HEALTH TIPS

No title

                   ರೋಗ ನಿಯಂತ್ರಣಕ್ಕೆ ಕ್ರಮ- ಸಚಿವೆ ಕೆ.ಕೆ.ಶೈಲಜಾ ಟೀಚರ್ 
   ಕಾಸರಗೋಡು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ ತಡೆಯಲು ಅವಶ್ಯವಾದ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಸಾಂಕ್ರಾಮಿಕ ರೋಗ ತಡೆಗೆ ಪೂರಕವಾಗುವಂತೆ ಆರೋಗ್ಯ ಇಲಾಖೆ ಸಹಿತ ಶುಚಿತ್ವ ಸಮಿತಿ ಸದಸ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್ ಹೇಳಿದರು. ಸರಕಾರಿ ಆಸ್ಪತ್ರೆಗಳಿಗೆ ಈ ಹಿಂದೆ ಬಾರದ ವ್ಯಕ್ತಿಗಳು ಆಸ್ಪತ್ರೆಗಳ ಕಾರ್ಯವೈಖರಿಯನ್ನು ಮೆಚ್ಚಿದ್ದು, ರೋಗ ತಪಾಸಣೆ ಸಹಿತ ಶುಶ್ರೂಷೆಗಾಗಿ ಆಗಮಿಸುತ್ತಿದ್ದಾರೆ. ಮಳೆಗಾಲದ ಸಮಯ ಸಾಂಕ್ರಾಮಿಕ ಜ್ವರದಂತಹ ಖಾಯಿಲೆಗಳನ್ನು ಗಮನದಲ್ಲಿರಿಸಿ ಗ್ರಾಮೀಣಾರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಚಿಕಿತ್ಸಾ ಸೌಕರ್ಯಗಳನ್ನು ಕೊಡಮಾಡಲಾಗಿದೆ. ಜೌಷಧಿಯ ಅಭಾವ ಬಾರದ ರೀತಿಯಲ್ಲಿ ಸ್ಥಳೀಯಾಡಳಿತ ಪಂಚಾಯತುಗಳ ಮೂಲಕ ಜೌಷಧಗಳನ್ನು ಪೂರೈಸುವ ಅಧಿಕಾರ ನೀಡಲಾಗಿದೆ ಎಂದು ಸಚಿವೆ ಹೇಳಿದರು.
    ಕಾಞಂಗಾಡು ವ್ಯಾಪಾರ ಭವನದಲ್ಲಿ ನಡೆದ ಸಾಂಕ್ರಾಮಿಕ ರೋಗ ತಡೆ ಕ್ರಮದ ಬಗ್ಗೆ ನಡೆದ ಅವಲೋಕನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
   ಜಿಲ್ಲಾಸ್ಪತ್ರೆಗಳಿಗೆ ಸಂಬಂಧಿಸಿ ಸೀರಂ ಬೇರ್ಪಡಿಸುವ ಚಿಕಿತ್ಸಾ ಸೌಲಭ್ಯವನ್ನು ಅದಷ್ಟೂ ಬೇಗ ಕಾರ್ಯನಿರ್ವಹಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಡೆಂಗ್ಯೂ ಜ್ವರ ಬಾಧೆಯ ಬಗ್ಗೆ ಮುಂಜಾಗ್ರತೆ ವಹಿಸಬೇಕು, 20 ಮನೆಗಳಿಗೆ ಓರ್ವ ಸಿಬ್ಬಂದಿಯಂತೆ ನೇಮಿಸಿ ಸೊಳ್ಳೆ ನಿಮರ್ೂಲನಾ ಕಾರ್ಯವನ್ನು ಸಫಲಗೊಳಿಸಬೇಕಿದೆ ಎಂದರು.
   ಜಿಲ್ಲಾ ಆರೋಗ್ಯ ಅಧಿಕಾರಿ ಮಾತನಾಡಿ 2017 ರಲ್ಲಿ ಜಿಲ್ಲೆಯಲ್ಲಿ ಒಟ್ಟು 37 ಡೆಂಗ್ಯೂ ಬಾಧೆಗೆ ತುತ್ತಾಗಿದ್ದರು. ಈ ವರ್ಷ ಆರಂಭದಿಂದ ಮೇ ತಿಂಗಳ ತನಕ ಒಟ್ಟು 147 ಮಂದಿ ಸಾಂಕ್ರಾಮಿಕ ಜ್ವರ ಬಾಧೆಗೆ ಒಳಗಾಗಿದ್ದು, ಇದರಲ್ಲಿ ಒಟ್ಟು 37 ಮಂದಿ ಡೆಂಗ್ಯೂ ಬಾಧಿತರಾಗಿದ್ದಾರೆ, ಓರ್ವರು ಮೃತಪಟ್ಟಿದ್ದಾರೆ. ಆರೋಗ್ಯ ಜಾಗೃತಾ ನಿದರ್ೇಶನದಂತೆ ಸಾಂಕ್ರಾಮಿಕ ರೋಗ ತಡೆಗೆ ಅವಶ್ಯಕವಾದ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಸಾಂಕ್ರಾಮಿಕ ರೋಗ ತಡೆಗೆ ಮುಂಜಾಗೃತೆ ವಹಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಕೆ.ಕುಂಞರಾಮನ್, ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್, ನೀಲೇಶ್ವರ ನಗರಸಭಾ ಅಧ್ಯಕ್ಷ ಪ್ರೊ.ಕೆ.ಪಿ ಜಯರಾಜನ್, ಕಾಞಂಗಾಡು ನಗರಸಭಾ ಉಪಾಧ್ಯಕ್ಷೆ ಎನ್.ಸುಲೈಖಾ  ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries