HEALTH TIPS

No title

               ಕೃಷಿಗೆ  ವರವಾದ  ಮಳೆ
   ಕಾಸರಗೋಡು: ಜಿಲ್ಲೆಯಲ್ಲಿ ಈ ವರ್ಷ 234.3 ಮಿಲಿ ಮೀಟರ್ ಬೇಸಿಗೆ ಮಳೆ ಸುರಿದಿದೆ. ಇದು ಸರಾಸರಿ ಲಭ್ಯತೆಗಿಂತ ಶೇ. 38 ಅಧಿಕವಾಗಿದೆ ಎಂದು ಹವಾಮಾನ ನಿರೀಕ್ಷಣಾ ವಿಭಾಗದ ಅಂಕಿಅಂಶ ತಿಳಿಸಿದೆ.
    ಈ ಬಾರಿಯ ಬೇಸಿಗೆ ಮಳೆ ಭತ್ತ ಕೃಷಿಗೆ ಅತಿ ಸೂಕ್ತವಾದ ರೀತಿಯಲ್ಲಿ ಸುರಿದಿದ್ದು, ಕೃಷಿಕರಿಗೆ ವರವಾಗಿ ಪರಿಣಮಿಸಿದೆ. ಭತ್ತ ಕೃಷಿಯ ಒಂದನೇ ಬೆಳೆಯ ನೇಜಿ ಬೆಳೆಯಲು ಪೂರಕವಾಗಿ ಮಳೆ ಲಭಿಸಿದೆ. ಉತ್ತಮ ಮುಂಗಾರು ಭತ್ತ ಕೃಷಿಯ ಒಂದನೇ ಬೆಳೆ ನಿರೀಕ್ಷೆಗಿಂತ ಅಧಿಕ ಫಸಲು ನೀಡಲಿದೆ ಎಂದು ಕೃಷಿ ವಲಯ ತಜ್ಞರು ಹೇಳುತ್ತಿದ್ದಾರೆ. ಎರಡನೇ ಬೆಳೆಗೂ ನಿಖರವಾದ ಸಮಯದಲ್ಲಿ ಬಿತ್ತನೆ ನಡೆಸಬಹುದಾಗಿದೆ.
   ಅಕ್ಟೋಬರ್ ಮೊದಲ ವಾರದಲ್ಲೇ ಎರಡನೇ ಬೆಳೆಗಾಗಿ ಕೃಷಿಕರು ಗದ್ದೆಗಿಳಿಯಬಹುದಾಗಿದೆ. ಪಿಲಿಕ್ಕೋಡು ಪ್ರಾದೇಶಿಕ ಸಂಶೋಧನಾ ಕೇಂದ್ರದ ಲೆಕ್ಕಾಚಾರದಂತೆ ಸರಾಸರಿಗಿಂತ ಶೇ. 16 ಅಧಿಕ ಬೇಸಿಗೆ ಮಳೆ ಈ ಬಾರಿ ಲಭಿಸಿದೆ. ಹವಾಮಾನ ನಿರೀಕ್ಷಣಾ ವಿಭಾಗದ ಪ್ರಕಾರ ಸರಾಸರಿ ಬೇಸಿಗೆ ಮಳೆ 180.2 ಮಿಲಿ ಮೀಟರ್ ಆಗಿದೆ. ಪಿಲಿಕ್ಕೋಡ್ ಸಂಶೋಧನಾ ಕೇಂದ್ರದ ಪ್ರಕಾರ ಸರಾಸರಿ ಬೇಸಿಗೆ ಮಳೆ ಲಭ್ಯತೆ 201.6 ಮಿಲಿಮೀಟರ್ ಆಗಿದೆ.
   ಕಳೆದ ಮೂವತ್ತು ವರ್ಷಗಳ ಬೇಸಿಗೆ ಮಳೆಯ ಪ್ರಮಾಣವನ್ನು ಅನುಸರಿಸಿ ಸರಾಸರಿ ಲೆಕ್ಕ ಮಾಡಲಾಗುತ್ತದೆ. ಮಾಚರ್್, ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮಳೆಯನ್ನು ಬೇಸಿಗೆ ಮಳೆ ಎಂದು ಪರಿಗಣಿಸಲಾಗುತ್ತದೆ. 
    ಮೇ 9 ಹಾಗೂ ಮೇ 29ರಂದು ಅತ್ಯಧಿಕ ಬೇಸಿಗೆ ಮಳೆಯಾಗಿದೆ. ಮೇ 9ರಂದು 40.6 ಮಿಲಿಮೀಟರ್, ಮೇ 29ರಂದು 45 ಮಿಲಿಮೀಟರ್ ಬೇಸಿಗೆ ಮಳೆಯಾಗಿದೆ. ಕಳೆದ ವರ್ಷ ಜಿಲ್ಲೆಗೆ 87.3 ಮಿಲಿಮೀಟರ್ ಬೇಸಿಗೆ ಮಳೆ ಸುರಿದಿದೆ. ಪಿಲಿಕ್ಕೋಡ್ ಸಂಶೋಧನಾ ಕೇಂದ್ರದ ಲೆಕ್ಕಾಚಾರದಂತೆ ಈ ಬಾರಿ ಕಳೆದ ವರ್ಷಕ್ಕಿಂತ ಶೇ. 68 ಅಧಿಕ ಬೇಸಿಗೆ ಮಳೆ ಲಭಿಸಿದೆ ಎಂದು ಸಹಾಯಕ ಪ್ರಾಧ್ಯಾಪಕ ಪಿ.ಕೆ. ರತೀಶ್ ಹೇಳಿದ್ದಾರೆ.
   ಕುಡಿಯುವ ನೀರು: ಬೇಸಿಗೆ ಮಳೆ ಚೆನ್ನಾಗಿ ಆಗಿರುವುದರಿಂದ ಕುಡಿಯುವ ನೀರಿನ ಕೊರತೆ ಹೆಚ್ಚ್ಚಾಗಿ ಕಾಡಲಿಲ್ಲ. ಹಿಂದಿನ್ಥ ವರ್ಷಗಳಂತೆ ಟ್ಯಾಂಕರ್ಗಳಲ್ಲಿ ಬರುವ ಕುಡಿಯುವ ನೀರಿಗಾಗಿ ಪಾತ್ರೆಗಳನ್ನು ಹಿಡಿದು ಕಾದು ನಿಲ್ಲುವ ದೃಶ್ಯಗಳು ಕಂಡುಬರಲಿಲ್ಲ. ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ಮಾತ್ರ ಕುಡಿಯುವ ನೀರು ವಿತರಿಸಬೇಕಾಯಿತು. ಜಿಲ್ಲಾಡಳಿತದ ನಿಧಿಗೆ ಕುಡಿಯುವ ನೀರು ವಿತರಣೆಗಾಗಿ ಸರಕಾರ ಒಂದು ಕೋಟಿ ರೂ. ನೀಡಿತ್ತು. ಆದರೆ ಈ ಬಾರಿ ಅದನ್ನು ವಿನಿಯೋಗಿಸಬೇಕಾದ ಪರಿಸ್ಥಿತಿ ನಿಮರ್ಾಣಗೊಂಡಿಲ್ಲ. ಕೆಲವೇ ಮನೆಗಳ ಬಾವಿಗಳು ಬತ್ತಿವೆ.
   ಸಿಡಿಲು-ಮಿಂಚಿನ ಅಬ್ಬರ: ಈ ಬಾರಿ ಸಿಡಿಲು-ಮಿಂಚಿನ ಅಬ್ಬರಕ್ಕೆ ಉತ್ತರ ಭಾರತದ ಅಧಿಕ ಉಷ್ಣಾಂಶ ಕಾರಣವಾಗಿದೆ ಎಂದು ಹವಾಮಾನ ನಿರೀಕ್ಷಣಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಿದಾಗ ವಾತಾವರಣದಲ್ಲಿನ ವಾಯು ಮೇಲಕ್ಕೆ ಹೋಗುತ್ತಿದ್ದು, ಈ ಸಂದರ್ಭ ಬಲವಾದ ಗಾಳಿ ಭೂಮಿಯಲ್ಲಿ ಬೀಸುತ್ತದೆ. ಈ ಗಾಳಿ ಕೇರಳ ಮೊದಲಾದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೀಸಿದೆ. ಬಲವಾಗಿ ಬೀಸುವ ಗಾಳಿಯಲ್ಲಿ ಮೋಡಗಳು ಅಡಗಿರುತ್ತವೆ. ಭೂಮಿಯಲ್ಲಿ ಬೀಸುವ ಗಾಳಿಯೊಳಗಿನ ಮೋಡ್ಥಗಳಿಂದ ಭೂಮಿಗೆ ವಿದ್ಯುತ್ಶಕ್ತಿ ಪ್ರವಹಿಸುತ್ತದೆ. ಇದು ಸಿಡಿಲು-ಮಿಂಚು ಶಕ್ತಿಯುತಗೊಳ್ಳಲು ಕಾರಣವಾಗುತ್ತದೆ ಎಂದು ಹವಾಮಾನ ನಿರೀಕ್ಷಣಾ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದಾರೆ.
   ನೋಡಲ್ ಅಧಿಕಾರಿ: ಮುಂಗಾರು ಮಳೆ ಹಾನಿ ತಿಳಿಸಲು, ಮಾಹಿತಿಗಳನ್ನು ಸಂಗ್ರಹಿಸಲು ಆಯಾ ಇಲಾಖೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾ ಗುವುದು. ಜಿಲ್ಲಾಧಿಕಾರಿ ಕೆ. ಜೀವನ್ಬಾಬು ಅವರ ನಿದರ್ೇಶನದಂತೆ ಈ ತೀಮರ್ಾನ ಕೈಗೊಳ್ಳಲಾಗಿದೆ.
   ಮುಂಗಾರು ಮುಂಜಾಗ್ರತೆಗಳು: ಮುಂಗಾರು ಮಳೆ ಪೂರ್ವಭಾವಿಯಾಗಿ ಮುಂಜಾಗ್ರತೆಗಳನ್ನು ತೆಗೆದು ಕೊಳ್ಳಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಮೂವತ್ತು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತೀಮರ್ಾನಿಸಲಾಯಿತು. ಜಿಲ್ಲೆಯ ತಹಸೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.
      ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ತೀಮರ್ಾನಿಸಲಾಗಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇದರ ಉಸ್ತುವಾರಿ ನೀಡಲಾಗಿದೆ.
   ಡ್ರೈನೇಜ್ ಸ್ವಚ್ಛತೆ ಮಾಡಲು, ರಸ್ತೆ ಬದಿ ನೀರು ಕಟ್ಟಿ ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಶಾಲಾ ಕಟ್ಟಡಗಳ ಸುರಕ್ಷತೆ ಬಗ್ಗೆ ಖಾತರಿಪಡಿ ಸಲಿದ್ದು, ಶಿಕ್ಷಣ ಸಹಾಯಕ ನಿದರ್ೇಶಕರಿಗೆ ಇದರ ಪೂರ್ಣ ಹೊಣೆಗಾರಿಕೆ ನೀಡಲಾಗಿದೆ.
   ಮೀನು ಕಾಮರ್ಿಕರ ಸುರಕ್ಷತೆ ಪರಿಗಣಿಸಿ ಪ್ರತ್ಯೇಕ ಬೋಟ್ ವ್ಯವಸ್ಥೆ ಮಾಡಲಾಗುವುದು. ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯದ ಔಷಧ ಖಾತರಿಪಡಿಸಲು ತೀಮರ್ಾನಿಸಲಾಗಿದ್ದು, ಇದರ ಪೂರ್ಣ ಹೊಣೆಗಾರಿಕೆ ಜಿಲ್ಲಾ ವೈದ್ಯಾಧಿಕಾರಿಗೆ ನೀಡಲಾಗಿದೆ. ಮಂಗಳೂರಿನ ಆಸ್ಪತ್ರೆಗಳ ಪಿಆರ್ಒಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಲಿದ್ದು, ಗಂಭೀರಾವಸ್ಥೆಯಲ್ಲಿರುವ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲು ಪಿಆರ್ಒಗಳ ಜತೆಗೆ ಮಾತನಾಡಲಾಗುವುದು. ಇದರ ಹೊಣೆಗಾರಿಕೆ ಡಿಎಂಒಗಳು ವಹಿಸಲಿದ್ದಾರೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries