HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಶ್ರೀ ಪದ್ಮನಾಭ ಸ್ವಾಮೀ ಕ್ಷೇತ್ರ ಸಂರಕ್ಷಣೆಗಾಗಿ ಕಾಸರಗೋಡಿನಿಂದ ತಿರುವನಂತಪುರ ತನಕ
                ದಶಲಕ್ಷ ಸಹಿ ಸಂಗ್ರಹದೊಂದಿಗೆ ರಥಯಾತ್ರೆ
    ಬದಿಯಡ್ಕ: ಅಖಿಲ ಭಾರತ ಶ್ರೀ ಪದ್ಮನಾಭದಾಸ ಭಕ್ತಜನ  ಸೇವಾ ಸಮಿತಿ ನೇತೃತ್ವದಲ್ಲಿ  ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮೀ ಕ್ಷೇತ್ರದ ಬಿ ನೆಲಮಾಳಿಗೆ ತೆರೆಯಬಾರದು, ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕು, ಕ್ಷೇತ್ರ ಆಡಳಿತ ಕ್ಷೇತ್ರ ವಿಸ್ವಾಸಿಗಳಿಗೆ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಶಲಕ್ಷ ಭಕ್ತರ ಸಹಿ ಸಂಗ್ರಹದೊಂದಿಗೆ ಭಾನುವಾರ ಕುಂಬಳೆ ಅನಂತಪುರ ಕ್ಷೇತ್ರದಿಂದ ರಥಯಾತ್ರೆಯು ಕನ್ಯಾಕುಮಾರಿ ಮೂಲಕ ತಿರುವನಂತಪುರ ಅನಂತಪದ್ಮನಾಭ ಸ್ವಾಮೀ ಕ್ಷೇತ್ರಕ್ಕೆ ತೆರಳುವುದು.
    ಇದರ ಉದ್ಘಾಟನೆಯನ್ನು ಭಾನುವಾರ ಎಡನೀರು ಶ್ರೀಮಠದಲ್ಲಿ ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ದೀಪ ಪ್ರಜ್ವಲಿಸಿ ನಿರ್ವಹಿಸಿದರು.
    ಎಡನೀರು ಮಠದಲ್ಲಿ ನಡೆದ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನ ರಕ್ಷಾಧಿಕಾರಿ ಬ್ರಹ್ಮಶ್ರೀ ಪರಮೇಶ್ವರ ಬ್ರಹ್ಮಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಪಯರ್ಾಟನೆ ಆರಂಭಿಸಿತ್ತು. ಅಖಿಲ ಭಾರತ ಶ್ರೀಪದ್ಮನಾಭ ದಾಸ ಭಕ್ತಜನ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ. ಕೆ.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಬಾಲಪ್ರಜಾಪತಿ ಅಡಿಗಲ್, ಕೋಟಪ್ಪುರ ಭುವನೇಂದ್ರ ಸ್ವಾಮೀಜಿ, ಸ್ವಾಮಿ ಶಿವಾನಂದ ಗಿರಿ, ನ್ಯಾಯವಾದಿ. ಸೌಮ್ಯ ಎಸ್, ಸಿನಿಮಾ ನಟಿ ಟಿ.ಟಿ.ಉಷಾ, ಹರಿಹರ ಶಮರ್ಾ, ಮಧುಸೂದನ್ ಸ್ವಾಮೀಗಳು, ಶಾರದಾ ಎರಕ್ಕಾಡ್, ಎಡನೀರು ಮಠದ ಪ್ರಬಂಧಕ ಜಯರಾಮ ಮಂಜತ್ತಾಯ ಎಡನೀರು ಮತ್ತಿತರರು ಉಪಸ್ಥಿತರಿದ್ದರು.
    ರಥಯಾತ್ರೆಯು ಎಡನೀರಿನಿಂದ ಕುಂಬಳೆ ಅನಂತಪುರ ಕ್ಷೇತ್ರ ಕ್ಕೆ ಆಗಮಿಸಿ ಬಳಿಕ ದೀಪ ಪ್ರಜ್ವಲಿಸುವ ಮೂಲಕ ಹೋರಟು ಕನ್ಯಾಕುಮಾರಿಗೆ ತೆರಳಿ ಮೇ 13ರಂದು ಸಂಜೆ ಶ್ರೀ ಪದ್ಮನಾಭ ಸ್ವಾಮೀ ಕ್ಷೇತ್ರದಲ್ಲಿ ಸಮಾರೋಪಗೊಳ್ಳುವುದು.  ಸಮಾರೋಪ ಕಾರ್ಯಕ್ರಮದಲ್ಲಿ ತಮಿಳುನಾಡು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸಹಿತ ಗಣ್ಯರು ಉಪಸ್ಥಿತರಿರುವರು.
   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries