HEALTH TIPS

No title

                   ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ವಾಷರ್ಿಕೋತ್ಸವ
    ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಇತ್ತೀಚೆಗೆ ನಡೆದ ವಾಷರ್ಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪುಟಾಣಿ ಮಕ್ಕಳಿಂದ ಭಕ್ತಿಗೀತೆ ಕಾರ್ಯಕ್ರಮ ಜರಗಿತು. ಭಕ್ತಿ ಗೀತೆ ಹಾಡಿದ ಯಶಸ್ವಿನಿ, ಅವನಿ ಪಾಂಡೇಲು, ಅಭಿಜ್ಞ ಬೊಳುಂಬು ಹಾಗೂ ಪ್ರಗತಿ ಕೋಡುಮ್ಮಾಡು ಅವರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.
    ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಂಸ್ಕೃತ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಅಭಿಜ್ಞಾ ಬೊಳುಂಬು ಅವರನ್ನು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
   ಬಹುಮುಖ ಪ್ರತಿಭೆಯಾಗಿರುವ ಅಭಿಜ್ಞಾ ಶಾಲಾ ಕಲಿಕೆಯ ಜತೆಗೆ ಬಿಡುವಿನ ವೇಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರಿಂದ ಯಕ್ಷಗಾನ ನಾಟ್ಯ ಕಲಿತು ಕಾಸರಗೋಡು ಜಿಲ್ಲೆ ಹಾಗೂ ಕನರ್ಾಟಕದ ವಿವಿಧೆಡೆ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ತನ್ನ ನಾಟ್ಯ ಹಾಗೂ ವಾಕ್ಚಾತುರ್ಯವನ್ನು ಪ್ರದಶರ್ಿಸಿದ್ದಾರೆ. ಈಕೆಯ ಪ್ರತಿಭೆಯನ್ನು ಗುರುತಿಸಿದ ಹಿರಿಯ ಕಲಾವಿದರು ಪ್ರಶಂಸೆಯ ನುಡಿಗಳನ್ನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
    ಬೊಳಂಬು ದಿನೇಶ್ ಭಟ್, ಗಾನಲತಾ ದಂಪತಿಯ ಪುತ್ರಿಯಾದ ಈಕೆ ಕಾನ್ವೆಂಟ್ ಶಾಲೆಯ 7 ನೇ ತರಗತಿ ವಿದ್ಯಾಥರ್ಿನಿ. ಯಕ್ಷಗಾನವಲ್ಲದೆ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರಲ್ಲಿ ಭರತನಾಟ್ಯ, ಯೋಗೀಶ್ ಶಮರ್ಾ ಬಳ್ಳಪದವು ಅವರಿಂದ ಸಂಗೀತವನ್ನು ಕಲಿಯುತ್ತಿದ್ದಾಳೆ. ಹೆಚ್ಚಿನ ಆಸಕ್ತಿ ಹಾಗೂ ಸತತ ಪ್ರಯತ್ನದಿಂದ ಮಾಡುವ ಯಾವುದೇ ಕೆಲಸವನ್ನು ಸಮರ್ಥವಾಗಿ ಪೂರೈಸಬಲ್ಲ ಚಿಕ್ಕಪ್ರಾಯದ ಬಾಲೆ ಅಭಿಜ್ಞಾ ಶ್ರೇಷ್ಠ ಕಲಾವಿದೆಯಾಗಿ ಮೂಡಿಬರಲಿ ಎಂದು ಗಣ್ಯರು ಹಾರೈಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries