HEALTH TIPS

No title

                ಕಾಯ್ವವರನ್ನು ಕೈಬಿಡದೆ ಮಾದರಿಯಾದ ವ್ಯಾಪಾರಿಗಳು
        ಮನೀಶಳಿಗೆ ಶಿಕ್ಷಣಕ್ಕೆ ಸಹಾಯ ನೀಡಲು ಮುಳ್ಳೇರಿಯ ವ್ಯಾಪಾರಿ ಸಮಿತಿ ರಂಗಕ್ಕೆ
    ಮುಳ್ಳೇರಿಯ: ನಗರ ರಕ್ಷಕನ ಕುಟುಂಬವನ್ನು ಸಂರಕ್ಷಿಸಿ ಆ ಕುಟುಂಬದ ವಿದ್ಯಾಥರ್ಿನಿಗೆ ಮುಂದಿನ ಕಲಿಕೆಗೆ ಸಹಾಯವಾಗುವ ರೀತಿಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಘಟಕವೊಂದು ಮುಂದೆ ಬಂದಿರುವುದು ಇದೀಗ ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದೆ.
     ವೊಕೇಶನಲ್ ಹೈಯರ್ ಸೆಕೆಂಡರೀ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ನೇಪಾಳಿ ವಿದ್ಯಾಥರ್ಿನಿ ಮನೀಶಳ ಮುಂದಿನ ಶಿಕ್ಷಣದ ಖರ್ಚನ್ನು ಮುಳ್ಳೇರಿಯದ ವ್ಯಾಪಾರಿಗಳು ಭರಿಸಲು ಮುಂದೆಬಂದಿದ್ದಾರೆ.
  ಮುಳ್ಳೇರಿಯ ಜಿವಿಎಚ್ಎಸ್ನ ವಾಣಿಜ್ಯ ವಿಭಾಗದ ವಿದ್ಯಾಥರ್ಿನಿ ಮನೀಶ ಮುಳ್ಳೇರಿಯ ಪೇಟೆಯ ವ್ಯಾಪಾರ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳ ಕಾವಲು ಕೆಲಸ ಮಾಡುತ್ತಿರುವ ದ್ವಾನ್ಬಹದ್ದೂರ್ ಅವರ ಹಿರಿಯ ಮಗಳು. ಇತ್ತೀಚೆಗೆ ಪ್ರಕಟಗೊಂಡ ವಿಎಚ್ಎಚ್ ಪರೀಕ್ಷೆ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲಲ್ಲಿ ಎ ಪ್ಲಸ್ ಪಡೆದ ಜಿಲ್ಲೆಯ ಇಬ್ಬರು ವಿದ್ಯಾಥರ್ಿಗಳಲ್ಲಿ ಮನೀಷ ಕೂಡಾ ಒಬ್ಬಳು. ಮನೀಷಳ ಕುಟುಂಬವು ಕಳೆದ 22 ವರ್ಷಗಳಿಂದ ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಇವರ ಕಷ್ಟವನ್ನು ಅರಿತುಕೊಂಡ ವ್ಯಾಪಾರಿಗಳು ಸಹಾಯ ನೀಡಲು ಮುಂದಾಗಿರುವುದು ಎಲ್ಲೆಡೆ ಪ್ರಶಂಸನೆಗೊಳಗಾಗಿದೆ.
   1996ರಲ್ಲಿ ಕೆಲಸ ಹುಡುಕಿಕೊಂಡು ನೇಪಾಳದ ಬಜಂಗ್ ಜಿಲ್ಲೆಯ ಮನೀಷಳ ತಂದೆ ದ್ವಾನ್ಬಹದ್ದೂರ್ ಮತ್ತು ತಾಯಿ ಸುಜ ಮುಳ್ಳೇರಿಯಕ್ಕೆ ಆಗಮಿಸಿದರು. ಮನೀಷ ಮತ್ತು ನಾಲ್ವರು ಸಹೋದರರು ಜನಿಸಿದುದು, ಶಿಕ್ಷಣ ಪಡೆದುದು ಎಲ್ಲವೂ ಮುಳ್ಳೇರಿಯದಲ್ಲಿಯೇ. ಮನೀಶ ನೇಪಾಳಿ, ಹಿಂದಿ, ಮಲೆಯಾಳ, ಕನ್ನಡ, ತುಳು ಸಹಿತ ಆರು ಭಾಷೆಗಳನ್ನು ಮಾತಾಡಬಲ್ಲಳು. ತಂದೆಯಾದರೋ ನಿಷ್ಠೆಯ ಕಾವಲುಗಾರ. ಮುಳ್ಳೇರಿಯ ಪೇಟೆಯಲ್ಲಿ ನಡೆದ ಬ್ಯಾಂಕ್ ಕಳ್ಳತನ ಮೊದಲಾದ ಹಲವು ಕಳವು ಪ್ರಯತ್ನಗಳನ್ನು ವಿಫಲಗೊಳಿಸಿದ್ದರು. ಮಕ್ಕಳ ಶಿಕ್ಷಣಕ್ಕಾಗಿ ತಂದೆಯ ದುಡಿಮೆಯನ್ನು ಕಂಡು ಹಠಹಿಡಿದು, ತಾಯಿಯೊಂದಿಗೆ ನಿದ್ದೆಯನ್ನು ಬದಿಗಿಟ್ಟು ಕಲಿತುದರ ಫಲವೇ ಮನೀಷಳ ಎಪ್ಲಸ್ ಸಾಧನೆ.
   ಇಷ್ಟು ವರ್ಷಗಳ ಕಾಲ ಮುಳ್ಳೇರಿಯ ಪೇಟೆಯ ವ್ಯಾಪಾರ ಕೇಂದ್ರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾವಲು ಮಾಡಿದುದರ ಪ್ರತಿಫಲವಾಗಿ ಇಲ್ಲಿನ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ದ್ವಾನ್ಬಹದ್ದೂರ್ನ ಮಗಳ ಶಿಕ್ಷಣಕ್ಕೆ ಸಹಾಯ ನೀಡಲು ಮುಂದೆ ಬಂತು. ಹಾಗೆಯೇ ವ್ಯಾಪಾರಿ ನೇತಾರರು ಬೇಂಗತ್ತಡ್ಕದಲ್ಲಿರುವ ಬಾಡಿಗೆ ಮನೆಗೆ ತೆರಳಿ ಕಾಲೇಜು ಫೀಸ್, ಸಮವಸ್ತ್ರ, ಪುಸ್ತಕ ಮೊದಲಾದ ಖರ್ಚನ್ನು ನೀಡುವ ವಾಗ್ದಾನ ನೀಡಿದರು. ಮನೆಯಿಲ್ಲದ ಕೊರತೆಯನ್ನು ದ್ವಾನ್ಬಹದ್ದೂರ್ ವ್ಯಾಪಾರಿಗಳ ಮುಂದಿಟ್ಟು ಇಲ್ಲಿನ ಪೇಟೆಯ ರಕ್ಷಣೆ ಮಾಡಲು ನನಗೆ ಸಾಧ್ಯವಾಗುತ್ತಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನನಗೆ ಮಕ್ಕಳನ್ನು ಸುರಕ್ಷಿತವಾಗಿ ವಾಸಿಸುವಂತೆ ಮಾಡಲು ಸಾಧ್ಯವಾಗಲಿಲ್ಲ ಎಂಬ ದುಖಃವನ್ನು ಕಣ್ಣೀರಿನೊಂದಿಗೆ ವ್ಯಾಪಾರಿಗಳಲ್ಲಿ ಹೇಳಿಕೊಂಡರು. ಸಹೃದಯಿಗಳು ಸ್ಥಳವನ್ನು ನೀಡಿದರೆ ಮನೆಕಟ್ಟಿಕೊಡಲೂ ನಾವು ಸಿದ್ಧ ಎಂದು ವ್ಯಾಪಾರ ನೇತಾರರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
    ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ ಬಿ.ಬಾಲಕೃಷ್ಣ ರೈ, ಕಾರ್ಯದಶರ್ಿ ಗಣೇಶ ವತ್ಸ, ಶಶಿಧರನ್ ಸುಮಂಗಲಿ, ಸುಬ್ರಹ್ಮಣ್ಯ ಭಟ್, ಎಂ.ಪದ್ಮನಾಭನ್, ರಾಜೇಶ್ ಗಾಲಕ್ಸಿ, ಎಂ.ಎಸ್.ಹರಿಪ್ರಸಾದ್ ಮೊದಲಾದವರು ನೇತೃತ್ವ ನೀಡಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries