HEALTH TIPS

No title

         ಕನ್ನಡದ ವಿಷಯದಲ್ಲಿ ಹಳೇ ಔಷದಿ - ಹೊಸ ಸೀಶೆ- ಕೇವಲ ಭರವಸೆಗಳನ್ನಷ್ಟೇ ಹೇಳಿದ ಶಾಸಕರು
         ಭಾಷಾ ಅಲ್ಪಸಂಖ್ಯಾತರಿಗೆ ಮಲಯಾಳ ಕಲಿಕೆ ಕಡ್ಡಾಯ ಹೇರಿಕೆ ಅನ್ಯಾಯ
    ಕನ್ನಡಿಗರಿಗೆ ರಿಯಾಯಿತಿ ನೀಡುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ : ಶಾಸಕ ಎನ್.ಎ.ನೆಲ್ಲಿಕುನ್ನು
    ಕಾಸರಗೋಡು: ಇಂದಿನ ಕಾಲಘಟ್ಟಕ್ಕನುಸರಿಸಿ ಯಾರಿಗೇ ಆಗಲಿ ಒಂದು ಭಾಷೆಯನ್ನು ಮಾತ್ರ ಕಲಿಯಬೇಕೆಂದು ಹೇರುವುದು ಅನ್ಯಾಯ. ಕೇರಳ ಸರಕಾರ ಮಲಯಾಳ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ಶಾಲೆಗಳಲ್ಲಿ ಮಲಯಾಳ ಕಲಿಕೆ ಅನಿವಾರ್ಯವಾಗಿದೆ. ಆದರೆ ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ಮಲಯಾಳ ಹೇರಿಕೆ ಕೂಡದು. ಮಲಯಾಳ ಹೇರಿಕೆಯಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಅನುಭವಿಸುವ ಸಮಸ್ಯೆಗಳ ಬಗ್ಗೆ ಮತ್ತು ಕಾಸರಗೋಡಿನ ಕನ್ನಡಿಗರನ್ನು ಮಲಯಾಳ ಕಲಿಕೆ ಕಡ್ಡಾಯದಿಂದ ರಿಯಾಯಿತಿ ನೀಡಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಭರವಸೆ ನೀಡಿದರು.
    ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಬುಧವಾರದಿಂದ ಆಯೋಜಿಸಿರುವ  ಒಂದು ವಾರದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕು, ಅವಕಾಶಗಳನ್ನು ಕಸಿದುಕೊಳ್ಳುವುದು ಸಮಂಜಸವಲ್ಲ. ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಜವಾಬ್ದಾರಿಯೂ ಹೌದು. ಈ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ವಿಧಾನಸಭೆಯಲ್ಲೂ, ಹೊರಗೂ ವಾದಿಸುತ್ತೇನೆ ಎಂದರು. ಹಿಂದಿನ ಯುಡಿಎಫ್ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದಾಗ ಭಾಷಾ ಅಲ್ಪಸಂಖ್ಯಾತರ ಪರವಾಗಿ ಸಾಕಷ್ಟು ತಿದ್ದುಪಡಿ ತಂದಿದೆ. ಈ ಹಿನ್ನೆಲೆಯಲ್ಲಿ ಮಲಯಾಳ ಕಲಿಕೆ ಕಡ್ಡಾಯದಿಂದ ಕಾಸರಗೋಡನ್ನು ಹೊರತುಪಡಿಸಲಾಗಿತ್ತು. ಆದರೆ ಇದೀಗ ಎಡರಂಗ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಭಾಷೆ ಕಲಿಕೆ ಅವರವರಿಗೆ ಸಂಬಂಧಿಸಿದ ವಿಚಾರ. ಭಾಷೆ ಕಲಿಕೆಗೂ ಎಲ್ಲರೂ ಸ್ವತಂತ್ರರು. ಈ ಸ್ವತಂತ್ರವನ್ನು ಕಸಿದುಕೊಳ್ಳುವುದು ಸಂವಿಧಾನಬಾಹಿರವಾಗಿದೆ ಎಂದರು. ಹಿಂದಿನ ಸರಕಾರದ ಸಂದರ್ಭದಲ್ಲಿ ಕಾಸರಗೋಡಿಗೆ ಎಲ್ಲಾ ಸುತ್ತೋಲೆ, ಅಜರ್ಿಗಳನ್ನು ಕನ್ನಡದಲ್ಲಿ ನೀಡುವಂತೆ ಒತ್ತಾಯಿಸಿದ್ದೆ ಎಂದು ನೆನಪಿಸಿದ ಅವರು ಭಾಷೆ ಎಂದರೆ ಸಂಸ್ಕೃತಿಯ ಧ್ಯೋತಕವಾಗಿದೆ. ಭಾಷೆ ನಾಶ ಒಂದು ಸಂಸ್ಕೃತಿ ನಾಶವಾಗಲು ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
  ಧರಣಿ ಸತ್ಯಾಗ್ರಹದಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು.
     ಒತ್ತಾಯಪೂರ್ವಕ ಪುಸ್ತಕ ರವಾನೆ : ಎಂ.ವಿ.ಎಂ.ಭಟ್
  ಎಲ್ಲಾ ಶಾಲೆಗಳಿಗೆ ಒತ್ತಾಯಪೂರ್ವಕವಾಗಿ ಮಲಯಾಳ ಪುಸ್ತಕಗಳನ್ನು ಕಾಸರಗೋಡು ಜಿಲ್ಲಾ ಡಿ.ಡಿ. ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ಗೂಢಾಲೋಚನೆ ಇದೆ ಎಂದು ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಈ ಸಂದರ್ಭ ಅಸಮಧಾನ ವ್ಯಕ್ತಪಡಿಸಿದರು. 
    ಕಾನೂನು ಒಳಿತಿಗಾಗಿ : ಕಾನೂನು ಮಾಡುವುದು ಮಾನವನ ಒಳಿತಿಗಾಗಿ. ನಿಮರ್ೂಲನ ಮಾಡುವುದಕ್ಕಲ್ಲ. ಆದರೆ ಕೇರಳ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಕನ್ನಡಿಗರು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ಬೆದರುವವರೂ ನಾವಲ್ಲ. ಸಂವಿಧಾನ ಬದ್ಧ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಇನ್ನಾದರೂ ಸರಕಾರ ಕಣ್ಣು ತೆರೆಯಬೇಕು ಎಂದು ಸಾಹಿತಿ ವಿ.ಬಿ.ಕುಳಮರ್ವ ಹೇಳಿದರು.
   ಕನ್ನಡದ ಸಮಸ್ಯೆಗೆ ಸ್ಪಂದಿಸಬೇಕು : ಕನ್ನಡಿಗರಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರತೀಯೊಬ್ಬ ಕನ್ನಡಿಗ ಸ್ಪಂದಿಸಬೇಕು. ಈ ಬಗ್ಗೆ ಆಮಂತ್ರಣಕ್ಕೆ ಕಾಯಬಾರದು ಎಂದು ಗೋವಿಂದ ಭಟ್ ಬಳ್ಳಮೂಲೆ ಅವರು ಹೇಳಿದರು.
    ಧರಣಿಯನ್ನು ಉದ್ದೇಶಿಸಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ತಾರಾನಾಥ ಮಧೂರು, ರಾಮ್ ಪ್ರಸಾದ್, ಬಾಲಕೃಷ್ಣ ಅಗ್ಗಿತ್ತಾಯ, ಪ್ರಭಾವತಿ ಕೆದಿಲಾಯ, ಸತೀಶ್ ಮಾಸ್ಟರ್ ಕೂಡ್ಲು, ಗೋಪಾಲಕೃಷ್ಣ ಭಟ್ ಮುಳ್ಳೇರಿಯ, ಮಂಗಲ್ಪಾಡಿ ಗ್ರಾ.ಪಂ. ಮಾಜಿ ಸದಸ್ಯ, ತೆಹ್ರಿಕೆ ಉದರ್ುವಿನ ರಾಜ್ಯ ಕಾರ್ಯದಶರ್ಿ  ಅಝೀಂ ಮಣಿಮುಂಡ, ವಿಶ್ವನಾಥ ರಾವ್, ಶ್ಯಾಮ್ ಭಟ್, ಡಾ.ಯು.ಮಹೇಶ್ವರಿ, ಕೇಶವ ಭಟ್ ಕೊಡ್ಲಮೊಗರು ಮೊದಲಾದವರು ಮಾತನಾಡಿದರು.
  ಧರಣಿಯಲ್ಲಿ ವಾಮನ ರಾವ್ ಬೇಕಲ್, ಡಾ.ಗಣಪತಿ ಭಟ್, ಜೋಗೇಂದ್ರನಾಥ್ ವಿದ್ಯಾನಗರ, ಮಹೇಶ್ ಬಂಗೇರ, ಟಿ.ಶಂಕರನಾರಾಯಣ ಭಟ್, ಕುಶಲ ಪಾರೆಕಟ್ಟೆ, ಕೆ.ಎನ್.ವೆಂಕಟ್ರಮಣ ಹೊಳ್ಳ, ವಿಶ್ವನಾಥ ಮಾಸ್ಟರ್, ಪುರುಷೋತ್ತಮ ನಾಕ್, ಜ್ಯೋತ್ಸ್ನ ಕಡಂದೇಲು, ಸುಂದರ ರಾವ್, ಸೌಮ್ಯ, ಸತ್ಯನಾರಾಯಣ ಕಾಸರಗೋಡು, ಸದಾಶಿವ ಶಮರ್ಾ,ವಿನೋದ್ ಮೊದಲಾದವರು ಉಪಸ್ಥಿತರಿದ್ದರು.
   ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಗುರುಪ್ರಸಾದ್ ಕೋಟೆಕಣಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಹಿ ಅಭಿಯಾನ ಆರಂಭಗೊಂಡಿತು. ಗುರುವಾರವೂ ಬೆಳಿಗ್ಗಿನಿಂದ ಸಂಜೆಯ ತನಕ ಧರಣಿ ನಡೆಯಲಿದೆ.
     ಮಾಸ್ರ್ಟುಗಳು ಎಲ್ಲೋದ್ರು?
   ಬುಧವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಬೆರಳೆಣಿಕೆಯ ಕನ್ನಡ ಅಧ್ಯಾಪಕರು ಮಾತ್ರ ಭಾಗವಹಿಸಿದ್ದರು. 1400 ರಷ್ಟು ಕನ್ನಡ ಅಧ್ಯಾಪಕರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಈ ಪೈಕಿ 8 ಕ್ಕಿಂತ ಕಡಿಮೆ ಸಂಖ್ಯೆಯ ಶಿಕ್ಷಕರು ಮಾತ್ರ ಪಾಲ್ಗೊಂಡಿದ್ದರು. ಗಡಿನಾಡಿನಲ್ಲಿ ಕನ್ನಡ ಭಾಷೆಯ ಮೇಲಾಗುವ ಗಧಾಪ್ರಹಾರದ ಮೊದಲ ಬಲಿಪಶುಗಳು ತಾವೆಂಬುದನ್ನು ಮರೆತಂತೆ ಕನ್ನಡ ಅಧ್ಯಾಪಕರು ವ್ಯವಹರಿಸಿರುವುದು ನಿರಾಶೆಗೊಳಿಸಿತು. ಭಾಷೆಯ ಮೇಲೆ ಇಷ್ಟೆಲ್ಲ ಪ್ರಹಾರಗಳಾಗುತ್ತಿದ್ದರೂ, ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಭೇಟಿ ನೀಡದಿರುವುದು ಸವ್ತ್ರ ಖಂಡನೆಗೆ ಗ್ರಾಸವಾಗುತ್ತಿದೆ. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಹಾಲಿ ಪದಾಧಿಕಾರಿಗಳೂ ಗೈರು ಹಾಜರಾಗುವ ಮೂಲಕ ರಾಜ್ಯ ಸರಕಾರದ ಭಾಷಾ ಕಾನೂನಿಗೆ  ಬೆಂಬಲ ಸೂಚಿಸಿದಂತೆ ಭಾಸವಾಯಿತು.
   ಮಕ್ಕಳ ಕೊರತೆ:
   ಜಿಲ್ಲೆಯ ನೂರಾರು ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ಕನ್ನಡ ಮಕ್ಕಳೂ ಧರಣಿಯಲ್ಲಿ ಪಾಲ್ಗೊಂಡಿಲ್ಲ. ಬೇಸಿಗೆ ರಜಾ ಕಾಲಾವಧಿಯಾಗಿದ್ದರೂ ಭಾಷೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಅಸ್ತಿತ್ವದ ಪ್ರಶ್ನೆಯ ನಿಟ್ಟಿನಲ್ಲಾದರೂ ಮಕ್ಕಳನ್ನು ಪಾಲ್ಗೊಳಿಸಬಹುದಾಗಿತ್ತು.
    ಯುವ ಸಂಘಟನೆಗಳು ಏನಾದವು?
    ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿರುವ ಅತ್ಯಧಿಕ ಕನ್ನಡಿಗರ ಯುವ ಸಂಘಟನೆಗಳ ಓರ್ವನೇ ಓರ್ವ ಪ್ರತಿನಿಧಿಯಾದರೂ ಧರಣಿಯಲ್ಲಿ ಭಾಗವಹಿಸದಿರುವುದೂ ಭಾಷಾ ಅಸ್ಮಿತೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಈ ರೀತಿಯ ಮನೋಭಾವ ಬೆಳೆದಂತೆಲ್ಲ ಇಲ್ಲಿ ಮಲೆಯಾಳೀಕರಣದ ದಟ್ಟತೆ ಬಿಗಿಗೊಳ್ಳುವ ಬಗ್ಗೆ ಯಾರೊಬ್ಬರೂ ಚಿಂತಿಸದಿರುವುದು ಆಶ್ಚರ್ಯ ಮೂಡಿಸುತ್ತಿದೆ.
   ವಕರ್ಾಡಿ, ಮೀಂಜ-ಮೀಯಪದವು, ಮಂಜೇಶ್ವರ, ಐಲ, ಪೈವಳಿಕೆ, ಬಾಯಾರು, ಹೇರೂರು, ಚೇವಾರು, ಧರ್ಮತ್ತಡ್ಕ, ಕುಂಬಳೆ, ನೀಚರ್ಾಲು, ಬದಿಯಡ್ಕ, ಪೆರ್ಲ, ಪುತ್ತಿಗೆ, ಕಾಟುಕುಕ್ಕೆ, ಏತಡ್ಕ, ಮುಳ್ಳೇರಿಯ, ಅಡೂರು, ಕಾರಡ್ಕ, ಮಲ್ಲ, ಬೋವಿಕ್ಕಾನ, ಎಡನೀರು ಮೊದಲಾದಡೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಆಗಾಗ ನಡೆಯುವ ಯಕ್ಷಗಾನ ಬಯಲಾಟ ಪ್ರದರ್ಶನಗಳಿಗೆ ಕನಿಷ್ಠ ವೆಂದರೂ 1 ಸಾವಿರದಷ್ಟು ಜನರು ಸೇರುತ್ತಾರೆ. ಹಾಗಿದ್ದೂ ಬುಧವಾರದ ಧರಣಿಯಲ್ಲಿ ಅಂತಹ ಯಾರೊಬ್ಬರೂ ಪಾಲ್ಗೊಳ್ಳದಿರುವುದು ಭಾಷೆಯ ಬಗೆಗಿನ ಅಭಿಮಾನವನ್ನು ನಗ್ನವಾಗಿ ಪ್ರಶ್ನಿಸಿದಂತಿದೆ.
               ಹೀಗೊಂಬ ಸಂತ- ಹೋರಾಟಗಾರ ಭಾಗಿ
   ಸರಣಿ ಸತ್ಯಾಗ್ರಹದಲ್ಲಿ ಅತ್ಯಂತ ಹಿರಿಯ ಕನ್ನಡ ಹೋರಾಟಗಾರರಾದ ನ್ಯಾಯವಾದಿ ಅಡೂರು ಉಮೇಶ್ ನಾಕ್ ಅವರು ಭಾಗವಹಿಸಿ ಸ್ಪೂತರ್ಿ ತುಂಬಿದರು.
         ಈ ಹಿಂದೆ ಕಾಸರಗೋಡಿನಲ್ಲಿ ನಡೆದ ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅಡೂರು ಉಮೇಶ್ ನಾಕ್ ಅವರು ಈ ಹಿಂದಿನ ಹೋರಾಟದ ನೆನಪಿನಲ್ಲಿ ಭಾಗವಹಿಸಿದರು. ಕಯ್ಯಾರ ಕಿಞ್ಞಣ್ಣ ರೈ, ಮಹಾಬಲ ಭಂಡಾರಿ. ಯು.ಪಿ.ಕುಣಿಕುಳ್ಳಾಯ ಮೊದಲಾದ ಹಿರಿಯ ಹೋರಾಟಗಾರರೊಂದಿಗೆ ಅಡೂರು ಉಮೇಶ್ ನಾಕ್ ಭಾಗವಹಿಸಿದ್ದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries