ಡಾ. ಎಂ ರಾಮ ಅವರಿಗೆ ಭಾಷಾಶಾಸ್ತ್ರ ಪುರಸ್ಕಾರ
ಉಪ್ಪಳ: ಇಂಟರ್ ನೇಶನಲ್ ಸ್ಕೂಲ್ ಆಫ್ ಡ್ರವೀಡಿಯನ್ ಲಿಂಗ್ವಿಸ್ಟಿಕ್ ಅಸೋಸಿಯೇಶನ್ ಕೊಡಮಾಡುವ 2018ರ ಭಾಷಾಶಾಸ್ತ್ರ ಪುರಸ್ಕಾರಕ್ಕೆ ಬಹುಭಾಷಾ ವಿದ್ವಾಂಸ, ಭಾಷಾಂತರಗಾರ ಹಾಗೂ ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಡಾ.ಎಂ ರಾಮ ಅವರು ಭಾಜನರಾಗಿದ್ದಾರೆ. ತುಳುಭಾಷೆಯ ಕುರಿತು ಇವರು ರಚಿಸಿದ ಮಹಾಪ್ರಬಂಧಕ್ಕೆ ಈ ಪುರಸ್ಕಾರವು ಲಭಿಸಿದೆ. ಪ್ರಶಸ್ತಿಯನ್ನು ಜೂನ್ 21,22 ಮತ್ತು 23 ರಂದು ಕೊಲ್ಕೊತ್ತಾದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತರ್ ದೇಶೀಯ ಭಾಷಾಶಾಸ್ತ್ರ ಸಮ್ಮೇಳನದಲ್ಲಿ ಡಾ. ಎಂ. ರಾಮ ಅವರಿಗೆ ಪುರಸ್ಕಾರವನ್ನು ನೀಡಲಾಗುವುದು. ಡಾ.ಎಂ.ರಾಮ ಅವರು ಪೈವಳಿಕೆ ಸಮೀಪದ ಕುರುಡಪದವು ಮೈರುಗ ನಿವಾಸಿಯಾಗಿದ್ದಾರೆ.