HEALTH TIPS

No title

                 ವಕರ್ಾಡಿ ಬಂಟರ ಸಂಘದಿಂದ ಸಿದ್ಧತಾ ಸಭೆ 
               ಗ್ರಾಮೀಣ ಕಾರ್ಯಕ್ರಮಗಳಿಂದ ಸಮಾಜದ ಉನ್ನತಿ
     ಮಂಜೇಶ್ವರ: ಬಂಟರ ಸಂಘ ವಕರ್ಾಡಿ ವಲಯ ಹಾಗೂ ಗ್ರಾಮ ಸಮಿತಿಗಳ ಆಶ್ರಯದಲ್ಲಿ  ಆಗಸ್ಟ್  12ರಂದು ಸುಂಕದಕಟ್ಟೆ  ಕೋಳ್ಯೂರು ಆಡಿಟೋರಿಯಂನಲ್ಲಿ  ನಡೆಯಲಿರುವ ಆಟಿಡೊಂಜಿ ಕೂಟೋ ಇದರ ಅಂಗವಾಗಿ ಕೆಸರುಡೊಂಜಿ ದಿನ ಕಾರ್ಯಕ್ರಮವು ನಿಸರ್ಗ ರಮಣೀಯವಾದ ಪಾವಳದ ಗದ್ದೆಯಲ್ಲಿ  ಜರಗಿಸುವುದರ ಪ್ರಯುಕ್ತ  ಪೂರ್ವಭಾವಿ ಸಭೆಯು ಪಾವಳ ಸಂತೋಷ್ ಫ್ರೆಂಡ್ಸ್  ಕ್ಲಬ್ನ ಕಲಾ ವೇದಿಕೆಯಲ್ಲಿ ಇತ್ತೀಚೆಗೆ ಜರಗಿತು.
    ಮುಂದಿನ ಕಾರ್ಯಕ್ರಮಗಳ ರೂಪುರೇಷೆ ತಯಾರಿಸಲಾಯಿತು. ಜೊತೆಗೆ ಕಾರ್ಯಕಾರಿ ಸಮಿತಿಗಳನ್ನು  ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು  ವಕರ್ಾಡಿ ಬಂಟರ ಸಂಘದ ಅಧ್ಯಕ್ಷ  ದೇವಪ್ಪ  ಶೆಟ್ಟಿ  ಚಾವಡಿಬೈಲುಗುತ್ತು  ವಹಿಸಿ, ಇಂತಹ ಸಮಾರಂಭವನ್ನು  ನಡೆಸುವಂತಹ ಕಾರ್ಯಕ್ಷಮತೆ ಮತ್ತಷ್ಟು  ವೃದ್ಧಿಯಾಗಲಿ. ಜೀವನೋತ್ಸಾಹ ಪುಟಿದೇಳಲಿ ಅಲ್ಲದೆ ಬದುಕಿಗೊಂದು ನೆಲೆಗಟ್ಟು  ಮೂಡಿಬರಲಿ. ಜೀವನದುದ್ದಕ್ಕೂ ಅದು ದಾರಿದೀಪವಾಗಲಿ ಎಂದರು. ಗ್ರಾಮೀಣ ಕಾರ್ಯಕ್ರಮಗಳು ನಮ್ಮ  ಸಮಾಜದ ಏಳಿಗೆಗೆ ಪೂರಕವಾಗಲಿ ಮತ್ತು  ಇತರರಿಗೆ ಮಾದರಿಯಾಗಲಿ ಎಂದು ಸದಸ್ಯರನ್ನು  ಹುರಿದುಂಬಿಸಿ ಶುಭ ಹಾರೈಸಿದರು.
    ಮುಖಂಡರಾದ ಸುಭಾಶ್ಚಂದ್ರ ಅಡಪ ಕಲ್ಲೂರುಬೀಡು, ವಕರ್ಾಡಿ ಗ್ರಾಮ ಸಮಿತಿಯ ಅಧ್ಯಕ್ಷ  ಬಾಲಕೃಷ್ಣ  ಶೆಟ್ಟಿ  ಪಾವಳಗುತ್ತು  ಉಪಸ್ಥಿತರಿದ್ದರು.  ಬಂಟರ ಸಂಘದ ವಕರ್ಾಡಿ ವಲಯದ ಕಾರ್ಯದಶರ್ಿ ರವಿಚಂದ್ರ ಶೆಟ್ಟಿ ಅರಿಬೈಲು, ಕೋಶಾಧಿಕಾರಿ ಧೀರಜ್ ಶೆಟ್ಟಿ  ಅರಿಬೈಲು, ಸುಳ್ಯಮೆ ಗ್ರಾಮ ಸಮಿತಿಯ ಕಾರ್ಯದಶರ್ಿ ಉದಯಕುಮಾರ್ ಶೆಟ್ಟಿ, ಕೊಡ್ಲಮೊಗರು ಗ್ರಾಮ ಸಮಿತಿಯ ಅಧ್ಯಕ್ಷ  ಮನೋಜ್ ಶೆಟ್ಟಿ, ರಾಜ್ಕುಮಾರ್ ಮುಟ್ಲ, ವೀತಾ ಎಚ್.ಪೂಂಜ ಮುಂತಾದವರು ಉಪಸ್ಥಿತರಿದ್ದರು.
    ಮಹಿಳಾ ಘಟಕದ ವಕರ್ಾಡಿ ವಲಯ ಸಮಿತಿಯ ಕಾರ್ಯದಶರ್ಿ ಪ್ರಭಾವತಿ ಸಿ.ಶೆಟ್ಟಿ  ಪಾವಳಗುತ್ತು  ಸ್ವಾಗತಿಸಿ, ವಕರ್ಾಡಿ ಗ್ರಾಮ ಸಮಿತಿಯ ಕಾರ್ಯದಶರ್ಿ ಪದ್ಮನಾಭ ಶೆಟ್ಟಿ  ತಿಮ್ಮಂಗೂರು ವಂದಿಸಿದರು. ವಕರ್ಾಡಿ ವಲಯದ ಸಂಘಟನಾ ಕಾರ್ಯದಶರ್ಿ ಜಯಂತ ಶೆಟ್ಟಿ  ಪಾವಳ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries