HEALTH TIPS

No title

              ಕೇಂದ್ರ ಸರಕಾರದ ಹೊಸ ನಡೆ-ಸಕರ್ಾರದ 10 ಜಂಟಿ-ಕಾರ್ಯದಶರ್ಿ ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ನೇರ ನೇಮಕ
      ನವದೆಹಲಿ: ಖಾಸಗಿ ವಲಯದಿಂದ ಪ್ರತಿಭಾನ್ವಿತರನ್ನು ಸೆಳೆಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ 10 ಹಿರಿಯ ಮಟ್ಟದ ಅಧಿಕಾರಿಗಳ ಹುದ್ದೆಗೆ ಖಾಸಗಿ ವಲಯದಿಂದ ನಿದರ್ಿಷ್ಟ ಅವಧಿಗೆ ನೇರ ನೇಮಕಾತಿ ಮಾಡಲು ಅಜರ್ಿ ಆಹ್ವಾನಿಸಿದೆ.
     ಸಕರ್ಾರದ ವಿವಿಧ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರುವ ಜಂಟಿ ಕಾರ್ಯದಶರ್ಿಗಳ ಹುದ್ದೆಯನ್ನು ಇದುವರೆಗೆ ಸಾಮಾನ್ಯವಾಗಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೀಡಲಾಗುತ್ತಿತ್ತು.
     ಇನ್ನು ಮುಂದೆ ಸಕರ್ಾರ ಖಾಸಗಿ ವಲಯದ ಪ್ರತಿಭಾವಂತರಿಗೆ ಸಹ ಮನ್ನಣೆ ನೀಡಲು ಮುಂದಾಗಿದೆ. ಸಕರ್ಾರದ ಈ ಯೋಜನೆಗೆ ಲ್ಯಾಟರಲ್ ಎಂಟ್ರಿ ಎಂದು ಕರೆಯಲಾಗುತ್ತದೆ. ಇದು ಹಲವು ಸಮಯಗಳಿಂದ ಸಕರ್ಾರದ ಮಟ್ಟದಲ್ಲಿ ಚಚರ್ೆಯಲ್ಲಿತ್ತು. ಇದೇ ಮೊದಲ ಬಾರಿಗೆ ಕೇಂದ್ರ ಸಕರ್ಾರ ಜಾರಿಗೆ ತರುತ್ತಿದೆ. ಸಕರ್ಾರದ ಆಡಳಿತಕ್ಕೆ ಹೊಸ ಆಲೋಚನೆಗಳು ಮತ್ತು ಹೊಸ ದೃಷ್ಟಿಕೋನ ತರುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಸಕರ್ಾರ ತಿಳಿಸಿದೆ.
     ಸಿಬ್ಬಂದಿ ತರಬೇತಿ ಇಲಾಖೆಯ ಅಧಿಸೂಚನೆ ಪ್ರಕಾರ, ಅದ್ವಿತೀಯ ಪ್ರತಿಭಾವಂತ 10 ಅಭ್ಯಥರ್ಿಗಳನ್ನು ಸಕರ್ಾರದ ಇಲಾಖೆಗಳಿಗೆ ಜಂಟಿ ಕಾರ್ಯದಶರ್ಿಯನ್ನಾಗಿ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಖಾಸಗಿ ವಲಯಗಳಲ್ಲಿ ತುಲನಾತ್ಮಕ ಮಟ್ಟದಲ್ಲಿ ಕೆಲಸ ಮಾಡುವ ವ್ಯಕ್ತಿಗಳು, ಸಲಹಾ ಸಂಘಟನೆಗಳು, ಅಂತಾರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿದ 40 ವರ್ಷದೊಳಗಿನ ಮತ್ತು ಕನಿಷ್ಠ 15 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರುವವರು ಸಕರ್ಾರದ 10 ವಿವಿಧ ಇಲಾಖೆಗಳ ಜಂಟಿ ಕಾರ್ಯದಶರ್ಿ ಹುದ್ದೆಗೆ ಅಜರ್ಿ ಸಲ್ಲಿಸಬಹುದು.
    ಈ ನೇಮಕಾತಿ ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು 3ರಿಂದ 5 ವರ್ಷಗಳವರೆಗೆ ಇರುತ್ತದೆ. ಸಕರ್ಾರದ ಕಂದಾಯ, ಹಣಕಾಸಿನ ಸೇವೆಗಳು, ಆಥರ್ಿಕ ವ್ಯವಹಾರಗಳು, ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಹೀಗೆ 10 ಇಲಾಖೆಗಳಿಗೆ ನೇಮಕಾತಿ ನಡೆಯಲಿದೆ.
    ಈ ಹುದ್ದೆಗೆ ಈಗಾಗಲೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಸಕರ್ಾರಗಳ ಸಾರ್ವಜನಿಕ ವಲಯಗಳಲ್ಲಿ ಸಮಾನ ಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಗಿ ಸಹ ಮುಕ್ತವಾಗಿದ್ದು ಅವರು ಕೂಡ ಅಜರ್ಿ ಸಲ್ಲಿಸಬಹುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries