ಗ್ಯಾಸ್ ಸಿಲಿಂಡರ್ ಹೇರಿ ತೆರಳುತ್ತಿದ್ದ ಲಾರಿ ಕಾರಿಗೆ ಡಿಕ್ಕಿ
ಕಾರು ಚಲಾಯಿಸುತ್ತಿದ್ದ ಯುವಕ ಮೃತ್ಯು
ಕಾಸರಗೋಡು: ಗ್ಯಾಸ್ ಸಿಲಿಂಡರ್ ಹೇರಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಕಾರು ಚಾಲಕ ತಳಂಗರೆ ನಿವಾಸಿ ಪಡುವನಡ್ಕ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮುಹಮ್ಮದ್ ಕುಂಞಯವರ ಪುತ್ರ ನಿಸಾಮುದ್ದೀನ್(20) ಮೃತಪಟ್ಟಿದ್ದಾರೆ. ವಿದ್ಯಾನಗರದಲ್ಲಿ ಇಂದು ಬೆಳಿಗ್ಗೆ ನಡೆದ ದುರ್ಘಟನೆಯಲ್ಲಿ ಗಂಭೀರಗಾಯಗೊಂಡ ಕಾರುಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ನಿಸಾಮುದ್ದೀನನ ಒಳ ಅಂಗಾಂಗಗಳಲ್ಲಿ ತೀವ್ರ ರಕ್ತಸ್ರಾವವಾದ ಕಾರಣ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯಲ್ಲಿ ಲಾರಿ ಚಾಲಕ ಪುತ್ತೂರಿನ ರಾಜು(61) ಎಂಬವರು ಗಂಭೀರ ಗಾಯಗೊಂಡಿದ್ದು ನುಳ್ಳಿಪ್ಪಾಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಲಾರಿಯು ಅಣಂಗೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರಣ ವಿದ್ಯಾನಗರಕ್ಕೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ನಂತರ ಹಿಂದೆ ಸಂಚರಿಸುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ಬದಿ ನಿಲ್ಲಿಸಲಾಗಿದ್ದ ಕಂಟೈನರ್ ಲಾರಿಗೆ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಡಿಕ್ಕಿ ಹೊಡೆದು ರಸ್ತೆಗುರುಳಿದೆ ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ. ಲಾರಿಯಲ್ಲಿದ್ದ ಸಿಲಿಂಡರ್ಗಳನ್ನು ಭತರ್ಿಯಾಗಿಸಲು ಕಾಞಂಗಾಡಿನಿಂದ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಸಿಲಿಂಡರ್ಗಳು ಖಾಲಿಯಾದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ.ಮೃತ ನಿಸಾಮುದ್ದೀನ್ ತಾಯಿ ಮಿಸ್ರಿಯಾ, ನಾಲ್ಕು ಮಂದಿ ಸಹೋದರರು, ಸಹೋದರಿಯರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.