HEALTH TIPS

No title

         ನಾಮಸ,್ಮರಣೆ ಹಾಗೂ ಸೇವಾ ಮನೋಭಾವದಿಂದ ಜೀವನ ಸಾರ್ಥಕ
    ಕುಂಬಳೆ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಪ್ರಧಾನ ಸಂದೇಶವಾದ ಭಗವಂತನ ನಾಮಸ್ಮರಣೆ ಹಾಗೂ ಸೇವಾ ಮನೋಭಾವದಿಂದ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವ ಮೂಲಕ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದು ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಸಿ. ರಾಮಚಂದ್ರ ಐಲ ಅವರು ಅಭಿಪ್ರಾಯಪಟ್ಟರು.
     ಶ್ರೀ ಸತ್ಯಸಾಯಿ  ಸೇವಾ ಸಮಿತಿ ಶಿರಿಯ ಇದರ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಗ್ರಾಮ ಸೇವಾ ಕೇಂದ್ರದ ನೂತನ  ಸಾಯಿ ಮಂದಿರದ ಪ್ರಥಮ ವಾಷರ್ಿಕೋತ್ಸವ ದಿನಾಚರಣೆಯಂಗವಾಗಿ ಭಾನುವಾರ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
  ಭಗವಂತನ ನಾಮಸ್ಮರಣೆಯನ್ನು ಅತ್ಯಂತ ಸರಳವಾಗಿ ಮತ್ತು ಯಾರದೇ ಸಹಾಯಗಳಿಲ್ಲದೆ ಮಾಡಲು ಸಾಧ್ಯ. ಇದು ಭಕ್ತನನ್ನು ಆಪತ್ತಿನಿಂದ ರಕ್ಷಿಸುವುದರ ಜತೆಗೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಹಾಗೆಯೇ ಜೀವನದಲ್ಲಿ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಕೈಲಾದ ಸಹಾಯವನ್ನು ನಿರಂತರ ಮಾಡುತ್ತಲೇಇರಬೇಕು. ನಾಮಸ್ಮರಣೆ ಹಾಗೂ ಸೇವೆಗೆ ಯಾವುದೇ ಹೊತ್ತು ಗೊತ್ತುಗಳ ಎಲ್ಲೆಯಿರದು. ಆದರೆ ಇದು ಸಿದ್ಧಿಸಿದಲ್ಲಿ ಮನುಷ್ಯನನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.
   ಶಿರಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಮಾಜಿ ಸಂಚಾಲಕರಾದ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಶ್ರೀ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಸುಂದರ ಶೆಟ್ಟಿ, ಮಧೂರು ಸಮಿತಿ ಸದಸ್ಯ ರಾಮಚಂದ್ರ ಮಧೂರು ಉಪಸ್ಥಿತರಿದ್ದರು. ಶಿರಿಯ ಸಮಿತಿಯ ಲಕ್ಷ್ಮೀನಾರಾಯಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಐತ್ತಪ್ಪ ನಾಕ್ ಕುಂಬಳೆ ವಂದಿಸಿದರು.
   ಪ್ರಥಮ ವಾಷರ್ಿಕೋತ್ಸವದಂಗವಾಗಿ ಸಾಯಿ ಮಂದಿರದಲ್ಲಿ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಶ್ರೀ ಸತ್ಯಸಾಯಿ ಅಷ್ಟೋತ್ತರ ಪಾರಾಯಣ, ಭಜನಾ ಕಾರ್ಯಕ್ರಮ, ಆಧ್ಯಾತ್ಮಿಕ ಸತ್ಸಂಗ, ಮಂಗಳಾರತಿ ಬಳಿಕ ನಾರಾಯಣ ಸೇವೆ ಜರಗಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries