HEALTH TIPS

No title

               ವಿದ್ಯಾಥರ್ಿಗಳು ದೀಪಗಳ ಹಾಗೆ ಬೆಳಕನ್ನು ಪಸರಿಸಬೇಕು
    ಮಂಜೇಶ್ವರ: ವ್ಯಕ್ತಿತ್ವ ವಿಕಸನ ಶಿಬಿರವು ವಿದ್ಯಾಥರ್ಿಗಳಿಗೆ ಮಾನಸಿಕ, ದೈಹಿಕ, ಶೈಕ್ಷಣಿಕ ಉನ್ನತಿಗೆ ಸಹಕಾರಿ. ವಿದ್ಯಾಥರ್ಿಗಳು ದೀಪಗಳ ಹಾಗೆ ಬೆಳಕನ್ನು ಪಡೆದು ಬೆಳಕನ್ನು ಪಸರಿಸಬೇಕೆಂದು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದ ಆಡಳಿತಾ ಮೊಕ್ತೇಸರ ಬತ್ತೇರಿ ಪದ್ಮನಾಭ ಆಚಾರ್ಯ ಹೇಳಿದರು.
    ಅವರು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ವಿದ್ಯಾವರ್ಧಕ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರೀ ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಸಮಾಜ ಸಭಾದ ಜಂಟಿ ಆಶ್ರಯದಲ್ಲಿ ಸೋಮವಾರ ನಡೆದ ವ್ಯಕ್ತಿತ್ವ ವಿಕಸನ ಶಿಬಿರವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತಾನಾಡಿದರು.
  ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಉಪಾಧ್ಯಕ್ಷ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ವಹಿಸಿದರು. ವೇದಿಕೆಯಲ್ಲಿ ಶ್ರೀ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ಕೋಟೆಕಾರು, ಸೂರಂಬೈಲ್ ಶಾಲಾ ಅದ್ಯಾಪಿಕೆ ವಿದ್ಯಾ ಆರ್. ಆಚಾರ್ಯ ಕಾಸರಗೋಡು  ಶುಭಾಶಂಸನೆಗೈದರು. ಕ್ಷೇತ್ರದ ಪ್ರಧಾನ ಆರ್ಚಕ ಪಿ.ಪ್ರಕಾಶ್ಶ್ಚಂದ್ರ ಶ್ರೌತಿ ಪ್ರಾರ್ಥನೆ ಹಾಡಿ ಶುಭಾಶೀರ್ವಚನಗೈದರು. ಶ್ರೀ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಮಲಾಕ್ಷ ಆಚಾರ್ಯ ಮುಳಿಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಸದಸ್ಯ ಬಾಲಕೃಷ್ಣ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪಿ.ವಸಂತ ಆಚಾರ್ಯ ಸಾಲ್ಮರ ಪುತ್ತೂರು ಸ್ವಾಗತಿಸಿ, ಉಪಾಧ್ಯಕ್ಷ ಎಸ್.ಭಾಸ್ಕರ ಆಚಾರ್ಯ ಪ್ರತಾಪನಗರ ವಂದಿಸಿದರು.
    ನ್ಯಾಯವಾದಿ.ಗಂಗಾಧರ ಆಚಾರ್ಯ ಕೊಂಡೆವೂರು ಶಿಬಿರದ ಗೀತೆಯನ್ನು ಹಾಡಿ ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ `ನನ್ನ ಮನಸ್ಸು ನನ್ನ ಕನಸು' ಎಂಬ ವಿಷಯದ ಬಗ್ಗೆ ಕಾರ್ಕಳ ಭುವನೇಂದ್ರ ಕಾಲೇಜಿನ ಅಧ್ಯಾಪಕ ಗಣೇಶ ಆಚಾರ್ಯ ಜಾಲ್ಸೂರು ಮಾಹಿತಿ ನೀಡಿದರು. ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆ ಶಿಬಿರಾಥರ್ಿಗಳಿಗೆ ಶಿಬಿರಾಧಿಕಾರಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಪ್ರೊ.ಮನೋಹರ ಆಚಾರ್ಯ ಐಲ ಮಾಹಿತಿ ನೀಡಿದರು. ಭಾಷಣ ಕಲೆಯ ಬಗ್ಗೆ ಉಪನ್ಯಾಸಕಿ ಬಬಿತಾ ಸತೀಶ್ ಆಚಾರ್ಯ ಕಾಸರಗೊಡು ಮಾಹಿತಿ ನೀಡಿದರು. ಓಜ ಸಾಹಿತ್ಯಕೂಟದ ವತಿಯಿಂದ ಶಿಬಿರಾಥರ್ಿಗಳಿಗೆ ಒಳಾಂಗಣ ಕ್ರೀಡೆ ಹಾಗೂ ಚಿತ್ರ ರಚನೆ ನಡೆಯಿತು. ಬಳಿಕ ಸಂಧ್ಯಾವಂದನೆ, ಭಜನಾ ಕಾರ್ಯಕ್ರಮ, ಪಾರಾಯಣ,  ರಸಪ್ರಶ್ನೆ, ಅವಲೋಕನ ಕಾರ್ಯಕ್ರಮ ನಡೆಯಿತು.
   ಬೆಳಿಗ್ಗೆ ಯೋಗ ಶಿಕ್ಷಕ ಪ್ರವೀಣ್ ಆಚಾರ್ಯ ಪ್ರತಾಪನಗರ ಅವರಿಂದ ಯೋಗಾಸನ, ಸಂಧ್ಯಾವಂದನೆ ನಡೆಯಿತು, ಬಳಿಕ ನಮ್ಮ ಆರೋಗ್ಯದ ಕಾಳಜಿ ಎಂಬ ವಿಷಯದಲ್ಲಿ ಡಾ.ಯೋಗೀಶ್ ಆಚಾರ್ಯ ಕೋಟೆಕಾರ್ ಅವರು ಮಾಹಿತಿ ನೀಡಿದರು. ನಮ್ಮ ಜೀವನದ ಗುರಿ ನಿರ್ಧರಿಸುವುದು ಹೇಗೆ? ಎಂಬ ವಿಷಯದಲ್ಲಿ ಮೂಡುಬಿದಿರೆ ಜೈನ್ ಹೈಸ್ಕೂಲಿನ ಅಧ್ಯಾಪಕ ಹರೀಶ್ ಆಚಾರ್ಯ ಉಜಿರೆ ಮಾರ್ಗದರ್ಶನ ನೀಡಿದರು. ವ್ಯಕ್ತಿಯ ಆಕರ್ಷಣೀಯ ನಿಯಮದ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಚಾರ್ಯ ಬಾಲಕೃಷ್ಣ ಹೊಸಂಗಡಿ ಮಾಹಿತಿ ನೀಡಿದರು. ವ್ಯಕ್ತಿ ಮತ್ತು ಆಚರಣೆಗಳು ಎಂಬ ವಿಷಯದಲ್ಲಿ ನಿವೃತ್ತ ಶಿರಾಸ್ಥೇದಾರರಾದ ಪ್ರಭಾಕರ ಆಚಾರ್ಯ ಕೋಟೆಕಾರು ಮಾಹಿತಿ ನೀಡಿದರು. ವ್ಯಕ್ತಿ ಮತ್ತು ಮಾಧ್ಯಮದ ಕುರಿತು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಚಾರ್ಯರಾದ ಬಾಲಕೃಷ್ಣ  ಹೊಸಂಗಡಿ ಚಚರ್ಾಕೂಟವನ್ನು ನಡೆಸಿ ಶಿಬಿರಾಥರ್ಿಗಳಿಗೆ ಮಾಹಿತಿಯನ್ನು ನೀಡಿದರು. ಬಳಿಕ ಶಿಬಿರಾಥರ್ಿಗಳ ಪ್ರತಿಭಾ ಪ್ರದರ್ಶನ ನಡೆಯಿತು.
   ಸಂಜೆ ನಡೆದ ಶಿಬಿರದ ಸಮಾರೋಪ ಸಮಾರಂಭವನ್ನು ಡಾ.ದೀಪಕ್ ಆಚಾರ್ಯ ಎಡನೀರು ಉದ್ಘಾಟಿಸಿದರು. ಅವರು ಮಾತಾನಾಡಿ ವಿದ್ಯೆಯಿಂದ ವಿನಯ ಬರುತ್ತದೆ, ವಿನಯದಿಂದ ಅರ್ಹತೆ ಬರುತ್ತದೆ, ಅರ್ಹತೆಯಿಂದ ಹಣ ಬರುತ್ತದೆ, ಹಣದಿಂದ ಸುಖ ಬರುತ್ತದೆ ಹಾಗಾಗಿ ಅದೇ ರೀತಿ ವಿದ್ಯಾಥಿಗಳು ಉನ್ನತ ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ತಿಳಿ ಹೇಳಿದರು.
   ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೋಳ್ಯ ಉಮೇಶ ಆಚಾರ್ಯ ಪುತ್ತೂರು ವಹಿಸಿದರು. ವೇದಿಕೆಯಲ್ಲಿ ವಿಶ್ವ ಕರ್ಮ ಸಮಾಜ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಮಲಾಕ್ಷ ಆಚಾರ್ಯ ಮುಳಿಗದ್ದೆ, ಓಜ ಸಾಹಿತ್ಯ ಕೂಟದ ಅಧ್ಯಕ್ಷ ಅಶೋಕ ಆಚಾರ್ಯ ಉದ್ಯಾವರ, ಕ್ಷೇತ್ರದ ಮಹಿಳಾ ಸಂಘದ ಪದಾಧಿಕಾರಿ ಭಾನುಮತಿ ಅನಂತ ಆಚಾರ್ಯ ಮಠದ ಬಳಿ, ನಿವೃತ್ತ ಶಿರಸ್ಥೆದಾರ ನ್ಯಾಯವಾದಿ. ಪ್ರಭಾಕರ ಆಚಾರ್ಯ ಕೋಟೆಕಾರು, ಶಿಬಿರದ ನಿದರ್ೇಶಕ ಮನೋಹರ ಆಚಾರ್ಯ ಐಲ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ವೇಳೆ  ಮೋಹನ್ಚಂದ್ರ ಆಚಾರ್ಯ ಕಟ್ಟೆಬಜಾರ್ ಕೊಡಮಾಡಿದ ಪುಸ್ತಕವನ್ನು ಶಿಬಿರದ ವಿದ್ಯಾಥರ್ಿಗಳಿಗೆ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಭಾಸ್ಕರ ಆಚಾರ್ಯ ಪ್ರತಾಪ ನಗರ ಸ್ವಾಗತಿಸಿ, ಹರೀಶ್ ಆಚಾರ್ಯ ಮಾಯಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದಶರ್ಿ ಪಿ.ವಸಂತ ಆಚಾರ್ಯ ಸಾಲ್ಮರ ಪುತ್ತೂರು ವಂದಿಸಿದರು. ಈ ಮೂಲಕ ಎರಡು ದಿನಗಳಿಂದ ನಡೆದ ಶಿಬಿರವು ಸಂಪನ್ನಗೊಂಡಿತ್ತು.
  ಶಿಬಿರದಲ್ಲಿ ಕಾಸರಗೋಡು ಜಿಲ್ಲೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಸುಮಾರು 64ಕ್ಕೂ ಅಧಿಕ ವಿಶ್ವಕರ್ಮ ಸಮುದಾಯದ ವಿದ್ಯಾಥರ್ಿಗಳು ಭಾಗವಹಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries