HEALTH TIPS

No title

              ಸಿಪಿಎಂ ಪಕ್ಷದಿಂದಜಿಲ್ಲೆಯ ನದಿಗಳ ಶುಚೀಕರಣ ಅಭಿಯಾನ
            ಮೇ.27 ರಂದು ಚಾಲನೆ, ಜೂ. 5 ರಂದುಗಿಡ ನೆಡುವಿಕೆ
    ಕಾಸರಗೋಡು: ಸಿಪಿಎಂ ಜಿಲ್ಲಾ ಕಮಿಟಿ ಹಾಗೂ ಪ್ರಾದೇಶಿಕ ಸಮಿತಿ ವತಿಯಿಂದ ಜಿಲ್ಲೆಯ ಪ್ರಧಾನ ನದಿಗಳು ಸಹಿತ ಸಾರ್ವಜನಿಕ ಸ್ಥಳಗಳ ಶುಚೀಕರಣ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಕಾರ್ಯದಶರ್ಿ ಬಾಲಕೃಷ್ಣನ್ ಮಾಸ್ಟರ್ ತಿಳಿಸಿದ್ದಾರೆ.
   ಅಭಿಯಾನವು ಮೇ.27 ರಿಂದ ಆರಂಭಗೊಳ್ಳಲಿದ್ದು ಜೂ.3 ರತನಕ ನಡೆಯಲಿದೆ. ಶುಚೀಕರಣ, ಜಲಸಿಂಚನ, ಮರುಪೂರಣ ಸಹಿತ ಕೆರೆ ಬಾವಿಗಳ ರಕ್ಷಣಾ ಕಾರ್ಯವು ನಡೆಯಲಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
   ರಾಜ್ಯದಲ್ಲಿನ ಹರಿತ ಕೇರಳ ಯೋಜನೆಯ ಸ್ಫೂತರ್ಿಯಾಗಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲೂ ಈ ಕಾರ್ಯ ಮಹತ್ತರವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 27 ರಂದು ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ಬಾವಿ, ಕೆರೆ-ಕಟ್ಟೆಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಜೂ. 3 ರಂದು ಪ್ರಮುಖ ಆಸ್ಪತ್ರೆ, ಆರೋಗ್ಯ ಕೇಂದ್ರ, ಶಾಲಾ ವಠಾರ, ಸರಕಾರಿ ಕಚೇರಿಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಶುಚೀಕರಣ ಅಭಿಯಾನವನ್ನು ಮುನ್ನಡೆಸಲಾಗುವುದು ಎಂದು ಹೇಳಿದರು. ತೃಕರಿಪುರದ ಕವ್ವಾಯಿ ನದಿ ತೀರ, ಕಾರ್ಯಾಂಗೋಡು ಹೊಳೆ, ಕಾಞಂಗಾಡು, ಉದುಮ ಸಹಿತ ಕಾರಡ್ಕದ ಪಯಸ್ವಿನಿ ನದಿ ತೀರ, ಮಧೂರು ಹೊಳೆ, ಚಂದ್ರಗಿರಿತೀರ ಪ್ರದೇಶ ಸಹಿತ ಮಂಜೇಶ್ವರದ ಹೊಳೆ ಬದಿಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಜೂ. 5 ರಂದು ವಿಶ್ವ ಪರಿಸರ ದಿನದ ಭಾಗವಾಗಿ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಗಿಡಗಳನ್ನು ನಡೆಲಾಗುವುದೆಂದು ಅವರು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries