HEALTH TIPS

No title

                 ಎಂಡೋ ಪಟ್ಟಿ  ತಯಾರಿ ಬಗ್ಗೆ  ಸರಕಾರದ ಸ್ಪಷ್ಟನೆ ಕೇಳಿದ ಹೈಕೋಟರ್್
     ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ದೊರಕುವ ಸವಲತ್ತುಗಳಿಗೆ ಅರ್ಹರಾದ ಸಂತ್ರಸ್ತರ ಪಟ್ಟಿಯನ್ನು  ತಯಾರಿಸುವಲ್ಲಿ  2017ರ ನವೆಂಬರ್ ತಿಂಗಳ ಬಳಿಕ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇರಳ ಹೈಕೋಟರ್್ ರಾಜ್ಯ ಸರಕಾರದಿಂದ ಸ್ಪಷ್ಟನೆ ಕೇಳಿದೆ.
   ಎಂಡೋಸಲ್ಪಾನ್ ಯಾದಿಯಲ್ಲಿ  ಒಳಗೊಂಡಿರುವ ಅನರ್ಹರನ್ನು  ಹೊರತುಪಡಿಸಿ ಆ ಪಟ್ಟಿಯನ್ನು  ನವೀಕರಿಸಬೇಕೆಂದು ಗಂಗಾಧರನ್ ನಾಯರ್ ಹೈಕೋಟರ್್ಗೆ ಅಜರ್ಿ ಸಲ್ಲಿಸಿದ್ದರು. ಅದನ್ನು  ಪರಿಶೀಲಿಸುವ ವೇಳೆ ನ್ಯಾಯಾಲಯವು ಸರಕಾರದಿಂದ ಈ ಸ್ಪಷ್ಟೀಕರಣ ಬಯಸಿದೆ.
   ಎಂಡೋ ಯಾದಿಯಿಂದ ಅನರ್ಹರನ್ನು  ಹೊರತುಪಡಿಸಲು ಕಾಸರಗೋಡು ಜಿಲ್ಲಾಧಿಕಾರಿಯವರು ಅಗತ್ಯದ ಕ್ರಮ ಕೈಗೊಳ್ಳುತ್ತಿದ್ದಾರೆಂದು ಕಳೆದ ನವೆಂಬರ್ನಲ್ಲಿ  ರಾಜ್ಯ ಸರಕಾರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ನಿಜವಾದ ಸಂತ್ರಸ್ತರನ್ನು  ಗುರುತಿಸುವ ಕ್ರಮಗಳು ಮುಂದುವರಿಯುತ್ತಿವೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದ  ಸರಕಾರವು, ಬಳಿಕ ಯಾವುದೇ ಕ್ರಮಗಳನ್ನು  ನಡೆಸಿಲ್ಲ.
    ಆರೋಪಗಳು ಮತ್ತು  ವಿಜಿಲೆನ್ಸ್  ವರದಿಯ ಆಧಾರದಲ್ಲಿ  ಸಂತ್ರಸ್ತರ ಯಾದಿ ನವೀಕರಿಸುವ ಪ್ರಕ್ರಿಯೆ ಆರಂಭಿಸಿದಾಗ ತಜ್ಞರ ಸಮಿತಿಯ ಮೂಲಕ ಅರ್ಹರನ್ನು  ಗುರುತಿಸುವಂತೆ 2017ನೇ ನವೆಂಬರ್ 18ರಂದು ನಿದರ್ೇಶ ನೀಡಲಾಗಿತ್ತೆಂದು ಸರಕಾರವು ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದಾವಿತ್ನಲ್ಲಿ  ತಿಳಿಸಿತ್ತು. ಅದಾದ ನಂತರ ಪಟ್ಟಿ  ತಯಾರಿಕೆಯ ಪ್ರಗತಿ ಎತ್ತ  ಸಾಗಿದೆ ಎಂದು ನ್ಯಾಯಾಲಯವು ಸರಕಾರವನ್ನು ಪ್ರಶ್ನಿಸಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries