HEALTH TIPS

No title

                    ಜೂನ್ 17 : ಪುತ್ತೂರಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದಿಂದ `ಅಥರ್ಾಂತರಂಗ-8'
    ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆ ನಡೆಸಿಕೊಂಡು ಬರುತ್ತಿರುವ ತಾಳಮದ್ದಳೆ ಅಧ್ಯಯನ ಶಿಬಿರ ಅಥರ್ಾಂತರಂಗ ಸರಣಿ ಕಾರ್ಯಕ್ರಮದ ಎಂಟನೇ ಕಾರ್ಯಕ್ರಮ  ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಶ್ರಯದಲ್ಲಿ ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜೂನ್ 17ನೇ ಭಾನುವಾರ ಬೆಳಿಗ್ಗೆ  10ರಿಂದ `ಅಥರ್ಾಂತರಂಗ-8' ಜರಗಲಿದೆ.
    ಪ್ರಸಿದ್ಧ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ಸಮರ್ಥ ನಿದರ್ೇಶನದಲ್ಲಿ ತಾಳಮದ್ದಳೆ ಅರ್ಥಗಾರಿಕೆಯ ಅಧ್ಯಯನವನ್ನು ಗುರಿಯಾಗಿರಿಸಿರುವ ಶಿಬಿರ ಸರಣಿ ಕಾರ್ಯಕ್ರಮ ಇದಾಗಿದೆ. ಶಿಬಿರವನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಉದ್ಘಾಟಿಸಲಿದ್ದು, ಹಿರಿಯ ಅರ್ಥಧಾರಿ ಮೂಡಂಬೈಲು  ಗೋಪಾಲಕೃಷ್ಣ ಶಾಸ್ತ್ರಿ ಸವರ್ಾಧ್ಯಕ್ಷತೆಯನ್ನು ವಹಿಸಲಿದ್ದಾರೆ. 
   ವಿಶೇಷ ಆಹ್ವಾನಿತರಾಗಿ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಸಂಸ್ಥೆಯ ಅಧ್ಯಕ್ಷ ಭಾಸ್ಕರ ಆಚಾರ್ಯ, ಲೇಖಕ ಕಲಾವಿದ ನಾ.ಕಾರಂತ ಪೆರಾಜೆ, ಉಪ್ಪಿನಂಗಡಿ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಸುಬ್ಬಯ್ಯ ಕೈಕಂಬ, ಧೀ ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಸಂಘದ ನಿದರ್ೇಶಕಿ ಪದ್ಮಾ ಕೆ.ಆರ್ ಆಚಾರ್, ಉಪನ್ಯಾಸಕ ಕುಮಾರ ಶಂಕರನಾರಾಯಣ ಭಾಗವಹಿಸಲಿದ್ದಾರೆ.
   ಸಮಾರಂಭದಲ್ಲಿ ಪೆರುವಡಿ ನಾರಾಯಣ ಭಟ್, ಪಾತಾಳ ವೆಂಕಟರಮಣ ಭಟ್,  ಮಾವೆ ದಿನಕರ ಭಟ್ ವಿಟ್ಲ, ರಮಾನಂದ ನೆಲ್ಲಿತ್ತಾಯ, ಸಿ.ಮಹಾದೇವ ಶಾಸ್ತ್ರಿ ಮಾಣಿಲ, ಮಹೇಶ್ ಕಜೆ, ಪಿ.ಜಿ.ಜಗನ್ನಿವಾಸ ರಾವ್, ಯೋಗೀಶ ರಾವ್ ಚಿಗುರುಪಾದೆ, ಎಸ್.ವಿ.ಉದಯಕುಮಾರ್ ಶೆಟ್ಟಿ ಮಣಿಪಾಲ, ಡಾ.ಕೆ.ಸೂರ್ಯನಾರಾಯಣ, ಕಾಡೂರು ಸೀತಾರಾಮ ಶಾಸ್ತ್ರಿ, ಮಹೇಶ್ ಸುಳ್ಯ ಉಪಸ್ಥಿತರಿರುವರು.
    ಗುರುರಾಜ ಹೊಳ್ಳ ಬಾಯಾರು ನಿರೂಪಿಸಲಿದ್ದು, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಸ್ತಾವಿಕವಾಗಿ ಮಾತನಾಡುವರು. ಶಿಬಿರದಲ್ಲಿ ಪೀಠಿಕೆಯಲ್ಲಿ ಸ್ವಭಾವ ಚಿತ್ರಣ ಸಾತ್ವಿಕ-ರಾಜಸ-ತಾಮಸ ಒಳಗೊಂಡ `ಪೀಠಿಕಾ ಪ್ರಕರಣ', ಸಂವಾದದ ಮೇಲೆ ಭಾಗವತಿಕೆಯ ಪರಿಣಾಮ ಎನ್ನುವ `ಸಂವಾದ ಪ್ರಕರಣ',  ಭಕ್ತಿ-ಶೃಂಗಾರ-ಕ್ರೋಧ ವನ್ನೊಳಗೊಂಡ ಭಾವ ಪೋಷಣೆ' ಪ್ರಾತ್ಯಕ್ಷಿಕೆ ಹಾಗೂ ಮುಕ್ತ ಸಂವಾದ ಅವಲೋಕನ ನಡೆಯಲಿದೆ. 
   ಕಲಾವಿದರಾಗಿ ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣ ಪ್ರಕಾಶ ಉಳಿತ್ತಾಯ, ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್,  ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ವಿಷ್ಣು ಶರ್ಮ ವಾಟೆಪಡ್ಪು ಭಾಗವಹಿಸುವರು. ಬಳಿಕ `ಭೀಷ್ಮ ಪ್ರತಿಜ್ಞೆ" ತಾಳಮದ್ದಳೆ ಜರಗಲಿದ್ದು ಕಲಾವಿದರಾಗಿ ಹಿಮ್ಮೇಳದಲ್ಲಿ ರಮೇಶ ಭಟ್ ಪುತ್ತೂರು, ಕೃಷ್ಣ ಪ್ರಕಾಶ ಉಳಿತ್ತಾಯ, ಜಗನ್ನಿವಾಸ ರಾವ್ ಪುತ್ತೂರು, ಉದಯ ಕಂಬಾರ್, ಮುರಲೀ ಮಾಧವ ಮಧೂರು ಹಾಗೂ ಅರ್ಥಧಾರಿಗಳಾಗಿ  ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ  ಕಲ್ಚಾರ್, ಹರೀಶ ಬಳಂತಿಮೊಗರು, ಶ್ರುತ ಕೀತರ್ಿರಾಜ್ ಉಜಿರೆ ಭಾಗವಹಿಸುವರು. ಎಂದು ಸಿರಿಬಾಗಿಲು ಪ್ರತಿಷ್ಠಾನದ ಪತ್ರಿಕಾ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries