HEALTH TIPS

No title

           ಮಹಿಳೆಯರಿಗೆ ಸ್ವರಕ್ಷಣೆ ತರಬೇತಿ
    ಕಾಸರಗೋಡು: ರಾಜ್ಯ ಸರಕಾರದ ಎರಡನೇ ವಾಷರ್ಿಕೋತ್ಸವದ ಪ್ರಯುಕ್ತ  ಕಾಂಞಂಗಾಡು ಆಲಾಮಿಪಳ್ಳಿಯಲ್ಲಿ  ನಡೆಯುತ್ತಿರುವ ಕಾಸರಗೋಡು `ಪೆರುಮ' ಪ್ರದರ್ಶನ ಮೇಳದ ಕೇರಳ ಪೊಲೀಸರ ಸ್ಟಾಲ್ನಲ್ಲಿ  ಹೆಣ್ಮಕ್ಕಳಿಗೆ ಸ್ವರಕ್ಷಣೆ  ತರಬೇತಿ ನೀಡಲಾಗುತ್ತಿದೆ.
     ಮಾನಸಿಕವಾಗಿಯೂ, ಶಾರೀರಿಕವಾಗಿಯೂ ಯಾವುದನ್ನೂ  ಬೇಕಾದರೂ ಎದುರಿಸಲು ಪೂರಕ ತರಬೇತಿಯನ್ನು  ಈ ಸ್ಟಾಲ್ನಲ್ಲಿ  ಮಹಿಳೆಯರಿಗೆ ಒದಗಿಸಲಾಗುತ್ತಿದೆ. ಮಾಹಿತಿ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ  ಜರಗುತ್ತಿರುವ ಉತ್ಪನ್ನ  ಪ್ರದರ್ಶನ ಕಲಾ ಸಾಂಸ್ಕೃತಿಕ ಮೇಳದ ಪೊಲೀಸ್ ಸ್ಟಾಲ್ನಲ್ಲಿ  ಹೆಣ್ಮಕ್ಕಳಿಗೆ ಸ್ವಯಂ ಸ್ವರಕ್ಷಣೆಗಿರುವ  ತರಬೇತಿ ನೀಡಲಾಗುತ್ತಿದೆ.
   ಬೇಡಗ, ಚಿತ್ತಾರಿಕ್ಕಲ್, ವಿದ್ಯಾನಗರ, ನೀಲೇಶ್ವರ ಪೊಲೀಸ್ ಠಾಣೆಗಳ ನಾಲ್ಕು ಮಂದಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿಗಳು ತರಬೇತಿ ನೀಡುವುದಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಗಳಲ್ಲಿ  ಮಹಿಳೆಯರ ವಿರುದ್ಧ  ನಡೆಯುತ್ತಿರುವ ದೌರ್ಜನ್ಯಗಳನ್ನು ಧೈರ್ಯದಿಂದ ಎದುರಿಸಲು ಸಾ`್ಯವಾಗುವ ಹತ್ತು  ತಂತ್ರಗಳನ್ನು  ಇಲ್ಲಿ  ಹೇಳಿಕೊಡಲಾಗುತ್ತಿದೆ. ಶಾರೀರಿಕ ತರಬೇತಿಯಲ್ಲದೆ ಹದಿಹರೆಯದವರಿಗೆ ತಿಳುವಳಿಕಾ ತರಗತಿ, ಮಹಿಳಾ ಸುರಕ್ಷೆಗೆ ಸಂಬಂಸಿ ಅರಿವು ಮೂಡಿಸಲಾಗುತ್ತಿದೆ.
   ಮಹಿಳೆಯರಿಗೆ ಯಾವುದೇ ಕ್ಷಣದಲ್ಲಾದರೂ ಸುರಕ್ಷೆ  ಒದಗಿಸುವ ಕೇರಳ ಪೊಲೀಸರ ಟೋಲ್ ಫ್ರೀ ಸಂಖ್ಯೆಗಳಾದ 100 (ಕೇರಳ ಪೊಲೀಸ್), 1090 (ಕ್ರೈಂ ಸ್ಟೋಪರ್), 1515 (ಪಿಂಕ್ ಪಟ್ರೋಲ್), 1091 (ವುಮನ್ ಸೆಲ್), 181 (ಮಿತ್ರ) ಕುರಿತ ಅಗತ್ಯಗಳನ್ನು  ಸಂದರ್ಶಕರಿಗೆ ವಿವರಿಸಲಾಗುತ್ತಿದೆ. ದೈನಂದಿನ ಬದುಕಿನಲ್ಲಿ  ಎದುರಿಸಬೇಕಾದ ದೌರ್ಜನ್ಯ ಹಾಗೂ ಕಿರುಕುಳವನ್ನು  ಕಡಿಮೆ ಮಾಡಲಿರುವ ಶಾರೀರಿಕ ಹಾಗೂ ಮಾನಸಿಕವಾದ ಹಾಗೂ ಸುಲಭವಾದ ಸ್ವರಕ್ಷಣೆ  ತಂತ್ರಗಳನ್ನು  ಅಭ್ಯಸಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries