HEALTH TIPS

No title

               ವಿದ್ಯೆಗೆ ಸಮಾನ ಮಿತ್ರನಿಲ್ಲ-ಕಾಸರಗೋಡು ಚಿನ್ನಾ
                   ವಸಂತ ಶಿಬಿರ ಸಮರೋಪದಲ್ಲಿ ಹೇಳಿಕೆ
  ಕುಂಬಳೆ: ಸಾಗರದ ಸುವಸ್ತುಗಳ ಬಗ್ಗೆ ನಮಗಿನ್ನೂ ಅರಿವಿಲ್ಲ. ಅಂತೆಯೇ ಕೊಂಕಣಿ ಸಮಾಜವೆಂಬ ಸಾಗರದಲ್ಲಿರುವ ಯುವ ಪ್ರತಿಭೆಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಆಗಬೇಕು ಎಂದು ಚಲನಚಿತ್ರ ನಟ, ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ರಾಜ್ಯಾಧ್ಯಕ್ಷ ಕಾಸರಗೋಡು ಚಿನ್ನಾ ಅಭಿಪ್ರಾಯ ವ್ಯಕ್ತಪಡಿಸಿದರು.
   ಕುಂಬಳೆಯ ಜಿ.ಎಸ್.ಟಿ.ಮಹಿಳಾ ಮಂಡಳಿ ಹಾಗೂ ಜಿ ಎಸ್ ಟಿ ಯುವಕಸಂಘಗಳ ಆಶ್ರಯದಲ್ಲಿ ಕುಂಬಳೆ ಶ್ರೀವೀರವಿಠಲ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ "ವಸಂತ ಶಿಬಿರ"ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ವಿದ್ಯೆಗೆ ಸಮಾನನಾದ ಮಿತ್ರ ಜಗತ್ತಿನಲ್ಲಿ ಬೇರೊಂದಿಲ್ಲ. ಅಜ್ಞಾನವೆಂಬುದು ಶತ್ರುವಿದ್ದಂತೆ ಎಂದು ಅವರು ತಿಳಿಸಿದರು. ದೇವಾಲಗಳ ಪರಿಸರದ ಸಾತ್ವಿಕ ಪರಿಸರದ ಹಿನ್ನೆಲೆಯಲ್ಲಿ ಆಯೋಜಿಸಿದ ವಸಂತ ಶಿಬಿರ ಪರಿಣಾಮಕಾರಿ ಎಂದು ಅವರು ತಿಳಿಸಿದರು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯ ಪ್ರದರ್ಶನಗಳಿಗೆ ಅವಕಾಶ ನೀಡಿ, ಮಾರ್ಗದರ್ಶನ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವರು ತಿಳಿಸಿದರು.
   ವೀರವಿಠಲ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಪ್ರಭು ಅಧ್ಯಕ್ಷತೆ ವಹಿಸಿದ್ದರು.ಶ್ರೀಕ್ಷೇತ್ರದ ಅರ್ಚಕ ವೇದಮೂತರ್ಿ ಕೆ.ವಿಷ್ಣು ಭಟ್, ಕೆ.ಪುಂಡಲೀಕ ಭಟ್, ಜಿಎಸ್ಬಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶಾಂತಾ ಸಿ, ರಂಗಕಮರ್ಿ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು. ಕ್ಷೇತ್ರದ ಮೊಕ್ತೇಸರ ಬಿ.ವಿಕ್ರಂ ಪೈ ಸ್ವಾಗತಿಸಿ, ಸುಧಾಕರ ಕಾಮತ್ ವಂದಿಸಿದರು.
   ಈ ಸಂದರ್ಭ ರಂಗಭೂಮಿ, ಚಲನಚಿತ್ರ, ಭಾಷೆ, ಸಂಸ್ಕೃತಿಗಳಿಗಾಗಿ ವಿಶೇಷವಾಗಿ ದುಡಿಯುತ್ತಿರುವ ಕಾಸರಗೋಡು ಚಿನ್ನಾ ರನ್ನು ಜಿಎಸ್ಬಿ ಸಮಾಜದ ವತಿಯಿಂದ ಗೌರವಿಸಲಾಯಿತು. ಜೊತೆಗೆ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಶಾಲಾ ಬ್ಯಾಗ್, ಸ್ಮರಣಿಕೆ ಸಹಿತ ವಿವಿಧ ಕಲಿಕೋಪಕರಣ ವಿತರಿಸಲಾಯಿತು.   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries