HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ವಿಠಲ ಶಾಸ್ತ್ರಿ ಸಂಸ್ಮರಣೆ-ಪ್ರಶಸ್ತಿ ಪ್ರಧಾನ
  ಉಪ್ಪಳ: ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕುರುಡಪದವು ಆಶ್ರಯದಲ್ಲಿ ಮೇ. 5 ರಂದು ಅಪರಾಹ್ನ 2 ರಿಂದ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಫ್ರೌಢಶಾಲೆಯಲ್ಲಿ ದಿ.ಕುರಿಯ ವಿಠಲ ಶಾಸ್ತ್ರಿ, ದಿ. ನೆಡ್ಲೆ ನರಸಿಂಹ ಭಟ್ ಹಾಗೂ ದಿ. ಕರುವೋಳು ದೇರಣ್ಣ ಶೆಟ್ಟಿ ಯವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಮತ್ತು ಬಯಲಾಟ ಆಯೋಜಿಸಲಾಗಿದೆ.
  ಅಪರಾಹ್ನ 2 ಗಂಟೆಗೆ ಆರಂಭಗೊಳ್ಳುವ ಸಮಾರಂಭದ ಮೊದಲ ಭಾಗದಲ್ಲಿ ಸಮರ ಸನ್ನಾಹ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಬಳಗ, ಮುಮ್ಮೇಳದಲ್ಲಿ ಎಂ.ಕೆ.ರಮೇಶ್ ಆಚಾರ್ಯ, ದೇವಕಾನ ಕೃಷ್ಣ ಭಟ್, ಸೇರಾಜೆ ಗೋಪಾಲಕೃಷ್ಣ ಭಟ್ ಸೇರಾಜೆ ಸೀತಾರಾಮ ಭಟ್ ಭಾಗವಹಿಸುವರು. ಸಂಜೆ 4 ರಿಂದ ಈಶ್ವರಮಂಗಲದ ಶ್ರೀವೈಷ್ಣವೀ ನಾಟ್ಯಾಲಯದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ರವರ ಬಾಯಾರು ಶಾಖಾ ವಿದ್ಯಾಥರ್ಿಗಳಿಂದ ಭರತನಾಟ್ಯ ವೈವಿಧ್ಯ ನಡೆಯಲಿದೆ. ಸಂಜೆ 7 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ಅಧ್ಯಕ್ಷತೆ ವಹಿಸುವರು. ಹಿರಿಯ ಕಲಾವಿದ ಎಂ.ಕೆ ರಮೇಶ್ ಆಚಾರ್ಯ ಸಂಸ್ಮರಣಾ ಭಾಷಣ ಮಾಡುವರು.  ಬೆಳ್ಳಾರೆ ಮಂಜುನಾಥ ಭಟ್ ರವರಿಗೆ ವಿಠಲ ಶಾಸ್ತ್ರಿ ಸ್ಮಾರಕ ಪ್ರಶಸ್ತಿ, ಸುಬ್ರಹ್ಮಣ್ಯ ಧಾರೇಶ್ವರರಿಗೆ ನೆಡ್ಲೆ ನರಸಿಂಹ ಭಟ್ ಪ್ರಶಸ್ತಿ ಹಾಗೂ ಕುಂಬ್ಳೆ ಶ್ರೀಧರ ರಾವ್ ರವರಿಗೆ ದೇರಣ್ಣ ಶೆಟ್ಟಿ ಪ್ರಶಸ್ತಿ ಪ್ರಧಾನಗೈಯ್ಯಲಾಗುವುದು. ಶಂಭು ಶಮರ್ಾ ವಿಟ್ಲ ಅಭಿನಂದನಾ ಭಾಷಣ ಮಾಡುವರು.
   ಸಂಸ್ಮರಣೆ ಹಾಗೂ ಅಭಿನಂದನಾ ಸಮಾರಂಭದ ಬಳಿಕ ರಾತ್ರಿ 9.30 ರಿಂದ ಬಾಯಾರು ಪಂಚಲಿಂಗೇಶ್ವರ ಬಾಲಯಕ್ಷಕಲಾವೃಂದದವರಿಂದ ಬ್ರಹ್ಮಕಪಾಲ, ರಾತ್ರಿ 1.30 ರಿಂದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಬಬ್ರುವಾಹನ ಕಾಳಗ, 3.30 ರಿಂದ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries