HEALTH TIPS

No title

                  ಸಾಹಿತಿಗಳಿಂದ ಗಡಿನಾಡಿನ ಕನ್ನಡ ಉಳಿದಿದೆ-ಆನೆಮಜಲು ವಿಷ್ಣು ಭಟ್
   ಬದಿಯಡ್ಕ: ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗಳಿಂದ ಭಾಷೆ ಬೆಳೆಯುತ್ತದೆ. ಕಾಸರಗೋಡಿನ ಉದ್ದಗಲ ಹರಡಿಕೊಂಡಿರುವ ಕವಿ, ಸಾಹಿತಿಗಳಿಂದ ಗಡಿನಾಡಿನ ಕನ್ನಡ ಅಸ್ಮಿತೆ ಉಳಿದುಕೊಂಡಿದೆ ಎಂಬುದು ನಿವರ್ಿವಾದ ಎಂದು ಮಲ್ಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
  ಯಕ್ಷಮಿತ್ರ ಸಾಂಸ್ಕೃತಿಕ ಸಂಘ ಮಾನ್ಯ, ಗಡಿನಾಡ ಸಾಹಿತ್ತಿಕ, ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಮಾನ್ಯ ಸಮೀಪದ ಕೊಲ್ಲಂಗಾನದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ರವರ ನಿವಾಸ ಅನಂತಶ್ರೀಯಲ್ಲಿ ಶುಕ್ರವಾರ ರಾತ್ರಿ ನಡೆದ ಪುಸ್ತಕ ಬಿಡುಗಡೆ, ಸನ್ಮಾನ ಹಾಗೂ ಬಹುಭಾಷಾ ಕವಿಗೋಷ್ಠಿ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
   ಸಾಹಿತ್ಯ, ವಿವಿಧ ಸಾಮಾಜಿಕ ವಿಷಯಗಳನ್ನಾಧರಿಸಿದ ಕೃತಿಗಳು ಆಸಕ್ತರನ್ನು ಸೆಳೆದು ಮಾರ್ಗದಶರ್ಿ ವ್ಯಕ್ತಿತ್ವ ನಿಮರ್ಾಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಪ್ರತಿಯೊಬ್ಬನ ವ್ಯತ್ಯಸ್ತ ಅನುಭವಗಳು, ಒಳನೋಟಗಳನ್ನು ಬರಹಗಳ ಮೂಲಕ ತೆರೆದಿಡುವುದು ಸಾಮಾಜಿಕ ಜವಾಬ್ದಾರಿಯಾಗಿ ಪರಿಗಣಿಸಲ್ಪಡಬೇಕು. ಇದರಿಂದ ಮಾರ್ಗದಶರ್ಿತ್ವದೊಂದಿಗೆ ವೈಚಾರಿಕ ಪ್ರಜ್ಞೆಮೂಡಿಸಿ ನೈಜತೆಯ ದರ್ಶನವನ್ನು ಕೃತಿಗಳು ಮೂಡಿಸುತ್ತದೆ ಎಂದು ಅವರು ತಿಳಿಸಿದರು. 
   ಅರ್ತಲೆ ಪರಮೇಶ್ವರ ನಾಯ್ಕ ಬರೆದಿರುವ ಭಜನಾ ಗೀತೆಗಳ ಸಂಗ್ರಹ ದೇವಾಮೃತ ಹಾಗೂ ಯುವ ಕವಿಯಿತ್ರಿ ಶಾಂತಾ ರವಿ ಕುಂಟಿನಿಯವರು ರಚಿಸಿರುವ ಸಮರ್ಪಣೆ ಕವನ ಸಂಕಲನವನ್ನು ಈ ಸಂದರ್ಭ ಆನೆಮಜಲು ವಿಷ್ಣು ಭಟ್ ಬಿಡುಗಡೆಗೊಳಿಸಿದರು.
   ಗಡಿನಾಡ ಸಾಹಿತ್ತಿಕ, ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಖ್ಯಾತ ಚಿತ್ರಕಲಾವಿದ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಚಿತ್ತಾಯ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಯುವ ಸಾಹಿತಿಗಳ ಕೃತಿಗಳು ಪ್ರಕಟಗೊಳ್ಳಬೇಕು. ಜೊತೆಗೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಯಬೇಕು ಎಂದು ತಿಳಿಸಿದರು. ಬುದ್ದಿ-ಮನಸ್ಸುಗಳಿಗೆ ಮನೋರಂಜನೆಯ ಜೊತೆಗೆ ಜೀವನ ಪಾಠಗಳು, ವರ್ತಮಾನದ ವಾತಾವರಣದ ಸ್ಥಿತಿಗತಿಗಳೇ ಮೊದಲಾದವುಗಳಿಂದ ಬದುಕಿಗೆ ಮಾರ್ಗದಶರ್ಿಯಾಗುತ್ತದೆ ಎಂದು ಅವರು ತಿಳಿಸಿದರು.
   ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಮಧುರೈ ಕಾಮರಾಜ ವಿವಿಯ ನಿವೃತ್ತ ಪ್ರಾಧ್ಯಾಪಕ, ಪಂಪಪ್ರಶಸ್ತಿ ವಿಜೇತ ಡಾ.ಹರಿಕೃಷ್ಣ ಭರಣ್ಯ, ಕನರ್ಾಟಕ ಕನ್ನಡ ಜಾಗೃತಿ ಸಮಿತಿ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆಯವರನ್ನು ನಾಡು-ನುಡಿಯ ಸೇವಾ ತತ್ಪರತೆಗಳಿಗಾಗಿ ಅಭಿನಂದಿಸಿ ಗೌರವಿಸಲಾಯಿತು. ಪಾಡಿ ಅರಮನೆಯ ಜಯಸಿಂಹ ವರ್ಮರಾಜ ಅರಸರು ಸನ್ಮಾನಿತರನ್ನು ಗೌರವಿಸಿದರು. ನೂತನ ಕೃತಿಗಳ ಕೃತರ್ೃಗಳಾದ ಅರ್ತಲೆ ಪರಮೇಶ್ವರ ಆಚಾರ್ಯ ಹಾಗೂ ಶಾಂತಾರವಿ ಕುಂಟಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ಸಂಯೋಜನೆಯ ಬಗ್ಗೆ ಮಾತನಾಡಿ, ಯುವ ಪ್ರತಿಭೆಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಸೇವಾ ಕೈಂಕರ್ಯದಲ್ಲಿ ಮುಂದೆಬರಬೇಕೆಂದು ತಿಳಿಸಿದರು.
   ಯಕ್ಷಮಿತ್ರರು ಸಾಂಸ್ಕೃತಿಕ ಸಂಘ ಮಾನ್ಯದ ನಿದರ್ೇಶಕ ಕೃಷ್ಣಮೂತರ್ಿ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಡಿನಾಡ ಸಾಹಿತ್ತಿಕ, ಸಾಂಸ್ಕೃತಿಕ ಅಕಾಡೆಮಿ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries