HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ವಾಣೀನಗರ  ಬಸ್ ಸಂಚಾರ  ಪುನರಾರಂಭ
    ಪೆರ್ಲ: ವಾಣೀನಗರ- ಬದಿಯಡ್ಕ- ಮುಳ್ಳೇರಿಯ ದೇಲಂಪಾಡಿ  ಪರವಾನಿಗೆಯೊಂದಿಗೆ ಸೇವೆ ನಡೆಸುತ್ತಿದ್ದ "ನವದುರ್ಗ" ಬಸ್  ತಾಂತ್ರಿಕ ಕಾರಣಗಳಿಂದ ಸಂಚಾರ ಮೊಟಕು ಗೊಳಿಸಿದ್ದು ಬುಧವಾರ ಸಾರಿಗೆ ನಿಯಮದಂತೆ ಏಕೀಕೃತ  ಬಣ್ಣ ಹಾಗೂ ನವ ವಿನ್ಯಾಸಗಳೊಂದಿಗೆ ಸಂಚಾರ ಪುನರಾರಂಭಿಸಲಾಯಿತು.
   ಪೆರ್ಲದಲ್ಲಿ ಸುದರ್ಶನ ಕ್ರಿಯಾ ಸಮಿತಿ ವತಿಯಿಂದ ಸ್ವಾಗತಿಸಲಾಗಿದ್ದು ವಾಣೀನಗರದ ಹಿರಿಯ ನಾಗರಿಕರಾದ ನೆಕ್ಕರೆಕಾಡು ಸುಬ್ರಹ್ಮಣ್ಯ ಕಡಂಬಳಿತ್ತಾಯ   ಚಾಲಕ ರತೀಶ್ ಬದಿಯಡ್ಕ ಅವರಿಗೆ ಹೂ ನೀಡಿ ಸ್ವಾಗತಿಸಿದರು.ಸುದರ್ಶನ ಬಳಗದ ಜಗದೀಶ್ ಕುತ್ತಾಜೆ, ಸಜಿತ್ ಸ್ವರ್ಗ, ಹರೀಶ್ ಪಡ್ರೆ, ಉಮೇಶ್ ಪೆರ್ಲ,ಬಸ್ ಸಿಬಂದಿಗಳಾದ ಸಂತೋಷ್, ರಾಜೇಶ್  ಮತ್ತಿತರರು ಉಪಸ್ಥಿತರಿದ್ದರು.
    ಕೇರಳ ಕನರ್ಾಟಕ ಗಡಿಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಂಡೋಸಲ್ಫಾನ್ ಪೀಡಿತ ಗ್ರಾಮೀಣ ಪ್ರದೇಶವಾದ ವಾಣೀನಗರ ಸಂಪಕರ್ಿಸುವ ಖಾಸಗೀ ಬಸ್ಸುಗಳ ಸಂಖ್ಯೆ ಎರಡು ದಶಕಗಳಿಗೂ ಮೊದಲು ಏಳರಷ್ಟು ಇದ್ದು  ಪ್ರತಿದಿನ ಮೂರು ಟ್ರಿಪ್ ಗಳಂತೆ ಸೇವೆ ನಡೆಸುತ್ತಿದ್ದರೂ ಆಥರ್ಿಕ ನಷ್ಟದ ಕಾರಣ ಬಸ್ಸುಗಳ ಸಂಖ್ಯೆ ಮೂರಕ್ಕಿಳಿಯಿತು ಮಾತ್ರವಲ್ಲದೆ ಹಲವು ಟ್ರಿಪ್ ಗಳೂ ಮೊಟಕು ಗೊಳಿಸಿದ್ದವು.
    ಹೈಯರ್ ಸೆಕೆಂಡರಿ ಹಾಗೂ ಶಾಲಾ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಛೇರಿ, ಹಿಂದುಳಿದ ವರ್ಗ ಹಾಗೂ ಪಂಗಡಗಳ ವಸತಿ ಕೇಂದ್ರ , ದೂರವಾಣಿ ಕೇಂದ್ರ, ಪಡಿತರ ವಿತರಣಾ ಕೇಂದ್ರ ದಿನೇಶ್ ಬೀಡಿ, ಮೊದಲಾಗಿ ಹಲವಾರು ಸ್ಥಾಪನೆಗಳು ವಾಣೀನಗರದಲ್ಲಿ ಸ್ಥಿತಿಗೊಂಡಿದ್ದರೂ ಬಸ್ ಸಂಪರ್ಕ ಕೊರತೆಯಿಂದ ಶಾಲಾ ವಿದ್ಯಾಥರ್ಿಗಳು, ಅಧ್ಯಾಪಕರು, ಉದ್ಯೋಗಸ್ಥರು ಹಾಗೂ ಪ್ರದೇಶ ವಾಸಿಗಳು ವರ್ಷಗಳಿಂದ ಅನುಭವಿಸುತ್ತಿದ್ದ ತೊಂದರೆಗಳನ್ನು ಮನಗಂಡ, ಹಲವು ನೂತನ ರಸ್ತೆ ನಿಮರ್ಿಸಿದ ಖ್ಯಾತಿಯ , ನೀರಾವರಿ ಸರಬರಾಜು, ಲೋಕೋಪಯೋಗಿ ರಸ್ತೆ ದುರಸ್ತಿ, ಮೋರಿ ಸಂಕ, ಚರಂಡಿ ನಿಮರ್ಾಣ, ಅಪಾಯಕಾರಿ ಕಾಡು ಪೊದೆ ತೆರವು,  ವಿಜಯಕನರ್ಾಟಕ ಸೇರಿದಂತೆ ಓದುಗರಿಗೆ ಹಲವು ಪತ್ರಿಕೆಗಳ ವಿತರಣೆ ಮೊದಲಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಗ್ರಾಮೀಣ ಅಭಿವೃದ್ಧಿಯ ಉದ್ದೇಶದಲ್ಲಿ ಸ್ಥಾಪಿತವಾದ  ಕ್ರಿಯಾ ಸಮಿತಿ ಸುದರ್ಶನದ  ನಿರಂತರ ಪ್ರಯತ್ನಗಳ ಫಲವಾಗಿ ಹಲವು ಬಸ್ ಮಾಲಕರನ್ನು ಸಂಪಕರ್ಿಸಿ ಸಂಚಾರ ದುರಿತವನ್ನು ಅನುಭವಿಸುತ್ತಿರುವ ವಾಣೀನಗರ ಭಾಗಕ್ಕೆ ಹೊಸ ಬಸ್ ಆರಂಭಿಸಲು ಮನವಿ ಸಲ್ಲಿಸಿದುದರ ಪರಿಣಾಮವಾಗಿ ಅಗಲ್ಪಾಡಿ ಚಂದ್ರನ್ ಕೆ ಅವರ ಮಾಲಕತ್ವದ  "ನವದುರ್ಗ" ಟ್ರಾವೆಲ್ಸ್  ನೂತನ ಪರವಾನಿಗೆ ಯೊಂದಿಗೆ 2017 ಜುಲೈ 27 ರಂದು ಸಂಚಾರ  ಆರಂಭಿಸಿದ್ದು ಸಾರಿಗೆ ಇಲಾಖೆಯ ಅಧಿಕಾರಿ ವಿಜಯನ್ ಮಕ್ಕಂ ವೀಟಿಲ್ ಹಾಗೂ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್ ಭಟ್  ಅವರು ಜಂಟಿಯಾಗಿ ಉದ್ಘಾಟಿಸಿದ್ದರು ಮಾತ್ರವಲ್ಲದೆ ಜಿಲ್ಲಾಧಿಕಾರಿಯವರ ಪೂರಕ ಸಹಾಯ ಸಹಕಾರವೂ ಈ ಬಸ್ ಓಡಾಟಕ್ಕೆ ಸಂಬಂದಿಸಿದಂತೆ ದೊರಕಿತ್ತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries