ಉಗ್ರ ನಿಗ್ರಹ ಕಾಯರ್ಾಚರಣೆ ಮುಂದುವರಿಸಲು ನಿರ್ಧರಿಸಿದ ಕೇಂದ್ರ
ನವದೆಹಲಿ: ರಂಜಾನ್ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೇ 17ರಿಂದ ಘೋಷಿಸಲಾಗಿರುವ ಕದನ ವಿರಾಮವನ್ನು ವಾಪಸ್ ಪಡೆಯಲು ಕೇಂದ್ರ ಸಕರ್ಾರ ನಿರ್ಧರಿಸಿದೆ. ಜತೆಗೆ, ಉಗ್ರ ನಿಗ್ರಹ ಕಾಯರ್ಾಚರಣೆಯನ್ನು ಮುಂದುವರಿಸುವುದಾಗಿ ತಿಳಿಸಿದೆ.
ರಂಜಾನ್ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾಯರ್ಾಚರಣೆಗೆ ನೀಡಲಾಗಿದ್ದ ತಡೆಯನ್ನು ಇನ್ನು ಮುಂದುವರಿಸುವುದಿಲ್ಲ ಎಂದು ಗೃಹ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.
ಗೃಹ ಸಚಿವ ರಾಜನಾಥ್ ಸಿಂಗ್ ಸಹ ಈ ಕುರಿತು ಟ್ವೀಟ್ ಮಾಡಿ, `ನಮ್ಮ ಯೋಜನೆಗೆ ಎಲ್ಲರೂ ಸಹಕಾರ ನೀಡುತ್ತಾರೆ ಎಂದುಕೊಂಡಿದ್ದೆವು. ಈ ಅವಧಿಯಲ್ಲಿ ಭದ್ರತಾ ಪಡೆಗಳೂ ಬಹಳ ಸಂಯಮದಿಂದ ಇದ್ದವು. ಈ ನಿಧರ್ಾರಕ್ಕೆ ಜಮ್ಮು ಮತ್ತು ಕಾಶ್ಮೀರವೂ ಸೇರಿ ದೇಶದಾದ್ಯಂತ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಭಯೋತ್ಪಾದಕರು ದಾಳಿ ಮುಂದುವರಿಸಿದರು. ಕೆಲವು ನಾಗರಿಕರು ಮತ್ತು ಯೋಧರು ಉಗ್ರರ ದಾಳಿಗೆ ಬಲಿಯಾದರೆ ಹಲವರು ಗಾಯಗೊಂಡರು' ಎಂದು ಹೇಳಿದ್ದಾರೆ.
ಭಯೋತ್ಪಾದಕರ ದಾಳಿ, ಹಿಂಸಾಚಾರ, ಹತ್ಯೆ ತಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ' ಎಂದೂ ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ.