ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು
ಮುಳ್ಳೇರಿಯ: ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆಗೈದ ದಾರುಣ ಘಟನೆ ಗುರುವಾರ ಸಂಜೆ ಅಡೂರಿನಲ್ಲಿ ನಡೆದಿದೆ.
ಅಡೂರು ನಿವಾಸಿ ಕೂಲಿ ಕಾಮರ್ಿಕ, ಕುಂಞಿಕಣ್ಣ ಮಣಿಯಾಣಿ-ಯಶೋಧಾ ದಂಪತಿಗಳ ಪುತ್ರ ರಾಧಾಕೃಷ್ಣ(39), ಅವರ ಪತ್ನಿ ಪ್ರಸೀದ(33), ಇವರ ಮಕ್ಕಳಾದ ಕಾಶೀನಾಶ್(5), ಹಾಗೂ ಶಬರೀನಾಥ್(3) ಆತ್ಮಹತ್ಯೆಗೈದ ನತದೃಷ್ಟರು. ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರು. ಘಟನೆಯನ್ನು ತಿಳಿದು ಆದೂರು ಪೋಲೀಸರು ಹಾಗೂ ಜಿಲ್ಲಾ ಉನ್ನತ ಪೋಲೀಸರು ಸ್ಥಳ ಸಂದರ್ಶನ ನಡೆಸಿದ್ದು, ಮಹಜರು ಸಹಿತ ಇತರ ಕರ್ತವ್ಯಗಳು ಶುಕ್ರವಾರ ನಡೆಯಲಿದೆಯೆಂದು ಪೋಲೀಸ್ ಮೂಲಗಳು ತಿಳಿಸಿವೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಶುಕ್ರವಾರದಿಂದ ತನಿಖೆ ನಡೆಸಲಾಗುವುದೆಂದೂ ಪೋಲೀಸರು ತಿಳಿಸಿದ್ದಾರೆ.