ಕೊಂಡೆವೂರಿನ ವೇದಕಾಲೀನ ಸಂಸ್ಕೃತಿ ಸಂವರ್ಧನೆಯ ಯೋಜನೆಗಳು ರಾಷ್ಟ್ರಕ್ಕೆ ಮಾದರಿ-ಕೇಂದ್ರ ಸಚಿವ ಶ್ರೀಪಾದ್ ಎಸ್ಸೋ ನಾಯಕ್
ಸಹಸ್ರ ನೆಲ್ಲಿ ಗಿಡಗಳ ನೆಡುವಿಕೆಗೆ ವಿದ್ಯುಕ್ತ ಚಾಲನೆ-ಪ್ರಗತಿಪರ 200 ತಳಿ ಸಂರಕ್ಷಕ ಭತ್ತದ ಕೃಷಿಕರಿಗೆ ಅಭಿನಂದನೆ
ಉಪ್ಪಳ: ಭರತ ಖಂಡದ ಪ್ರಾಚೀನವಾದ ಧರ್ಮ, ಋಜು ಮಾರ್ಗಗಳನ್ನು ಎತ್ತಿಹಿಡಿದು ಸಮೃದ್ದ ಸಮಾಜ ನಿಮರ್ಾಣದಲ್ಲಿ ಮಠ-ಮಂದಿರಗಳ ಪಾತ್ರ ಮಹತ್ತರವಾದುದು. ರಾಷ್ಟ್ರದ ಉದ್ದಗಲ ವ್ಯಾಪಿಸಿರುವ ಅಸಂಖ್ಯ ಮಠಗಳು ಇಲ್ಲಿಯ ಜೀವನ ಮೌಲ್ಯ, ಧರ್ಮದ ನೆಲೆಗಟ್ಟಿನಡಿ ಭದ್ರವಾಗಿ ಬೆಳೆಸಿದ್ದು, ಇಂದು ಮತ್ತೆ ಮಠ ಮಂದಿರಗಳು ಬಲಗೊಂಡು ಗೊಂದಲದ ಸಮಾಜವನ್ನು ಸುಸ್ಥಿತಿಗೆ ತರುವಲ್ಲಿ ಮುಂದೆಬರಬೇಕಿದ್ದು, ಕೊಂಡೆವೂರಿನ ಆಶ್ರಮ ರಾಷ್ಟ್ರಕ್ಕೆ ಮಾದರಿ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡ ಸಹಸ್ರ ವೃಕ್ಷ ಸಮೃದ್ದಿ ಅಭಿಯಾನದ ಸಹಸ್ರ ನೆಲ್ಲಿಗಿಡಗಳ ನೆಡುವ ಸಮಾರಂಭವನ್ನು ಸೋಮವಾರ ಆಶ್ರಮದ ಗಾಯತ್ರೀ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಸಮಾಜ ನಿಮರ್ಾಣದಲ್ಲಿ ಗಿಡಮರಗಳ ಸಮೃದ್ದತೆ ಅಗತ್ಯವಿದ್ದು, ಭಾರತದ ಪ್ರಾಚೀನ ಪರಂಪರೆ ಪ್ರಕೃತಿಯ ಮಹತ್ವವನ್ನು ಎತ್ತಿಹಿಡಿದಿರುವುದು ನಮ್ಮ ಪೂರ್ವಜರ ಜ್ಞಾನ ಕಾಶಿಯ ಸಂಕೇತ ಎಂದು ಅವರು ತಿಳಿಸಿದರು. ಆಧುನಿಕ ವ್ಯಾವಹಾರಿಕ ಜಗತ್ತಿನಲ್ಲಿ ಮುಳುಗೇಳುವ ನಾವಿಂದು ಶಾಂತಿ-ನೆಮ್ಮದಿ-ಆರೋಗ್ಯಪೂರ್ಣ ಜೀವನಕ್ಕೆ ಹಾತೊರೆಯುತ್ತಿರುವುದು ಇಂದಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಪರಂಪರೆಯನ್ನು ಅಪ್ಪಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮವು ವೇದಕಾಲದ ಸಮಾಜ ನಿಮರ್ಾಣದ ಕನಸಿನೊಂದಿಗೆ ಮುನ್ನಡೆಸುತ್ತಿರುವ ವಿವಿಧ ಯೋಜನೆಗಳು ಮಾದರಿಯಾಗಿದೆ ಎಂದು ಸಚಿವರು ತಿಳಿಸಿದರು. ಯೋಗ, ಆಯುವರ್ೇದಗಳು ಸುಸ್ಥಿತಿಯ ಜೀವನಕ್ಕೆ ಬೆಳಕಿಂಡಿಯಾಗಿದ್ದು, ಭಾರತ ಜಗತ್ತಿಗೆ ಈ ಹಿಂದೆ ನೀಡಿದ್ದ ಈ ಕೊಡುಗೆ ಇಂದು ವಿಶ್ವಮಾನ್ಯವಾಗಿ ಜಗದ್ಗುರುತ್ವವನ್ನು ಒದಗಿಸಲಿದೆ ಎಂದು ಸಚಿವರು ತಿಳಿಸಿದರು.
