ಬಾಲಾಲಯ ಪ್ರತಿಷ್ಠೆ ಮತ್ತು ಸುತ್ತು ದಳಿಯ ಅಧಿಷ್ಠಾನದ ಶಿಲಾನ್ಯಾಸ
ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಧಾನ ಗರ್ಭಗುಡಿಯ ನವೀಕರಣದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗರ್ಭಗುಡಿಯ ಮಾಡನ್ನು ಬಿಚ್ಚುವ ಕೆಲಸವು ಭರದಿಂದ ಸಾಗುತ್ತಿದೆ. ಊರ ಹಾಗೂ ಪರವೂರಿನ ಕರಸೇವಕರು ಶ್ರಮದಾನದ ಮೂಲಕ ಕೆಲಸದಲ್ಲಿ ಸಹಕರಿಸುತ್ತಿದ್ದಾರೆ. ನವೀಕರಣದ ಅಂಗವಾಗಿ ಮೇ 10 ರಂದು ಗುರುವಾರ ಬೆಳಗ್ಗೆ 7.24 ರ ವೃಷಭ ಲಗ್ನ ಸುಮೂಹರ್ತತದಲ್ಲಿ ಪ್ರಧಾನ ಗರ್ಭಗುಡಿಯ ಸುತ್ತ ದಳಿಯ ಅಧಿಷ್ಠಾನದ ಶಿಲಾನ್ಯಾಸ ಮತ್ತು ಉಪದೇವತೆಗಳ ಬಾಲಾಲಯ ಪ್ರತಿಷ್ಠೆಯ ಕಾರ್ಯಕ್ರಮವು ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಎಡನೀರು ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ತಮ್ಮ ದಿವ್ಯ ಸಾನಿಧ್ಯವಹಿಸಿ ಗುರುದೇವಾತನುಗ್ರಹ ನೀಡಲಿರುವರು. ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಡಾ.ಡಿ.ಶಿವಪ್ರಸಾದ ತಂತ್ರಿ ಅವರ ತಾಂತ್ರಿಕ ನೇತೃತ್ವದಲ್ಲಿ ಈ ಕಾರ್ಯಕ್ರಮವು ಜರಗಲಿದೆ. ಶಿಲ್ಪಿಗಳಾದ ಎಂ.ಕೆ.ಪ್ರಸಾದ್ ಮುನಿಯಂಗಳ ಅವರು ಸೂಕ್ತ ಮಾರ್ಗದರ್ಶನ ನೀಡಲಿರುವರು. ಈ ಪುಣ್ಯ ಕಾರ್ಯದಲ್ಲಿ ಊರ ಹಾಗೂ ಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರೊಂದಿಗೆ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ನವೀಕರಣ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.