HEALTH TIPS

No title

          ಇಂಧನ ಬೆಲೆ ಏರಿಕೆ ನಿಯಂತ್ರಣಕ್ಕೆ "ತಕ್ಷಣದ ಪರಿಹಾರ ಸೂತ್ರ" ಕುರಿತು ಕೇಂದ್ರ ಚಚರ್ಿಸುತ್ತಿದೆ: ಧಮರ್ೇಂದ್ರ ಪ್ರಧಾನ್
    ಭುವನೇಶ್ವರ್(ಒಡಿಶಾ): ತೈಲ ಬೆಲೆ ಏರಿಕೆಯನ್ನು ನಿಬಾಯಿಸಲು ಕೇಂದ್ರ ಸಕರ್ಾರವು "ತುತರ್ು ಪರಿಹಾರ ಕ್ರಮ" ದ ಕುರಿತಂತೆ ಚಚರ್ಿಸಿದೆ ಎಂದು  ಕೇಂದ್ರ ತೈಲ ಸಚಿವ ಧಮರ್ೇಂದ್ರ ಪ್ರಧಾನ್ ಹೇಳಿದ್ದಾರೆ.
  ಪೆಟ್ರೋಲ್,  ಡೀಸೆಲ್ ಬೆಲೆಗಳನ್ನು ತಗ್ಗಿಸಲು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಲು ತೈಲ ಸಚಿವಾಲಯವು ಬಯಸಿದೆ. ಸಮಸ್ಯೆಯ ತಕ್ಷಣದ ಪರಿಹಾರದ ಸಂಬಂಧ ಚಚರ್ೆ ನಡೆದಿದೆ ಎಂದು ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
   ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಣಾವು ಖಂಡಿತವಾಗಿ ಉತ್ತಮ ಮಾರ್ಗವನ್ನೇ ಕಂಡುಕೊಳ್ಳಲಿದ್ದೇವೆ ಎಂದು  ಅವರು ಹೇಳಿದರು. ದೇಶದ ಬಡಜನತೆಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸಕರ್ಾರ ಕಳೆದ ಅಕ್ಟೋಬರ್ ನಲ್ಲಿ ಇಂಧನದ ಮೇಲೆ  ಪ್ರತಿ ಲೀಟರ್ ಗೆ 2 ರೂಪಾಯಿಗಳಷ್ಟು ಎಕ್ಸೈಸ್ ಸುಂಕವನ್ನು ಕಡಿತಗೊಳಿಸಿತ್ತು. ಈ ಸಮಯದಲ್ಲಿ ಕೇಂದ್ರವು ಕ್ಷಿಪ್ರ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.
  ಎರಡು ತೈಲ ಉತ್ಪಾದನಾ ದೇಶಗಳಾದ ಇರಾನ್ ಮತ್ತು ವೆನೆಜುವೆಲಾದ ನಡುವಿನ ರಾಜಕೀಯ ವೈರುದ್ಯವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಹೆಚ್ಚಳದ ಹಿಂದಿನ ಪ್ರಮುಖ ಕಾರಣವಾಗಿದೆ ಎಂದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಕಾರಣ ಕುರಿತ ಪ್ರಶ್ನೆಗೆ ಪ್ರಧಾನ್ ಉತ್ತರಿಸಿದ್ದಾರೆ.
   ಒಡಿಶಾ ಹಣಕಾಸು ಸಚಿವರಾದ ಎಸ್.ಬಿ. ಬೆಹೇರಾ ಕೇಂದ್ರ ಸಚಿವರನ್ನು ಟೀಕಿಸುತ್ತಾ "ಕೇಂದ್ರವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ" ಎಂದಿದ್ದರು.
"ಕೇಂದ್ರ ತೈಲ ಸಚಿವರು ಸಮಸ್ಯೆಗೆ ನೀಡುವ ಕಾರಣಗಳು ಸಮರ್ಥನೀಯವಲ್ಲ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸಕರ್ಾರದ ವಿಫಲತೆಯನ್ನು ಮುಚ್ಚಿಹಾಕುವ ಸಲುವಾಗಿ ಅವರು ಹೀಗೆ ಹೇಳುತ್ತಿದ್ದಾರೆ.ಕೇಂದ್ರವು ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು  ತನ್ನಿಂದ ತಾನು ಕೆಳಗಿಳಿಯಲಿದೆ" ಎಂದು ಅವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries