HEALTH TIPS

No title

              ರಂಗಚಿನ್ನಾರಿಯ ನೆನೆ ನೆನೆ ಕನ್ನಡ ಗಾನಕ್ಕೆ ಚಾಲನೆ
           ನಿರಂತರ ಚಟುವಟಿಕೆ ಬೆಳವಣಿಗೆಗೆ ಪೂರಕ-ನಾರಾಯಣ ಹೆಗ್ಡೆ ಕೋಡಿಬೈಲು 
   ಉಪ್ಪಳ: ಸಾಂಸ್ಕೃತಿಕ ಪರಂಪರೆ ಸಮೃದ್ದ ಸಮಾಜ ನಿಮರ್ಾಣದ ಪ್ರಮುಖ ಅಂಗವಾಗಿದ್ದು, ಅವನ್ನು ಮರೆತು ಮುನ್ನಡೆಯಲು ಸಾಧ್ಯವಿಲ್ಲ. ಗಡಿನಾಡಿನ ಕನ್ನಡದ ಸತ್ವವನ್ನು ಹೊಸ ತಲೆಮಾರಿಗೆ ತಲಪಿಸುವಲ್ಲಿ ಅಹನರ್ಿಶಿ ಕಾರ್ಯನಿರ್ವಹಿಸುತ್ತಿರುವ ರಂಗಚಿನ್ನಾರಿಯ ವೈವಿಧ್ಯಮಯ ದೃಷ್ಟಿಕೋನಗಳು ಮಹತ್ವಪೂರ್ಣ ಕೊಡುಗೆಗಳನ್ನು ನೀಡುತ್ತಿದೆ ಎಂದು ಐಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
    ಐಲ ಶ್ರೀದುಗರ್ಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಸಂಜೆ ಕಾಸರಗೋಡನ ಸಾಹಿತ್ತಿಕ-ಸಾಮಾಜಿಕ ಸಂಘಟನೆಯಾದ ರಂಗಚಿನ್ನಾರಿಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಐಲದ ತರುಣ ಕಲಾವೃಂದದ ಸಹಕಾರದಲ್ಲಿ ವಿನೂತನವಾಗಿ ಹಮ್ಮಿಕೊಂಡಿರುವ ಹಳ್ಳಿಯೆಡೆಗೆಚ ರಂಗಚಿನ್ನಾರಿಯ ಅಭಿಯಾನವಾದ "ನೆನೆ ನೆನೆ ಕನ್ನಡ ಗಾನ" ಕಾರ್ಯಕ್ರಮದ ಚಾಲನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ನಿರಂತರ ಚಟುವಟಿಕೆಗಳು ಭೌದ್ದಿಕತೆಯ ಬೆಳವಣಿಗೆಗೆ ಪೂರಕವಾಗುವುದರೊಂದಿಗೆ ಸಂಘಟಿತಾಗಿ ಬೆಳೆಯಲು ಕಾರಣವಾಗುತ್ತದೆ. ಹೊಸ ತಲೆಮಾರಿನ ಸಾಂಸ್ಕೃತಿಕ ಬಡತನವನ್ನು ತೊಡೆದು ಹಾಕುವಲ್ಲಿ ರಂಗಚಿನ್ನಾರಿಯ ನಿರಂತರ ಕಾರ್ಯಯೋಜನೆಗಳು ಪರಿಣಾಮಕಾರಿಯಾಗಿ ಮೂಡಿಬರುತ್ತಿದೆ ಎಂದು ಅವರು ತಿಳಿಸಿದರು.
    ಸಮಾರಂಭವನ್ನು ಉಪ್ಪಳದ ಹಿರಿಯ ಜವುಳಿ ಉದ್ಯಮಿ ಬಿ.ಎಂ.ಮೋಹನ್ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಗಡಿನಡಿನ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆದಾಯಿಯಾಗಿದೆ. ಮನಸ್ಸು, ಬುದ್ದಿಗಳನ್ನು ವಿಕಾಸದೆಡೆಗೆ ಮುನ್ನಡೆಸಿ ಸಮಾಜವನ್ನು ಧನಾತ್ಮಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ಸಾಂಸ್ಕೃತಿಕ ಚಟುವಟಿಕೆಗಳಿಗಿವೆ. ರಂಗಚಿನ್ನಾರಿಯ ಕಾರ್ಯಕ್ರಮಗಳು ಗಡಿನಾಡಿನ ಹೆಮ್ಮೆ ಎಂದು ತಿಳಿಸಿದರು.
   ರಂಗಚಿನ್ನಾರಿಯ ನಿದರ್ೇಶಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿ ರಂಗಚಿನ್ನಾರಿಯು ಬೆಳೆದುಬಂದ ಹಂತಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಂಗಚಿನ್ನಾರಿಯ ಇನ್ನೋರ್ವ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ನೆನೆ ನೆನೆ ಕನ್ನಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಖ್ಯಾತ ಗಾಯಕ ರವೀಂದ್ರ ಪ್ರಭು, ತರುಣ ಕಲಾವೃಂದದ ಅಧ್ಯಕ್ಷ ಬಿ.ವಿ.ಆಚಾರ್ಯ, ಐಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಮಾಗಣೆ ಪ್ರಮುಖರಾದ ಡಾ. ಸುರೇಶ್ ಮಯ್ಯ, ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.
  ತರುಣ ಕಲಾವೃಂದದ ಕಮಲಾಕ್ಷ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
   ಬಳಿಕ ಗಾಯಕ ರವೀಂದ್ರ ಪ್ರಭು, ಕಿಶೋರ್ ಪೆರ್ಲ ಮೊದಲಾದವರಿಂದ ಕನ್ನಡದ ಭಕ್ತಿ ಭಾವ ಜನಪದ ಗೀತೆಗಳ ಸುಮಧುರ ಗಾಯನ ಕಾರ್ಯಕ್ರಮ ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries