HEALTH TIPS

No title

                ಔಷಧಿಯಾಗಿ ಗವ್ಯ ಉತ್ಪನ್ನಗಳನ್ನು ಮಾರುಕಟ್ಟೆಗಿಳಿಸಲು ಸಿದ್ಧತೆ
                ಎರುಗಲ್ಲಿನ ಅಮೃತಧಾರಾ ಯೋಜನೆಗೆ ಎಡನೀರು ಶ್ರೀಗಳಿಂದ ಮಂತ್ರಾಕ್ಷತೆ
     ಬದಿಯಡ್ಕ:  ಅಡ್ಯನಡ್ಕ ಸಮೀಪದ ಎರುಗಲ್ಲು ಕೇಂದ್ರೀಕರಿಸಿ ಕಾಯರ್ಾಚರಿಸುತ್ತಿರುವ  ಶ್ರೀ ಕೇಶವಾನಂದ ಭಾರತಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದ ಅಮೃತಧಾರಾ ಪಂಚಗವ್ಯ ಆಯುವರ್ೇದ ಚಿಕಿತ್ಸೆ ಮತ್ತು ಸಂಶೋಧನಾಲಯದ ಮೂಲಕ ಆಯುವರ್ೇದ ಕ್ಷೇತ್ರದಲ್ಲೇ ಕ್ರಾಂತಿಕಾರಕ ಹೆಜ್ಜೆ ಇರಿಸಲಾಗಿದ್ದು, ಗವ್ಯೋತ್ಪನ್ನಗಳನ್ನು ಬಳಸಿ  ಪ್ರಪ್ರಥಮ ಬಾರಿಗೆ ಬಿಂದು ಪ್ರಮಾಣದ ಔಷಧಿಗಳನ್ನು ಶೋಧಿಸಿ ಬೇರೆ ಬೇರೆ ರೋಗಗಳ ಪ್ರತಿರೋಧಕ್ಕೆ ಪ್ರಯೋಗಿಸಲು ಮತ್ತು ಮಾರುಕಟ್ಟೆಗೆ ಇಳಿಸಲು ಸಿದ್ಧತೆ ನಡೆಸಲಾಗಿದೆ. ದೇಶೀಯ ಶುದ್ಧ ತಳಿಯ ಗೋವುಗಳ ಹಾಲು, ತುಪ್ಪ, ಸೆಗಣಿ, ಮೂತ್ರ ಇನ್ನಿತ್ಯಾದಿಗಳನ್ನು ಔಷಧಿಯಾಗಿ ಪರಿವತರ್ಿಸಿ ಬೇರೆ, ಬೇರೆ ರೋಗಕ್ಕೆ ಪ್ರಯೋಗಿಸುವುದು ಉದ್ದೇಶವಾಗಿದ್ದು, ಇದಕ್ಕಿರುವ ಪ್ರಾರಂಭಿಕ ಮಂತ್ರಾಕ್ಷತೆಯನ್ನು ಶ್ರೀ ಎಡನೀರು ಕೇಶವಾನಂದ ಭಾರತೀ ಶ್ರೀಪಾದಂಗಳವರು ನೀಡಿದರು.
   ನೀಚರ್ಾಲು ಶಾಲಾ ಸಭಾಂಗಣದಲ್ಲಿ  ಶ್ರೀ ಎಡನೀರು ಮೇಳದ ಯಕ್ಷಗಾನ ಬಯಲಾಟದ ವೇದಿಕೆಯಲ್ಲಿ ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಗವ್ಯೋತ್ಪನ್ನಗಳ ಔಷಧೀಯ ಯೋಜನೆಗಳಿಗೆ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದ ಶ್ರೀಗಳವರು ಗವ್ಯೋತ್ಪನ್ನಗಳನ್ನು ಔಷಧಿಯಾಗಿ ಪರಿವತರ್ಿಸಿ ಚಿಕಿತ್ಸೆಯಲ್ಲಿ ಬಳಸುವ ಕೈಂಕರ್ಯವನ್ನು ಶ್ಲಾಘಿಸಿ, ಈ ಪದ್ಧತಿಯ ಮೂಲಕ ಭಾರತೀಯ ಪ್ರಾಚೀನ ಚಿಕಿತ್ಸಾ ಪದ್ಧತಿಗೆ ಪುನರ್ಜನ್ಮ ನೀಡಲಾಗುತ್ತಿದೆ. ಪಶು ಸಂಗೋಪನೆ ಮತ್ತು ಭಾರತೀಯ ಕೃಷಿ ಆಧಾರಿತ ಜೀವನ ಪದ್ಧತಿ ಒಂದಕ್ಕೊಂದು ಪೂರಕವಾಗಿದ್ದು, ಅದರಿಂದಲೇ ಔಷಧಿಯನ್ನೂ ಉತ್ಪಾದಿಸುವ ಪ್ರಸ್ತುತ ಯೋಜನೆ ಸ್ವದೇಶಿ ಕಲ್ಪನೆಯದ್ದೆಂದು ನುಡಿದರು. ಇದೇ ವೇಳೆ ಗವ್ಯೋತ್ಪನ್ನಗಳ ಔಷಧಿ ಶೋಧಿಸಿ, ಯಶಸ್ವಿ ಪ್ರಯೋಗ ನಡೆಸಿರುವ 'ಅಮೃತಧಾರಾ' ದ ವೈದ್ಯ ಡಾ. ಗೋಪಾಲಕೃಷ್ಣ ಭಟ್ಟರಿಗೆ ಶ್ರೀ ಎಡನೀರು ಮಠಾಧೀಶರು ಶುಭ ಹಾರೈಸಿ ಮಂತ್ರಾಕ್ಷತೆ ಇತ್ತು ಹರಸಿದರು.
    ಸಮಾರಂಭದಲ್ಲಿ ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು "ಸ್ವಸ್ಥ ಆರೋಗ್ಯವಂತ ಸಮಾಜ ನಿಮರ್ಾಣಕ್ಕೆ ಸ್ವದೇಶಿ ಚಿಂತನೆಗಳ ಔಷಧಿ ಪ್ರಯೋಗದ ಮೂಲಕ ಪಶು ಸಂಗೋಪನೆ, ಸಂರಕ್ಷಣೆಗೆ ಉತ್ತೇಜನ ನೀಡುವ ಪ್ರಸ್ತುತ ಯೋಜನೆ ಪ್ರಶಂಸನೀಯವಾಗಿದ್ದು, ತನ್ಮೂಲಕ ಗಡಿನಾಡಿನ ನಮ್ಮ ನೆಲಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಬರಲಿದೆ. ಈ ಹಿನ್ನೆಲೆಯಲ್ಲಿ ಗವ್ಯ ಔಷಧಿ ಯೋಜನೆಯನ್ನು ಪ್ರೋತ್ಸಾಹಿಸಬೇಕೆಂದು ನುಡಿದರು.
   ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ಡಾ. ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗವ್ಯೋತ್ಪನ್ನ ಸಂಶೋಧಕ  ಸುಬ್ರಹ್ಮಣ್ಯ ಪ್ರಸಾದ್ ವಿಷಯಸೂಚಿ ಭಾಷಣ ಮಾಡಿದರು.  ಗಣೇಶಕೃಷ್ಣ ಅಳಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಶ್ರೀ ಎಡನೀರು ಮೇಳದವರಿಂದ 'ಶ್ರೀ ಕೃಷ್ಣ ಲೀಲೆ-ಕಂಸವಧೆ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
   ಅಡ್ಯನಡ್ಕ ಕೇಂದ್ರೀಕರಿಸಿ ಕಾಯರ್ಾಚರಿಸುತ್ತಿರುವ ಅಮೃತಧಾರಾ ಪಂಚಗವ್ಯ ಆಯುವರ್ೇದಿಕ್ ಚಿಕಿತ್ಸಾ ಸಂಶೋಧನಾ ಕೇಂದ್ರ ಗೋ ಉತ್ಪನ್ನಗಳಾದ ಹಾಲು, ತುಪ್ಪ, ಗೋಮೂತ್ರ, ಗೋಮಯ ಇವುಗಳನ್ನು ಬಳಸಿ ಪರಿಸರ ಸ್ನೇಹಿಯಾದ ಚಿಕಿತ್ಸಾ ವಿಧಾನಗಳನ್ನು ಪ್ರಯೋಗಿಸಿ ಈಗಾಗಲೇ ಯಶಸ್ವಿಯಾಗಿದೆ. ನೂರಾರು ಮಂದಿ ಈ ಚಿಕಿತ್ಸಾ ವಿಧಾನ ಅನುಸರಿಸಿ ರೋಗಮುಕ್ತರಾಗಿದ್ದಾರೆ. ಮುಂದಕ್ಕೆ ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಉದ್ದೇಶಿಸಿ ಶ್ರೀ ಗುರುಗಳಿಂದ ಅದಕ್ಕಿರುವ ಮಂತ್ರಾಕ್ಷತೆ ಪಡೆಯಲಾಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries