ಪೆರ್ಲದಲ್ಲಿ 'ಹ ಹ! ಪೆರ್ಲ 2018' - ಹಲಸಿನ ಹಬ್ಬ
ಪೆರ್ಲ:ಕೇರಳದ ರಾಜ್ಯ ಹಣ್ಣು ಎಂದು ಕೆಲವು ತಿಂಗಳ ಹಿಂದೆಯಷ್ಟೇ ಘೋಷಿಸಲಾಗಿರುವ ಹಲಸಿನ ಹಣ್ಣಿನ ಮಹತ್ವ ತಿಳಿಯ ಪಡಿಸಲು, ತಳಿ ಸಂರಕ್ಷಣೆ, ಉದ್ಯೋಗ ಸಾಧ್ಯತೆ,ಹಲಸಿನ ಕಾಯಿ/ಹಣ್ಣು ಸಂಸ್ಕರಣೆ, ಹಲಸು ಕೃಷಿಗೆ ಪ್ರೋತ್ಸಾಹ ನೀಡುವ ಸಲುವಾಗಿ 'ಹ ಹ ಪೆರ್ಲ-2018' ಹಲಸಿನ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಜೂನ್ 10 ಭಾನುವಾರ ಪೆರ್ಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೆರ್ಲದ ಭಾರತಿ ಸದನದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ತನಕ ನಡೆಯುವ ಹಲಸಿನ ಹಬ್ಬಕ್ಕೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಶ್ರೀ ಶಂಕರ ಸೇವಾ ಸಮಿತಿ ಪೆರ್ಲ,ಅಕ್ಷಯ ಸೇವಾ ಕೂಟ ಪೆರ್ಲ ನೇತೃತ್ವ ನೀಡಲಿದ್ದು ಶ್ರೀ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವಿವಿಧ ತಂಡಗಳು,ಎಸ್ ಎನ್ ನೇಚರ್ ಕ್ಲಬ್ ಸತ್ಯ ನಾರಾಯಣ ಹೈಸ್ಕೂಲ್ ಪೆರ್ಲ, ರಕ್ಷಕ-ಶಿಕ್ಷಕ ಸಂಘ ಎಸ್ ಜಿ ಎ ಎಲ್ ಪಿ ಬೇಂಗಪದವು ಇದರ ಸಹಕಾರದಲ್ಲಿ ಹಲಸಿನ ಕಾಯಿ,ಹಣ್ಣಿನಿಂದ ಸ್ಥಳದಲ್ಲೆ ವೈವಿಧ್ಯಮಯ ಖಾದ್ಯ ತಿಂಡಿಗಳ ತಯಾರಿ ಹಾಗೂ ಮಾರಾಟ,ಹಲಸಿನ ಐಸ್ ಕ್ರೀಂ,ಮಂಚೂರಿ,ವೈವಿಧ್ಯಮಯ ಗೃಹ ಉತ್ಪನ್ನಗಳ, ಜೇನುಬಕ್ಕೆ , ಚಂದ್ರ ಹಲಸು ಮೊದಲಾದ ವೈವಿಧ್ಯಮಯ ಕಸಿ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಹಲಸಿನ ಜಾಗತಿಕ ರಾಯಭಾರಿ, ಬಹು ಮುಖ ಪ್ರತಿಭೆ ಶ್ರೀಪಡ್ರೆ ಅವರಿಂದ 'ಹಲಸು ಅಂದು ಇಂದು ಮುಂದು' ಅವಲೋಕನ ,
ಕೇಂದ್ರೀಯ ತೋಟಗಾರಿಕಾ ಬೆಳೆ ಉತ್ಪನ್ನಗಳ ಸಂಶೋಧನಾ ತರಬೇತಿ ಕೇಂದ್ರ ಕಾಸರಗೋಡು ಇದರ ಮುಖ್ಯ ತಾಂತ್ರಿಕ ಅಧಿಕಾರಿ ಸರಿತಾ ಹೆಗ್ಡೆ ಅವರಿಂದ ಸ್ಕ್ವಾಷ್,ಜೆಲ್ಲಿ,ನ್ಯೂಡಲ್ಸ್ ತಯಾರಿ ತರಬೇತಿ, ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ ವಿಟ್ಲ ಇವರಿಂದ 'ನಮ್ಮದೇ ಆದ ಉತ್ತಮ ತಳಿ ಇದ್ದರೆ ಉಳಿಸಬೇಕೇ?-ಕಸಿ ಕಟ್ಟುವ ಗುಟ್ಟು ಪ್ರಾತ್ಯಕ್ಷಿಕೆ, ಹಲಸಿನ ಗಾತ್ರ,ಭಾರ, ಖ್ಯಾದ್ಯ ರುಚಿ,ಪರಿಮಳ ಮೊದಲಾಗಿ ಹ ಹ! ವಿವಿಧ ಸ್ಪಧರ್ೆಗಳು ನಡೆಯಲಿವೆ