HEALTH TIPS

No title

           ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್ ಡಿ ಕಡ್ಡಾಯ: ಪ್ರಕಾಶ್ ಜಾವಡೆಕರ್
     ನವದೆಹಲಿ: 2021ರಿಂದ ವಿಶ್ವವಿದ್ಯಾಲಯ ಅಥವಾ ಕಾಲೇಜ್ ಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಪಿಎಚ್ ಡಿ ಕಡ್ಡಾಯ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಅವರು ಬುಧವಾರ ತಿಳಿಸಿದ್ದಾರೆ.
      ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ ವಿಶ್ವವಿದ್ಯಾಲಯ ಅಥವಾ ಪದವಿ ಕಾಲೇಜ್ ಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಸ್ನಾತಕೋತ್ತರ ಪದವಿ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್ ಇಟಿ) ಕಡ್ಡಾಯವಾಗಿದೆ.
    ಕೇಂದ್ರ ಸಕರ್ಾರ ಕಾಲೇಜು ಮಟ್ಟದಲ್ಲಿ ಶಿಕ್ಷಕರ ಕಾರ್ಯಕ್ಷಮತೆಯನ್ನು ಅಳೆಯಲು ಬಳಸುತ್ತಿದ್ದ ಶೈಕ್ಷಣಿಕ ಕಾರ್ಯಕ್ಷಮತೆಯ ಸೂಚ್ಯಂಕವನ್ನು ದೂರ ಮಾಡಿದ್ದು, ಅಕಾಡೆಮಿಕ್ ಪಫರ್ಾಮರ್ೆನ್ಸ್ ಇಂಡೆಕ್ಸ್ ಟೂಲ್ ಬದಲಾಗಿ, ಯೂನಿವಸರ್ಿಟಿ ಗ್ರಾಂಟ್ಸ್ ಕಮಿಷನ್ ಹೊಸ, ಸರಳೀಕೃತ "ಶಿಕ್ಷಕರ ಮೌಲ್ಯಮಾಪನ ಶ್ರೇಣಿಯನ್ನು ಪರಿಚಯಿಸಿದೆ ಎಂದು ಜಾವಡೆಕರ್ ತಿಳಿಸಿದ್ದಾರೆ.
ಶೈಕ್ಷಣಿಕ ನಿಯತಕಾಲಿಕಗಳಲ್ಲಿನ ಸಂಶೋಧನಾ ಕಾರ್ಯದ ಪ್ರಕಟಣೆ ಬಡ್ತಿಗೆ  ಮಾನದಂಡವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
    ಯುಜಿಸಿ ದೇಶದ ಸುಮಾರು 800 ವಿಶ್ವವಿದ್ಯಾಲಯಗಳು ಹಾಗೂ 40 ಸಾವಿರ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಏಕರೂಪದ ನಿಯಮಾವಳಿಗಳನ್ನು ರೂಪಿಸಿದ್ದು, ಕೇಂದ್ರ ಸಕರ್ಾರದ ಇದಕ್ಕೂ ಅಂಗೀಕಾರ ನೀಡುವ ನಿರೀಕ್ಷೆಯಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries