1205ನೇ ಮದ್ಯವರ್ಜನ ಶಿಬಿರ ಸಮಾರೋಪ
ಮಂಜೇಶ್ವರ: ಸಮಾಜ ಮತ್ತು ರಾಷ್ಟ್ರದ ಸಾರ್ವಭೌಮತೆ, ಸುದೃಢ ಭವಿಷ್ಯತ್ತನ್ನು ಮುನ್ನಡೆಸುವಲ್ಲಿ ಪ್ರಜ್ಞಾವಂತ ಯುವ ಜನರು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯನ್ನು ಗಲಿಬಿಲಿಗೊಳಿಸುವ ಮದ್ಯ ಸಹಿತ ವಿವಿಧ ವ್ಯಸನಗಳಿಂದ ಸಮಾಜವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಶ್ರೀಕ್ಷೇತ್ರ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನಗೈದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ, ಬೆಳ್ತಂಗಡಿಯ ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ, ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ವಕರ್ಾಡಿ ಸುಂಕದಕಟ್ಟೆಯಲ್ಲಿ ಆಯೋಜಿಸಲಾಗಿದ್ದ 1205ನೇ ಮದ್ಯವರ್ಜನ ಶಿಬಿರದ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನಗೈದು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಜನ ಕಲ್ಯಾಣದ ವಿವಿಧ ಯೋಜನೆಗಳು ಸಮಾಜದ ಸಮರ್ಥ ಮುನ್ನಡೆಯಲ್ಲಿ ದಾರಿದೀಪವಾಗಿದೆ. ಆದರೆ ಲಭ್ಯ ಅನುಕೂಲತೆಗಳನ್ನು ಬಳಸುವಲ್ಲಿ ಹಲವೆಡೆ ವ್ಯಸನಗಳು ಗೋಡೆಗಳಾಗಿದ್ದು, ಸರ್ವತೋಮುಖ ಶ್ರೇಯಕ್ಕೆ ವ್ಯಸನ ಮುಕ್ತರಾಗಿ ಹೊಸ ಕನಸಿನೊಂದಿಗೆ ಕೈಜೋಡಿಸಿದರೆ ಪ್ರತಿಯೊಬ್ಬರ ಬದುಕು ನವೋತ್ಥಾನದೆಡೆಗೆ ಸಾಗುವುದು ಎಂದು ಶ್ರೀಗಳು ತಿಳಿಸಿದರು.
ಸುಂಕದಕಟ್ಟೆ ಇಗಜರ್ಿಯ ಧರ್ಮಗುರು ಫಾ. ಪ್ರಾನ್ಸಿಸ್ ರೋಡ್ರಿಗಸ್ ಸಮಾರೋಪ ಭಾಷಣಗೈದು ಮಾತನಾಡಿ, ಬದುಕಿನ ತಪ್ಪಿದ ಹಾದಿಯನ್ನು ಮರಳಿ ತರುವಲ್ಲಿ ಮದ್ಯವರ್ಜನ ಶಿಬಿರ ಬೆಳಕಿಂಡಿಯಾಗಿ ಒದಗಿಬಂದಿದ್ದು, ಸತ್ಯ, ಧರ್ಮ, ನ್ಯಾಯಯುತ ಬಾಳಿನೆಡೆಗೆ ಸಾಗುವಲ್ಲಿ ಪ್ರೇರಣೆ ನೀಡಲಿ ಎಂದು ತಿಳಿಸಿದರು.
1205ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶ್ವಥ್ ಲಾಲ್ಬಾಘ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇರುವ ಸೀಮಿತ ಕಾಲಾವಧಿಯ ಬದುಕಿನಲ್ಲಿ ಸಾದಿಸಬೇಕಾದ ಹಲವು ಲಕ್ಷ್ಯಗಳು ಪ್ರತಿಯೊಬ್ಬರಿಗೂ ಇದೆ. ಆದರೆ ಕೆಲವೊಮ್ಮೆ ಹಾಕುವ ತಪ್ಪು ಹೆಜ್ಜೆಗಳು ವಿಚಲಿತಗೊಳಿಸಿದರೂ ಬಳಿಕ ಅದರಿಂದ ಹೊರಬಂದು ಸಾಧನೆಯೆಡೆಗೆ ಮುನ್ನಡೆಯುವುದು ಯಶಸ್ಸಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಕಾಸರಗೋಡು ಡಿವೈಎಸ್ಪಿ ಸುಕುಮಾರನ್, ಸಾಮಾಜಿಕ ಕಾರ್ಯಕರ್ತ ಬಿ.ವಿ.ರಾಜನ್, ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ಸಂಘಟಕ ಸತೀಶ ಅಡಪ ಸಂಕಬೈಲು, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಪೈವಳಿಕೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ,ಶಂಕರ ಭಂಡಾರಿ, ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಮಂಗಳುರು=ಕಾಸರಗೋಡು ವಲಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಜಯರಾಮ ಬಲ್ಲಂಗುಡ್ಡೆ, ದಯಾಕರ ಮಾಡ, ಕೃಷ್ಣವೇಣಿ, ಹರೀಶ್ ಶೆಟ್ಟಿ ಕಡಂಬಾರ್, ಅಜಿತ್ ಎಂ.ಸಿ.ಲಾಲ್ಬಾಘ್, ವಿಶ್ವನಾಥ ಮುಡಿಮಾರು ಉಪಸ್ಥಿತರಿದ್ದು ಮಾತನಾಡಿದರು. ಸುಮನಾ ವಾಸುದೇವ ಶೆಟ್ಟಿಗಾರ್ ಸ್ವಾಗತಿಸಿ, ವಲಯ ಮೇಲ್ವಿಚಾರಕ ವಿಶ್ವನಾಥ ಗೌಡ ವಂದಿಸಿದರು. ಕಿಶೋರ್ ಕುಮಾರ್ ಪಾವಳ ಕಾರ್ಯಕ್ರಮ ನಿರೂಪಿಸಿದರು.
ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ 77 ಮಂದಿ ಶಿಬಿರಾಥರ್ಿಗಳನ್ನು ಶನಿವಾರ ರಾತ್ರಿ ಬೀಳ್ಕೊಡಲಾಯಿತು. ವಿದಾಯ ಕೂಟದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶ್ವಥ್ ಲಾಲ್ಬಾಘ್, ಹರೀಶ್ ಕಡಂಬಾರ್, ಯೋಜನಾಧಿಕಾರಿ ಚೇತನಾ ಎಂ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಶಿಬಿರಾಧಿಕಾರಿ ನಾಗರಾಜ್, ಆರೋಗ್ಯ ಸಂಚಾಲಕಿ ನೇತ್ರಾವತಿ, ಪವನ್ ಕಿಶೋರ್, ವಿಶ್ವನಾಥ ಗೌಡ, ಆನಂದ ಟಿ, ನಾಗೇಶ್ ಕೋಡಂದೂರು, ಸುಮನಾ ಮೊದಲಾದವರು ಭಾಗವಹಿಸಿದ್ದರು.