ಅಂತ್ಯೋದಯ ರೈಲು ನಿಲುಗಡೆಗೆ ಅವಕಾಶ ನೀಡದಲ್ಲಿ 17 ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರತಿಭಟನೆ-ಸಂಸದ- ಸಮಸದರಿಂದ ಮೋದಿ ಯೋಜನೆಗಳಿಗೆ ನೀರಸತೆ-ನ್ಯಾ.ಕೆ.ಶ್ರೀಕಾಂತ್
ಕಾಸರಗೋಡು: ಅಂತ್ಯೋದಯ ರೈಲು ಯಾನಕ್ಕೆ ಕಾಸರಗೋಡಿನಲ್ಲಿ ನಿಲುಗಡೆ ನೀಡದಿದ್ದಲ್ಲಿ ಜಿಲ್ಲೆಯ 17 ನಿಲ್ದಾಣಗಳಲ್ಲೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪ್ರಬಲ ಹೋರಾಟ ನಡೆಸಲಾಗುವುದೆಂದು ಕಾಸರಗೋಡು ಸಂಸದ ಪಿ.ಕರುಣಾಕರನ್ ಮುನ್ನೆಚ್ಚರಿಕೆ ನೀಡಿರುವರು.
ಕೊಚ್ಚಿವೇಲಿ&ಮಂಗಳೂರು ಅಂತ್ಯೋದಯ ಎಕ್ಸ್ಫ್ರೆಸ್ ರೈಲಿಗೆ ಕಾಸರಗೋಡಿನಲ್ಲೂ ನಿಲುಗಡೆ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಡಿವೈಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಮಂಗಳವಾರ ಹಮ್ಮಿಕೊಂಡ ಮಾಚರ್್ ಉದ್ಘಾಟಿಸಿ ಅವರು ಮಾತನಾಡಿದರು.
ಹೋರಾಟದಿಂದ ಯಾವ ಕಾರಣಕ್ಕೂ ಹಿಂದೆ ಸರಿಯಲಾರೆವು. ಕಾಸರಗೋಡಿನಲ್ಲಿ ನಿಲುಗಡೆ ಅನುಮತಿಸುವ ಅಂತಿಮ ಘಟ್ಟದ ವರೆಗೂ ಹೋರಾಟ ನಡೆಸಲಾಗುವುದೆಮದು ಸಂಸದರು ತಿಳಿಸಿದರು. ಕಾಸರಗೋಡು ರೈಲು ನಿಲ್ದಾಣದಲ್ಲಿ ಅಂತ್ಯೋದಯ ರೈಲಿಗೆ ನಿಲುಗಡೆ ನೀಡಬೇಕೆಂದು ಆಗ್ರಹಿಸಿ ರೈಲ್ವೇ ಸಚಿವರ ಕಚೇರಿಗೆ ರೈಲ್ವೇ ಬೋಡರ್್ ಅಧ್ಯಕ್ಷರು ಸಾರ್ವಜನಿಕರ ಬೇಡಿಕೆ, ಪ್ರತಿಭಟನೆಯ ಬಗ್ಗೆ ಈಗಾಗಲೇ ಮಾಹಿತಿ ನೀಡಿರುವರು ಎಂದು ಸಂಸದರು ಈ ಸಂದರ್ಭ ತಿಳಿಸಿದರು.
ಪಾಲರ್ಿಮೆಂಟ್ ನಲ್ಲಿ ತಾನು ಹೊಸ ರೈಲುಗಾಡಿಗಳಿಗಾಗಿ ಬೇಡಿಕೆಯಿಟ್ಟಾಗ ಕೇಂದ್ರ ರೈಲ್ವೇ ಸಚಿವರು ಉತ್ತರ ನೀಡಿರುವಂತೆ ರಿಸವರ್ೇಶನ್ ಇಲ್ಲದ ಅಂತ್ಯೋದಯ ಎಕ್ಸ್ಫ್ರೆಸ್ ಸೇವೆಯನ್ನು ಕೇರಳದಲ್ಲೂ ಆರಂಭಿಸಲಾಗುವುದು ಹಾಗೂ ಕಾಸರಗೋಡು ನಿಲ್ದಾಣಗಳ ಅಭಿವೃದ್ದಿಗೂ ಸಹಕರಿಸುವುದಾಗಿ ತಿಳಿಸಿದ್ದರು. ಈ ಬಗ್ಗೆ ಭರವಸೆ ಮೂಡಿಸುವಂತೆ ಇಲಾಖೆಯಿಂದ ಪತ್ರವನ್ನು ಕಳಿಸಲಾಗಿತ್ತು. ಆದರೆ ಆ ಬಳಿಕ ರೈಲ್ವೇ ನಿಗಮ ಸಿದ್ದಪಡಿಸಿದ ವೇಳಾಪಟ್ಟಿಯಲ್ಲಿ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆ ಉಲ್ಲೇಖಿಸದಿರುವುದು ಕಂಡುಬಂದಿದೆ. ಇದರ ಹಿಂದೆ ಕೇಂದ್ರ ಸರಕಾರ ಜಿಲ್ಲೆಯನ್ನು ಅವಗಣಿಸಿರುವುದಾಗಿ ಅವರು ತಿಳಿಸಿದರು.
ಮಂಗಳೂರಿನಿಂದ ಕಣ್ಣೂರಿಗೆ ಪ್ರಯಾಣಿಕರಿಲ್ಲದೆ ಖಾಲಿಯಾದ ಅಂತ್ಯೋದಯ ರೈಲು ಸಂಚರಿಸುತ್ತಿದೆ. ಪ್ರಯಾಣಿಕ ಉಪಯೋಗಕ್ಕಿಲ್ಲದ ಈ ಸಂಚಾರದಿಂದ ಇಲಾಖೆಗೆ ಏನು ಲಾಭವಿದೆ ಎಂದು ತಿಳಿಸಿದ ಸಂಸದರು, ಜನಸಾಮಾನ್ಯರ ಅಗತ್ಯಗಳಿಗೆ ರೈಲು ನಿಲುಗಡೆಗೊಳಿಸಲು ಇಲಾಖೆ ಮುಂದಾಗದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಜುಲೈ 1 ರಿಂದ ಅನಿನಿಧರ್ಿಷ್ಟಾವದಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸುದ್ದಿಗೋಷ್ಠಿ: ಪ್ರತಿಕ್ರೀಯೆ
ಅಂತ್ಯೋದಯ ಎಕ್ಸ್ಫ್ರೆಸ್ ರೈಲುಗಾಡಿ ಆರಂಭವಾಗುವ ಮೊದಲು ಸಿದ್ದಪಡಿಸಿದ ವೇಳಾಪಟ್ಟಿಯಲ್ಲಿ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆಯ ಬಗ್ಗೆ ತಿಳಿಸಲಾಗಿತ್ತು. ಆದರೆ ರೈಲು ಸಂಚಾರ ಆರಂಭಗೊಳ್ಳುತ್ತಿರುವಂತೆ ಕಾಸರಗೋಡಿನಲ್ಲಿ ನಿಲುಗಡೆ ನೀಡದಿರುವುದರ ಹಿಂದೆ ಸಿಪಿಎಂ ಪಕ್ಷ ಕೇಂದ್ರೀಕೃತ ರೈಲ್ವೇ ಉದ್ಯೋಗಸ್ಥರ ಯೂನಿಯನ್ನ ಷಡ್ಯಂತ್ರ ಇದೆ. ಹೋರಾಟದ ನಾಟಕದ ಮೂಲಕ ಕೇಂದ್ರ ಸರಕಾರಕ್ಕೆ ಮಸಿಬಳಿಯಲು ಸಿಪಿಎಂ ಹಾಗೂ ಸಂಸದರು ತೆರೆಮರೆಯ ಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಬುಧವಾರ ಕಾಸರಗೋಡಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂತ್ಯೋದಯ ರೈಲುಗಾಡಿಗೆ ಕಾಸರಗೋಡು ನಿಲುಗಡೆ ನೀಡಬೇಕೆಂಬುದು ಬಿಜೆಪಿಯದ್ದೂ ಬೇಡಿಕೆಯಾಗಿದ್ದು, ಈ ಬಗ್ಗೆ ಬಿಜೆಪಿ ಜಿಲ್ಲಾ ಸಮಿತಿಯಿಂದ ಕೇಂದ್ರ ರೈಲ್ವೇ ಸಚಿವರಿಗೆ ಮಾಹಿತಿ ನೀಡಲಾಗಿದ್ದು, ಇಲಾಖೆಯ ನಿಯಮಾನುಸಾರ ಕೆಲವು ವಾರಗಳ ಪ್ರಕ್ರಿಯೆಗಳ ಬಳಿಕ ನಿಲುಗಡೆ ಆದೇಶ ಬರಲಿದೆ ಎಂದು ಅವರು ತಿಳಿಸಿದರು.
ಸಂಸದರು ಕೇಂದ್ರದ ವಿರುದ್ದ ಜನಭಾವನೆಯನ್ನು ತಪ್ಪುದಾರಿಗೆ ತರುವ ಯತ್ನದಲ್ಲಿ ತೊಡಗಿದ್ದು, ಕೇಂದ್ರದ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲು ಉತ್ಸುಕತೆ ತೋರಿಸುತ್ತಿಲ್ಲ. ಸಂಸದರ ಆದರ್ಶ ಗ್ರಾಮ ಸಹಿತ ಎಲ್ಲಾ ಜನೋಪಯೋಗಿ ಯೋಜನೆಗಳ ಅನುಷ್ಠಾನದಿಂದ ಬಿಜೆಪಿ ವರ್ಚಸ್ಸು ವೃದ್ದಿಯಾಗುವ ಭಯದಿಂದ ಸಂಸದರು ನಿರಾಸಕ್ತಿ ತೋರಿಸುತ್ತಿರುವರೆಂದು ಅವರು ಆರೋಪಿಸಿದರು.