HEALTH TIPS

No title

                 ಸಾಂಸ್ಕೃತಿಕ ಚಟುವಟಿಕೆ ಜೀವನದ ಔನ್ನತ್ಯಕ್ಕೆ ಮಾರ್ಗದಶರ್ಿ-ಕೊಂಡೆವೂರುಶ್ರೀ
    ಉಪ್ಪಳ: ಭಾರತೀಯ ಪರಂಪರೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕೇವಲ ಮನೋರಂಜನೆಗೆ ಮಾತ್ರವಾಗಿರದೆ ಅದು ಆಧ್ಯಾತ್ಮಿಕತೆಯ ಲೇಪನದೊಂದಿಗೆ ಜೀವನದ ಔನ್ನತ್ಯಕ್ಕೆ ಪ್ರೇರಣೆ ನೀಡುತ್ತದೆ. ಶಾಸ್ತ್ರೀಯ ಕಲೆಗಳಿಗೆ ಮಣ್ಣಿನ ಸತ್ವದ ಪ್ರತೀಕಗಳಾಗಿ ನಾಡು-ನುಡಿಯ ಸಂರಕ್ಷಣೆ, ಬೆಳವಣಿಗೆಗೆ ಪೂರಕವಾಗಿದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಅನುಗ್ರಹ ಆಶೀರ್ವಚನಗೈದರು.
   ಕಾಸರಗೋಡಿನ ಸಾಹಿತ್ತಿಕ-ಸಾಮಾಜಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಸಹಕಾರದಲ್ಲಿ ಹಮ್ಮಿಕೊಂಡ "ನೆನೆ ನೆನೆ ಕನ್ನಡ ಗಾನ" ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮವನ್ನು ಶ್ರೀಆಶ್ರಮದ ಸಭಾಂಗಣದಲ್ಲಿ ಮಂಗಳವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಗಡಿನಾಡು ಕಾಸರಗೋಡಿನ ವರ್ತಮಾನದ ಕನ್ನಡ ಸ್ಥಿತಿಗತಿಯ ಅಸ್ತಿತ್ವಕ್ಕೆ ಪೂರಕವಾಗಿ ರಂಗಚಿನ್ನಾರಿಯ ಕಾರ್ಯಯೋಜನೆಗಳು ಶ್ಲಾಘನೀಯ ಎಂದು ತಿಳಿಸಿದ ಶ್ರೀಗಳು, ಭಾರತದ ಸಾಂಸ್ಕೃತಿಕತೆಯ ಬೇರುಗಳು ಜೀವನೋತ್ಸಾಹದ ಪ್ರೇರಕಗಳು ಎಂದು ತಿಳಿಸಿದರು. ಬದುಕಿನ ಭಾವ, ರಾಗ, ತಾಳಗಳ ಸಮತೋಲನದ ಪ್ರತೀಕವಾದ ಕಲಾ ಪ್ರಕಾರಗಳನ್ನು ಯುವ ತಲೆಮಾರಿಗೆ ದಾಟಿಸುವ, ಅವರನ್ನು ತೊಡಗಿಸಿಕೊಳ್ಳುವ ನಿರಂತರ ಯತ್ನಗಳು ಇನ್ನಷ್ಟು ಬೆಳೆದುಬರಬೇಕು ಎಂದು ಶ್ರೀಗಳು ತಿಳಿಸಿದರು.
  ರಂಗಚಿನ್ನಾರಿಯ ನಿದರ್ೇಶಕ, ಚಿಲನಚಿತ್ರ ನಟ ಕಾಸರಗೋಡು ಚಿನ್ನಾ ಉಪಸ್ಥಿತರಿದ್ದು, ರಂಗಚಿನ್ನಾರಿ ಬೆಳೆದುಬಂದ ಹಾದಿಯ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಯುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವಿಶೇಷ ತರಬೇತಿಗಳ ಮೂಲಕ ಅವರ ಬೆಳವಣಿಗೆಗೆ ಪೂರಕವಾಗಿ ತೊಡಗಿಸಿಕೊಂಡ ಕೃತಾರ್ಥತೆ ರಂಗಚಿನ್ನಾರಿಯ ಹಿರಿಮೆಯ ಸಂಕೇತ ಎಂದು ತಿಳಿಸಿದರು.
  ರಂಗಚಿನ್ನಾರಿಯ ಇನ್ನೋರ್ವ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ವಂದಿಸಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಪ್ರಸಿದ್ದ ಗಾಯಕ ರವೀಂದ್ರ ಪ್ರಭು, ಸೀಮಾ ರಾಯ್ಕರ್ ಹಾಗೂ ಕಿಶೋರ್ ಪೆರ್ಲರಿಂದ ಅತ್ಯಪೂರ್ವ ಶೈಲಿಗಳಲ್ಲಿ  `ನೆನೆ ನೆನೆ ಕನ್ನಡ ಗಾನ' ಎಂಬ ಭಕ್ತಿ ಭಾವ ಜನಪದಗೀತೆಗಳ ಝೇಂಕಾರ ಹಾಡುಗಳನ್ನು ಪ್ರಸ್ತುತಪಡಿಸಿ ನೆರೆದ ಸಭಿಕರಿಂದ ಕರತಾಡನ ಗಿಟ್ಟಿಸಿಕೊಂಡರು.  ಖ್ಯಾತ ಹಿನ್ನಲೆ ಸಂಗೀತಗಾರರಾದ ಪುರುಷೋತ್ತಮ ಕೊಪ್ಪಳ್ ಕೀಬೋಡರ್ಿನಲ್ಲಿ, ರಾಜೇಶ್ ಭಾಗವತ್ ರಿದಂಪಾಡ್ನಲ್ಲಿ ಹಾಗೂ ತಬಲಾದಲ್ಲಿ ಅಭಿಜಿತ್ ಶೆಣೈ ಸಹಕರಿಸಿದರು.
 
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries