ಬಂದಡ್ಕ ಶಾಲೆಗೆ ಶೇ.100 ಫಲಿತಾಂಶ
ಮುಳ್ಳೇರಿಯ: ರಾಜ್ಯದ ಗಡಿ ಭಾಗದಲ್ಲಿರುವ ಬಂದಡ್ಕ ಶಾಲೆಯ ಕನ್ನಡ ವಿಭಾಗ ಸತತ 10 ವರ್ಷಗಳಿಂದ ಶೇ.100 ಫಲಿತಾಂಶ ಪಡೆಯುತ್ತಾ ಕೀತರ್ಿಗೆ ಪಾತ್ರವಾಗಿದೆ.
1948 ರಲ್ಲಿ ಕನ್ನಡ ಮಾಧ್ಯಮ ಏಕ ಅಧ್ಯಾಪಕ ಶಾಲೆಯಾಗಿ ಆರಂಭಗೊಂಡ ಈ ಶಾಲೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೂ ಇಲ್ಲಿನ ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮ ವಹಿಸುತ್ತಿದ್ದಾರೆ. ಕಾಲಕ್ಕೆ ಹೊಂದಿಕೊಂಡು ಇಲ್ಲಿ ಮಲಯಾಳ ಮಾದ್ಯಮ, ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾದರೂ ಇಲ್ಲಿನ ಮಣ್ಣಿನ ಕನ್ನಡತನಕ್ಕೆ ಧಕ್ಕೆ ಬಂದಿಲ್ಲ. ಇಲ್ಲಿನ ಕನ್ನಡ ವಿಭಾಗವು ಸತತ ಹತ್ತು ವರ್ಷಗಳಿಂದ ಶೇ.100 ಫಲಿತಾಂಶ ನೀಡುತ್ತಿರುವುದು ಇದಕ್ಕೆ.ಉತ್ತಮ ನಿದರ್ಶನ.
ಭಾಷಾ ಅಲ್ಪಸಂಖ್ಯಾಕ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಲಯಾಳ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಜೊತೆಯಲ್ಲಿ ಆರೋಗ್ಯಪೂರ್ಣವಾಗಿ ಸ್ಪಧರ್ಿಸುತ್ತಾ ಕಾಸರಗೋಡಿನ ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಲು ಶಾಲೆಗೆ ಸಾಧ್ಯವಾಗುತ್ತಿರುವುದು ಸಣ್ಣ ವಿಷಯವಲ್ಲ. ಶಿಕ್ಷಕರ ಮತ್ತು ರಕ್ಷಕರ ಕಠಿಣ ಪರಿಶ್ರಮದ ಫಲವಾಗಿ ಈ ಬಾರಿ ಪರೀಕ್ಷೆ ಬರೆದ ಒಟ್ಟು 22 ಮಂದಿ ವಿದ್ಯಾಥರ್ಿಗಳಲ್ಲಿ 5 ಮಂದಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗ್ರೇಡ್ ನೊಂದಿಗೆ ತೇರ್ಗಡೆಗೊಂಡಿರುವುದು ಗಮನಾರ್ಹವಾಗಿದೆ.
ಶಾಲೆಯ ಬೆಳವಣಿಗೆಗೆ ಮತ್ತು ಕನ್ನಡ ಮಾಧ್ಯಮದ ಉಳಿವಿಗೆ ಕಾರಣರಾದ ಶಿಕ್ಷಕರು, ರಕ್ಷಕರು, ಊರವರನ್ನು ಹಾಗೂ ಫಲಿತಾಂಶ ವಿಜೇತ ವಿದ್ಯಾಥರ್ಿಗಳನ್ನು ಸಿರಿ ಚಂದನ ಕನ್ನಡ ಯುವ ಬಳಗ, ಶಾಲೆಯ ರಕ್ಷಕ- ಶಿಕ್ಷಕರ ಸಂಘ ಅಭಿನಂದಿಸಿದೆ.