HEALTH TIPS

No title

                     ರಷ್ಯಾದಲ್ಲಿ ಫಿಫಾ ವಿಶ್ವಕಪ್ ಗೆ ಅದ್ಧೂರಿ ಚಾಲನೆ
     ಮಾಸ್ಕೋ: ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ  21ನೇ ಫಿಫಾ ಫುಟ್ ಬಾಲ್ ವಿಶ್ವಕಪ್ ಟೂನರ್ಿಗೆ ಗುರುವಾರ ಅದ್ಧೂರಿ ಚಾಲನೆ ಸಿಕ್ಕಿದೆ.
 ಗುರುವಾರ ರಾತ್ರಿ 8.30 ಕ್ಕೆ  ಮಾಸ್ಕೊದ ಲುಜ್ನಿಕಿ ಕ್ರೀಡಾಂಗಣದಲ್ಲಿ 80 ಸಾವಿರ ಜನರ ಸಮ್ಮುಖದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧಿಕೃತವಾಗಿ ಫಿಫಾ ವಿಶ್ವಕಪ್ ಗೆ ಚಾಲನೆ ನೀಡಿದರು.
     ವಿಶ್ವದ ಅತ್ಯಂತ ಮಹತ್ವದ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ನನ್ನ ಶುಭಾಶಯಗಳು ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದ ಖ್ಯಾತ ರೂಪದಶರ್ಿ ನಥಾಲಿಯಾ ಅವರೊಂದಿಗೆ 2010ರ ಫಿಫಾ ವಿಶ್ವಕಪ್ ವಿಜೇತ ಸ್ಪೇನ್ ತಂಡದ ನಾಯಕ ಐಕರ್ ಕ್ಯಾಸಿಲಾಸ್ ವಿಶ್ವಕಪ್ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದು ಪ್ರೇಕ್ಷಕರಿಗೆ ಪ್ರದಶರ್ಿಸಿದರು.
   ಬಳಿಕ ಬ್ರಿಟಿಷ್ ಪಾಪ್ ಸ್ಟಾರ್ ರಾಬಿ ವಿಲಿಯಮ್ಸ್ ಮತ್ತು ರಷ್ಯಾನ್ ಸೊಪ್ರಾನೊ ಐಡಾ ಅವರು ಸುಮಾರು 80,000 ಅಭಿಮಾನಿಗಳಿರುವ ಫುಟ್ಬಾಲ್ ಅರೆನಾದಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಫುಟ್ ಬಾಲ್ ಅಭಿಮಾನಿಗಳನ್ನು ರಂಜಿಸಿದರು.
    ಮೊದಲ ಪಂದ್ಯದಲ್ಲಿ ಅತಿಥೇಯ ರಷ್ಯಾ, ಸೌದಿ ಅರೇಬಿಯಾವನ್ನು ಎದುರಿಸಿದ್ದು, ಒಟ್ಟು 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಫಿಫಾ ವಿಶ್ವಕಪ್ ಪಂದ್ಯಗಳು ರಷ್ಯಾದ ಮಾಸ್ಕೋ, ಕಜನ್, ಸಮರ, ಸೇಂಟ್ ಪಿಟಸರ್್ಬಗರ್್ ಸೇರಿದಂತೆ ಒಟ್ಟು 16 ಕ್ರೀಡಾಂಗಣದಲ್ಲಿ ನಡೆಯಲಿದ್ದು, ಜುಲೈ 15 ರಂದು ಫೈನಲ್ ಪಂದ್ಯ ನಡೆಯಲಿದೆ.
                  ಆರಂಭಿಕ ಪಂದ್ಯದಲ್ಲಿ ಸೌದಿ ವಿರುದ್ಧ ಆತಿಥೇಯ ರಷ್ಯಾ ಗೆಲುವು
    ಮಾಸ್ಕೋ: ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿರುವ ರಷ್ಯಾ, ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 5-0 ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ  ಶುಭಾರಂಭ ಮಾಡಿದೆ.
    ಉಭಯ ತಂಡಗಳು ಆರಂಭದಲ್ಲಿ ಆಕ್ರಮಣಕಾರಿ ಆಟ ಪ್ರದಶರ್ಿಸಿದರೂ ರಷ್ಯಾ 12ನೇ ನಿಮಿಷದಲ್ಲಿ ಗೋಲು ಸಿಡಿಸಿ ಖಾತೆ ತೆರೆಯಿತು. ಯೂರಿ ಗಝಿನ್ಸ್ಕೈ ಮೊದಲ ಗೊಲು ಸಿಡಿಸಿ ರಷ್ಯಾಗೆ ಮುನ್ನಡೆ ತಂದುಕೊಟ್ಟರು.
    ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಸೌದಿ ಅರೇಬಿಯಾ ತಿರುಗೇಟು ನೀಡೋ ಪ್ರಯತ್ನ ಮಾಡಿತು. 30ನೇ ನಿಮಿಷದಲ್ಲಿ ಸೌದಿ ಅರೇಬಿಯಾ ತಂಡದ ಸಲ್ಮಾನ್ ಅಲ್ ಫರಾಜ್ ಗೋಲು ಸಿಡಿಸೋ ಅತ್ಯುತ್ತಮ ಅವಕಾಶವನ್ನ ಕೈಚೆಲ್ಲಿದರು.
    ಗೋಲಿನ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ರಷ್ಯಾ, ತವರಿನ ಅಭಿಮಾನಿಗಳಿಗೆ ಮತ್ತೊಂದು ಗೋಲಿನ ಸಿಹಿ ನೀಡಿತು. 43ನೇ ನಿಮಿಷದಲ್ಲಿ ಡೆನಿಸ್ ಚೆಶರ್ೆವ್ ಗೋಲು ಸಿಡಿಸೋ ಮೂಲಕ ರಷ್ಯಾಗೆ 2-0 ಮುನ್ನಡೆ ತಂದುಕೊಟ್ಟರು.
    ದ್ವಿತಿಯಾರ್ಧದಲ್ಲಿ ಸೌದಿ ಅರೇಬಿಯಾ ಗೋಲಿಗಾಗಿ ಪರದಾಡಿತು. ಆದರೆ ರಷ್ಯಾ ಭರ್ಜರಿ ಪ್ರದರ್ಶನವನ್ನ ಮುಂದುವರಿಸಿತು. 71ನೇ ನಿಮಿಷದಲ್ಲಿ ರಷ್ಯಾದ ಆರ್ಟಮ್ ಡಿಜ್ಯೂಬಾ 3ನೇ ಗೋಲು ಸಿಡಿಸಿ ಸಂಭ್ರಮಿಸಿದರು.
   90ನೇ ನಿಮಿಷದಲ್ಲಿ ಮತ್ತೆ ಅಬ್ಬರಿಸಿದ ಡೆನಿಸ್ ಚೆಶರ್ೆವ್ 2ನೇ ಗೋಲು ಬಾರಿಸಿದರು. ಇಂಜುರಿ ಟೈಮ್ ನಲ್ಲಿ ರಷ್ಯಾ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. ಇನ್ನೇನು ಪಂದ್ಯ ಮುಗಿಯಿತು ಅನ್ನುವಷ್ಟರಲ್ಲೇ ರಷ್ಯಾದ ಅಲೆಕ್ಸಾಂಡರ್ ಗೋಲ್ವಿನ್ ಗೋಲು ಸಿಡಿಸಿ ರಷ್ಯಾಗೆ 5-0 ಮುನ್ನಡೆ ತಂದುಕೊಟ್ಟರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries