ವನಿತಾ ನೀರೊಳಿಕೆ ಅವರ `ಪ್ರತಿಬಿಂಬ'ಕ್ಕೆ
ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ
ಕಾಸರಗೋಡು: ಯುವ ಕವಯಿತ್ರಿ ವನಿತಾ ನೀರೊಳಿಕೆ ಅವರ ಚೊಚ್ಚಲ ಕವನ ಸಂಕಲನ `ಪ್ರತಿಬಿಂಬ' 2016 ನೇ ಸಾಲಿನ ಕಾವ್ಯಮಾಣಿಕ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಜುಲೈ 1 ರಂದು ಬೆಳಗ್ಗೆ 10 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಕವಿ-ಕಾವ್ಯ ಸಂಭ್ರಮದಲ್ಲಿ ಶಾಸಕ ಪ್ರೀತಂ ಜೆ.ಗೌಡ ಮತ್ತು ಕ.ಸಾ.ಪ. ಜಿಲ್ಲಾಧ್ಯಕ್ಷ ನಾಯಕರ ಹಳ್ಳಿ ಮಂಜೇಗೌಡ ಪ್ರಶಸ್ತಿ ಪ್ರದಾನ ಮಾಡುವರು.
ಕುಳೂರು ಚಿನಾಲದ ದಿ.ನಾರಾಯಣ ಪೂಜಾರಿ - ಕಮಲ ದಂಪತಿ ಪುತ್ರಿ ವನಿತಾ ಅವರು ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ನ ನೌಕರ ಮನೋಜ್ ಕುಮಾರ್ ಅವರ ಪತ್ನಿ. ತೊಟ್ಟೆತ್ತೋಡಿ ವಾಣಿವಿಲಾಸ ಕಿರಿಯ ಪ್ರಾಥಮಿಕ ಶಾಲೆ, ಮೀಯಪದವು ವಿದ್ಯಾವರ್ಧಕ ಪ್ರೌಢ ಶಾಲೆ, ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು, ಕಾಸರಗೋಡು ಸರಕಾರಿ ಕಾಲೇಜು ಮೊದಲಾದೆಡೆಗಳಲ್ಲಿ ಶಿಕ್ಷಣ ಪೂತರ್ಿಗೊಳಿಸಿದ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೆಲವು ವರ್ಷ ಮಂಗಳೂರಿನಲ್ಲಿ ಮುಂಬಯಿ ಮೂಲದ ಖಾಸಗಿ ಆಥರ್ಿಕ ಸಂಸ್ಥೆಯಲ್ಲಿ ದುಡಿದಿದ್ದಾರೆ. ಅನಂತರ ಎರಡು ವರ್ಷಗಳ ಕಾಲ ಕುಂಬಳೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಿಕೆಯಾಗಿ ಕರ್ತವ್ಯ ನಿರ್ವಹಿಸಿದ್ದರು. 4 ವರ್ಷಗಳಿಂದ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ನ ಜಿಲ್ಲಾ ಸದಸ್ಯೆಯಾಗಿರುವ ವನಿತಾ ಅವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ.
ಮಂಗಳೂರಿನ ಆಕೃತಿ ಆಶಯ ಪ್ರಕಾಶನದ ಮೂಲಕ 2016 ರಲ್ಲಿ ಪ್ರಕಟವಾದ `ಪ್ರತಿಬಿಂಬ' ಕವನ ಸಂಕಲನವು ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವದಂದು ಬಿಡುಗಡೆಯಾಗಿತ್ತು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮುನ್ನುಡಿ ಬರೆದಿದ್ದಾರೆ. ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ಬೆನ್ನುಡಿಯ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.