ಮಲಯಾಳ ಕಲಿಕೆ ಕಡ್ಡಾಯ : ಕೇರಳ ಸರಕಾರದ ಮೇಲೆ ಒತ್ತಡ ಹೇರಲು
ಕನ್ನಡ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ ಧರಣಿ
ಕಾಸರಗೋಡು: ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಕೇರಳ ಸರಕಾರದ ನೀತಿಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟದ ಮುಂದಿನ ಹೆಜ್ಜೆ ಎಂಬಂತೆ ಜುಲೈ 25 ರಂದು ಬೆಂಗಳೂರಿನ ಗಾಂಧೀ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ಹೂಡಲು ತೀಮರ್ಾನಿಸಿದೆ.
ಬೆಂಗಳೂರಿನಲ್ಲಿ ಧರಣಿ ಹೂಡುವ ಮೂಲಕ ಕನರ್ಾಟಕ ಸರಕಾರದ ಗಮನ ಸೆಳೆದು ಕೇರಳ ಸರಕಾರದೊಂದಿಗೆ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳ ಕಡ್ಡಾಯ ಹೇರಿಕೆ ನೀತಿಯಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸುವುದು ಮುಖ್ಯ ಉದ್ದೇಶವಾಗಿದೆ.
ಧರಣಿ ಸತ್ಯಾಗ್ರಹಕ್ಕೆ ಬೆಂಗಳೂರಿನಲ್ಲಿರುವ ಕಾಸರಗೋಡಿನ ನಿವಾಸಿಗಳು, ಸಂಘಸಂಸ್ಥೆಗಳು, ಬೆಂಗಳೂರಿನ ಕನ್ನಡ ಪರ ಸಂಘ ಸಂಸ್ಥೆಗಳ ಬೆಂಬಲವನ್ನು ಪಡೆದು ಅವರೂ ಧರಣಿಯಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗುವುದು.
ಕೇರಳ ಸರಕಾರದ ಭಾಷಾ ನೀತಿಯನ್ನು ಪ್ರತಿಭಟಿಸಿ ನಡೆಸುತ್ತಿರುವ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದ್ದು, ಜುಲೈ 5 ರಂದು ಸಾವಿರಾರು ಮಂದಿ ಸಹಿ ಹಾಕಿರುವ ಬೇಡಿಕೆಗಳನ್ನು ಕೇರಳ ಸರಕಾರಕ್ಕೆ, ಮುಖ್ಯಮಂತ್ರಿಗೆ, ಜಿಲ್ಲಾಧಿಕಾರಿಗೆ, ಉಸ್ತುವಾರಿ ಸಚಿವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು.
ಇದೇ ವೇಳೆ ಕಾಸರಗೋಡಿನ ಗ್ರಾಮ ಪಂಚಾಯತುಗಳು, ಬ್ಲಾಕ್ ಪಂಚಾಯತುಗಳು, ನಗರಸಭೆ, ಜಿಲ್ಲಾ ಪಂಚಾಯತ್ಗಳ ಜನಪ್ರತಿನಿಧಿಗಳ ಸಭೆಯನ್ನು ಕರೆದು ಚಚರ್ಿಸಲು ತೀಮರ್ಾನಿಸಲಾಗಿದೆ.
ಬೀರಂತಬೈಲ್ನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ತಾರಾನಾಥ ಮಧೂರು, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ಸತೀಶ್ ಮಾಸ್ಟರ್ ಕೂಡ್ಲು, ಪ್ರೊ.ಎ.ಶ್ರೀನಾಥ್, ಪ್ರದೀಪ್, ವಿ.ಬಿ.ಕುಳಮರ್ವ, ವಿಶ್ವನಾಥ ರಾವ್, ವಿಶಾಲಾಕ್ಷ ಪುತ್ರಕಳ, ಡಾ.ಯು.ಮಹೇಶ್ವರಿ, ಶ್ಯಾಮ್ ಪ್ರಸಾದ್, ಬಾಲಕೃಷ್ಣ ಅಗ್ಗಿತ್ತಾಯ, ಸತೀಶ್ ಕೂಡ್ಲು, ಕೆ.ವಾಸುದೇವ ಮೊದಲಾದವರು ಮಾತನಾಡಿದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.