ಕನರ್ಾಟಕ ಸರಕಾರದ ಮಾಜಿ ವಿಧಾನ ಪರಿಷತ್ತು ಸದಸ್ಯ ಕೆ.ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನಗೈದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಮಾತನಾಡಿ, ಪಾರಂಪರಿಕ ಕೃಷಿ ವ್ಯವಸ್ಥೆ ಭಾರತದ ಜೀವನಾಡಿಯಾಗಿದ್ದು ಮತ್ತದನ್ನು ಬೆಳೆಸುವ ಅಗತ್ಯವಿದೆ. ವೃಕ್ಷಗಳ ಪೈಕಿ ಮಹತ್ವದ್ದಾದ ನೆಲ್ಲಿಗಿಡಗಳ ಸಂರಕ್ಷಣೆ ಮಾಡಿ ಬೆಳೆಸುವ ಅಗತ್ಯವಿದ್ದು ಇದು ಮುಮದಿನ ನಮ್ಮ ತಲೆಮಾರಿಗೆ ಭದ್ರ ನೆಲೆ ನೀಡುವುದು ಎಂದು ಅವರು ತಿಳಿಸಿದರು.
ಕಟೀಲು ಶ್ರೀಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಉಪಸ್ಥಿತರಿದ್ದು ಮಾತನಾಡಿದರು. ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು, ಮಂಗಳೂರು ಶ್ರೀಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ನ ಆಶಾಜ್ಯೋತಿ ರೈ, ಸಾಮಾಜಿಕ ಮುಖಂಡೆ ಸುಲೋಚನಾ ಭಟ್, ವಿಹಿಂಪ ಮುಖಂಡ ಗೋಪಾಲ್ ಕುತ್ತಾರ್, ಅವಧಾನಿ ಸುಬ್ರಹ್ಮಣ್ಯ ಅವಧಾನಿ ಗುಂಡಿಬೈಲು, ನಣಗಖೂರು ಮಹಾ ನಗರಪಾಲಿಕಾ ಸದಸ್ಯ ಸುಧೀರ್ ಶೆಟ್ಟಿ, ಹರಿನಾರಾಯಣ ಮಯ್ಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ 200 ಪಾರಂಪರಿಕ ಭತ್ತದ ತಳಿಗಳ ಸಾವಯವ ಕೃಷಿಕ ಬೆಳ್ತಂಗಡಿಯ ಬಿ.ಕೆ.ದೇವರಾವ್ ಮಿತ್ತಬಾಗಿಲು ರವರನ್ನು ಅಭಿನಂದಿಸಿ ಗೌರವಿಸಲಾಯಿತು.
ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದಿನಕರ ಹೊಸಂಗಡಿ ವಂದಿಸಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.
ಹೈಲೈಟ್ಸ್:
ವಿಶ್ವಜಿತ್ ಸೋಮಯಾಗದ ಪೂರ್ವಭಾವಿಯಾಗಿ ಮೇ.20 ರಂದು ಉಪ್ಪಳದ ಶಾರದಾನಗರ ಸಮುದ್ರ ಕಿನಾರೆಯಲ್ಲಿ ವಿಷ್ಣು ಸಹಸ್ರನಾಮ ಅಭಿಯಾನ ಪ್ರಾರಂಭಗೊಂಡಿತ್ತು.ಎರಡನೇ ಕಾರ್ಯಕ್ರಮ ಸೋಮವಾರ ಸಹಸ್ರ ನೆಲ್ಲಿಗಿಡಗಳ ನೆಡುವ ಅಭಿಯಾನ ನಡೆದಿದ್ದು, ಮುಂದೆ ಮೂರನೇ ಕಾರ್ಯಕ್ರಮ ಸಹಸ್ರ ಅಕ್ಷ ಅಭಿಯಾನ(ಕಣ್ಣುಗಳ ದಾನ ಚಳವಳಿ) ನಡೆಯಲಿದೆ ಎಮದು ಕೊಂಡೆವೂರು ಶ್ರೀಗಳು ತಿಳಿಸಿದರು. ಜೊತೆಗೆ ಪ್ರಗತಿಪರ 200 ಭತ್ತದ ತಳಿ ಸಂರಕ್ಷಕ ಕೃಷಿಕ ಬಿ.ಕೆ. ದೇವರಾವ್ ಮಿತ್ತಬಾಗಿಲರ ಭತ್ತತಳಿಗಳ ಸಂರಕ್ಷಣಾ ಕಾರ್ಯದಲ್ಲಿ ಶ್ರೀಮಠ ಜೊತೆಗಿದೆ ಎಂದು ಘೋಷಿಸಿದರು.