ಆರಾಧನಾ ಸಂಗೀತ ಶಾಲೆಯ ವಾಷರ್ಿಕೋತ್ಸವ
ಬದಿಯಡ್ಕ: ಸಂಸ್ಕಾರ, ಸಂಸ್ಕೃತಿಯ ಅಳವಡಿಕೆಗೆ ಪಾರಂಪರಿಕ ಮೌಲ್ಯಗಳಿಂದೊಡಗೂಡಿದ ಕಲಾ ಪ್ರಕಾರಗಳಂತೆ ಪರಿಣಾಮಕಾರಿಯಾಗಿ ಬೇರೊಂದರಲ್ಲಿ ಮೂಡಿಸಲು ಸಾಧ್ಯವಿಲ್ಲ. ಸಂಗೀತ ಕ್ಷೇತ್ರವು ಸಮಗ್ರ ವ್ಯಕ್ತಿತ್ವ, ಸಮಾಜದ ವಿಕಾಸಕ್ಕೆ ಸಾಧ್ಯತೆಗಳಿರುವ ಅತ್ಯುಚ್ಚ ಕಲಾ ಪ್ರಕಾರವಾಗಿ ಗುರುತಿಸಿಕೊಂಡಿದೆ ಎಂದು ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಪ್ರಬಂಧಕ ಜಯದೇವ ಖಂಡಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚೆಗೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಆರಾಧನಾ ಸಂಗೀತ ಶಾಲೆಯ ವಾಷರ್ಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ನಾದೋಪಾಸನೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನಮಾನಗಳಿದ್ದು, ಸಂಗೀತದ ವಿವಿಧ ರಾಗ, ತಾಳಗಳ ಹಿಂದೆ ವಿಜ್ಞಾನದ ತತ್ವ ಅಡಗಿದೆ ಎಂದು ತಿಳಿಸಿದರು.
ವೇ.ಮೂ.ಪ್ರಕಾಶ್ ಭಟ್ ಕಿಳಿಂಗಾರು, ಸುಬ್ರಹ್ಮಣ್ಯ ಭಟ್ ಕಾಕುಂಜೆ, ಗೋಪಾಲಕೃಷ್ಣ ಭಟ್ ಕೋಣಮ್ಮೆ, ವಿದುಷಿ ವಿಜಯ ಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಮತ್ತು ವಿದ್ವಾನ್ ಪ್ರಭಾಕರ ಕುಂಜಾರು ಶುಭಾಶಂಸನೆಗೈದರು.
ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾಥರ್ಿ ವಿದ್ಯಾಥರ್ಿನಿಯರಿಂದ ಸಂಗೀತಾರಾಧನೆ ನಡೆಯಿತು. ಹಿರಿಯ ವಿದ್ಯಾಥರ್ಿ ವಿದ್ಯಾಥರ್ಿನಿಯರಿಂದ ಪಂಚರತ್ನ ಕೀರ್ತನೆಗಳ ಆಲಾಪನೆ ನಡೆಯಿತು. ಸರಸ್ವತಿ ಕೃಷ್ಣನ್, ಶೈಲಜಾ ಬಿ, ಸರೋಜ ಎಸ್.ಭಟ್ ಅವರಿಂದ ಸಂಗೀತ ಆಲಾಪನೆ ನಡೆಯಿತು.