಬೀಜ ಮುಂತಾದುವುಗಳ ಕುರಿತು ಸಕಾಲದಲ್ಲಿ ರೇಡಿಯೋ ಮೂಲಕ ಮಾಹಿತಿ ನೀಡಲಾಗುವುದು.
ಕುಟ್ಟನಾಡು ಫಾಮರ್್ ರೇಡಿಯೋ ಪ್ರಸಾರದ ಬಳಿಕ ಅದರ ಪರಿಣಾಮದ ಬಗ್ಗೆ ಕೂಲಂಕಷ ಮೌಲ್ಯಮಾಪನ ನಡೆಸಿ ಬಳಿಕ ವಿಶೇಷ ಕೃಷಿ ಪ್ರದೇಶಗಳಲ್ಲಿ ಇಂತಹ ಸಮುದಾಯ ರೇಡಿಯೋ ಪ್ರಸಾರ ಮಾಡಲು ಸರಕಾರ ಯೋಜನೆ ರೂಪಿಸಿದೆ.
ರಾಜ್ಯ ಕೃಷಿ ಇಲಾಖೆಯ ಫಾಮ್ ಇನ್ಫಮರ್ೇಶನ್ ಬ್ಯೂರೋ (ಎಫ್ಐಬಿ) ಅಡಿಯಲ್ಲಿ ಸಮುದಾಯ ರೇಡಿಯೋ ಪ್ರಸಾರ ಮಾಡಲಾಗುವುದು. ಅದಕ್ಕಾಗಿ ರೇಡಿಯೋ ಪ್ರಸಾರ ಕಾರ್ಯಕ್ರಮದ ವಿವರಗಳನ್ನು ನೀಡುವಂತೆ ಕೇರಳ ಕೃಷಿ ಖಾತೆ ಸಚಿವ ವಿ.ಎಸ್. ಸುನಿಲ್ ಕುಮಾರ್ ನಿದರ್ೇಶನ ನೀಡಿದ್ದಾರೆ.
ರೇಡಿಯೋ ಪ್ರಸಾರ ಆರಂಭಿಸುವುದರೊಂದಿಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ರೈತರೊಂದಿಗೆ ನೇರ ಸಂವಹನ ನಡೆಸಲು ಮತ್ತು ಸಂಪರ್ಕ ಕಲ್ಪಿಸುವ ಉತ್ತಮ ವೇದಿಕೆಯಾಗಿ ಈ ಬಾನುಲಿ ಮೂಡಿಬರುವ ಸಾಧ್ಯತೆಗಳಿವೆ.
ದೇಶದಲ್ಲಿಯೇ ಮೊದಲ ಬಾರಿಗೆ ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಯೋಜನ ಕಲ್ಪಿಸುವ ರೀತಿಯಲ್ಲಿ ಸಮುದಾಯ ರೇಡಿಯೋ ಪ್ರಾರಂಭಿಸಲಾಗುವುದು. ಕೃಷಿ ವಲಯಕ್ಕೆ ಸರಕಾರ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಇದರಿಂದ ಸುಲಭ ಸಾಧ್ಯವಾಗುವುದು. ಕೃಷಿಯ ಯಂತ್ರೋಪಕರಣಗಳ ಬಳಕೆ, ಅದರ ಸಬ್ಸಿಡಿ ಮಾಹಿತಿ, ನೂತನ ಯಂತ್ರೋಪಕರಣಗಳ ಪರಿಚಯ, ಸಾವಯವ ಕೃಷಿಯತ್ತ ಕೃಷಿಕರಿಗೆ ಮಾಹಿತಿ, ಕಾಲ ಕಾಲಕ್ಕೆ ಬಳಸುವ ರಸಗೊಬ್ಬರಗಳ ಅಗತ್ಯದ ಮಾಹಿತಿಯನ್ನು ರೇಡಿಯೋ ಮೂಲಕ ನೀಡಲಾಗುವುದು.
ಮೊಬೈಲ್ ಮೂಲಕ ರೇಡಿಯೋ: ಕೇರಳದಲ್ಲಿ ಸಾಕಷ್ಟು ಮಂದಿ ಕೃಷಿಕರು ಹಾಗೂ ಕೃಷಿ ಕಾಮರ್ಿಕರು ಮೊಬೈಲ್ ಫೋನ್ಗಳನ್ನು ಹೊಂದಿದ್ದಾರೆ. ಆಂಡ್ರಾಯ್ಡ್ ಮೊಬೈಲ್ ಮೂಲಕ ಸಮುದಾಯ ರೇಡಿಯೋ ಪ್ರಸಾರವನ್ನು ಆಲಿಸಬಹುದಾಗಿದೆ. ಸಮುದಾಯ ರೇಡಿಯೋ ಮೂಲಕ ಪ್ರಸಾರ ಮಾಡುವ ಕೃಷಿ ಸಂಬಂಧಿತ ವಿಷಯಗಳನ್ನು ಆಲಿಸುವುದಕ್ಕಾಗಿ ರೇಡಿಯೋ ಸೆಟ್ ಹೊಂದಬೇಕಾಗಿರುವುದಿಲ್ಲ. ಬಾನುಲಿ ಲೋಕಾರ್ಪಣೆಗೊಂಡ ಬಳಿಕ ಆಂಡ್ರಾಯ್ಡ್ ಲಿಂಕ್ ಗಳು ಲಭ್ಯವಾಗಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ.