HEALTH TIPS

No title

               ಸಮಾಜೋತ್ಸವ ಅಭಿನಂದನಾ ಸಭೆ
   ಬದಿಯಡ್ಕ : ಬದಿಯಡ್ಕದಲ್ಲಿ ಯಶಸ್ವಿಯಾಗಿ ಜರಗಿದ ಐತಿಹಾಸಿಕ ಹಿಂದೂ ಸಮಾಜೋತ್ಸವವು ರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿರುವುದು ಕಾರ್ಯಕರ್ತರ ಅವಿರತ ದುಡಿಮೆಯ ಫಲದಿಂದಾಗಿದೆ. ಇನ್ನೊಂದು ಧರ್ಮವನ್ನು ಹೀಯಾಳಿಸದೆ, ಎಲ್ಲ ಧರ್ಮಗಳನ್ನು, ಧಮರ್ೀಯರನ್ನೂ ಗೌರವದಿಂದ ಕಾಣುವ ಹಿಂದೂ ಸಂಸ್ಕೃತಿಗನುಗುಣವಾಗಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳಿಸಲು ಕಾರಣಕರ್ತರಾದ ಕಾರ್ಯಕರ್ತರ ಶ್ರಮ ಶ್ಲಾಘನೀಯವಾಗಿದೆ ಎಂದು ಧಾಮರ್ಿಕ ಮುಂದಾಳು, ಬದಿಯಡ್ಕ ವಿರಾಟ್ ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಅವರು ಕಳೆದ ಎಪ್ರಿಲ್ 27ರಂದು ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ವಿರಾಟ್ ಹಿಂದೂಸಮಾಜೋತ್ಸವದ ಲೆಕ್ಕಪತ್ರಮಂಡನೆ ಮತ್ತು ಕಾರ್ಯಕರ್ತರ ಅಭಿನಂದನಾ ಸಭೆಯನ್ನುದ್ದೇಶಿಸಿ ಭಾನುವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಮಾತನಾಡಿದರು.
  ಈ ಕಾರ್ಯಕ್ರಮವು ಹಿಂದೂ ಸಮಾಜವನ್ನು ಒಂದುಗೂಡಿಸಿ ಮತ್ತಷ್ಟು ಬಲಗೊಳಿಸುವಲ್ಲಿ ಪ್ರಧಾನಪಾತ್ರವಹಿಸಿದೆ. ಬಿಸಿಲ ದಗೆಯನ್ನೂ ಲೆಕ್ಕಿಸದೆ ಮೆರವಣಿಗೆಯುದ್ದಕ್ಕೂ ಮಾತೆಯರು, ಯುವಕರು, ಅಬಾಲವೃದ್ದರೆನ್ನದೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿ ದೇಶಪ್ರೇಮವನ್ನು ಅನಾವರಣಗೊಳಿಸಿರುತ್ತಾರೆ. ಬೆರಳೆಣಿಕೆಯ ಪೋಲೀಸರ ಮಧ್ಯೆ ಶಿಸ್ತುಬದ್ಧವಾದ ಯುವಕ ಯುವತಿಯರ ಅವಿರತ ಶ್ರಮ ಮೆಚ್ಚುಗೆಯನ್ನು ಗಳಿಸಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದಶರ್ಿ ಉಳುವಾನ ಶಂಕರ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಶಂಕರ ಭಟ್ ಗುಣಾಜೆ, ಭಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಸುನಿಲ್ ಶೆಟ್ಟಿ ಕಿನ್ನಿಮಾಣಿ, ಬದಿಯಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ಮಹೇಶ್ ವಳಕ್ಕುಂಜ ಸಮಾಜೋತ್ಸವ ಕಾರ್ಯಕ್ರಮದ ಕುರಿತು ಮಾತನಾಡಿದರು. ವಿವಿಧ ಪಂಚಾಯತ್ಗಳ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿವಿಧ ಪಂಚಾಯತ್ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾಜೋತ್ಸವ ಸಮಿತಿಯ ಕೋಶಾಧಿಕಾರಿ ಅವಿನಾಶ್ ರೈ ಬದಿಯಡ್ಕ ಲೆಕ್ಕಪತ್ರ ಮಂಡಿಸಿದರು. ಸಮಾಜೋತ್ಸವ ಸಮಿತಿ ಕಾರ್ಯದಶರ್ಿ ಹರಿಪ್ರಸಾದ ರೈ ಪುತ್ರಕಳ ಸ್ವಾಗತಿಸಿ, ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಕಾರ್ಯದಶರ್ಿ ಜಯಪ್ರಕಾಶ ಪಟ್ಟಾಜೆ ವಂದಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries